ಪ್ರಧಾನಿ ನರೇಂದ್ರ ಮೋದಿ-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  
ವಿದೇಶ

ಮೋದಿ ಬಗ್ಗೆ ಮೃದುಧೋರಣೆ: ಭಾರತದೊಂದಿಗೆ ಅಮೆರಿಕ ಶೀಘ್ರದಲ್ಲೇ ಪ್ರಮುಖ ವ್ಯಾಪಾರ ಒಪ್ಪಂದ; ಸುಂಕ ಜಾರಿ ಗಡುವು ಆಗಸ್ಟ್ 1ರವರೆಗೂ ವಿಸ್ತರಣೆ- ಟ್ರಂಪ್

ಬಹುತೇಕ ದೇಶಗಳ ಜೊತೆ ಮಾತುಕತೆ ಅಂತಿಮ ಹಂತಕ್ಕೆ ಬಂದಿದೆಯಾದರೂ, ಕೆಲವೊಂದು ವಿಷಯಗಳ ಕುರಿತು ಭಿನ್ನಾಭಿಪ್ರಾಯ ಹಾಗೆಯೇ ಉಳಿದುಕೊಂಡಿದೆ.

ನವದೆಹಲಿ: ಭಾರತ ಸೇರಿ ಅನ್ಯ ರಾಷ್ಟ್ರಗಳು ತಮ್ಮ ಮೇಲೆ ವಿಧಿಸಿದ ತೆರಿಗೆಗೆ ಪ್ರತಿಯಾಗಿ ಆ ದೇಶಗಳು ಮೇಲೂ ಭಾರೀ ತೆರಿಗೆ ಹೇರುವುದಾಗಿ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು, ತೆರಿಗೆಗೆ ಸಂಬಂಧಿಸಿದ ಒಪ್ಪಂದ ಮಾಡಿಕೊಳ್ಳಲು ಆ.1ರವರೆಗೆ ಗಡುವು ವಿಸ್ತರಿಸಿದ್ದಾರೆ.

ವಿದೇಶಗಳು ಅಮೆರಿಕದ ಉತ್ಪನ್ನಗಳ ಮೇಲೆ ಭಾರೀ ತೆರಿಗೆ ಹೇರುತ್ತದೆ ಎಂದು ಆರೋಪಿಸಿದ್ದ ಅಧ್ಯಕ್ಷ ಟ್ರಂಪ್ ಇದಕ್ಕೆ ಪ್ರತಿಯಾಗಿ ಆಯಾ ದೇಶಗಳ ಮೇಲೆ ಪ್ರತ್ಯೇಕವಾದ ಪ್ರತಿ ತೆರಿಗೆ ಹೇರುವ ನಿರ್ಧಾರವನ್ನು ಕಳೆದ ಏ.2ರಂದು ಪ್ರಕಟಿಸಿದ್ದರು. ಅದರನ್ವಯ ಭಾರತದ ಮೇಲೆ ಶೇ.26ರಷ್ಟು ಪ್ರತಿ ತೆರಿಗೆ ಘೋಷಣೆಯಾಗಿತ್ತು.

ಆದರೆ, ಬಳಿಕ ತಮ್ಮ ಧೋರಣೆಯಲ್ಲಿ ಬದಲಾವಣೆ ಮಾಡಿದ್ದ ಟ್ರಂಪ್, ಈ ಪ್ರತಿ ತೆರಿಗೆ ತಪ್ಪಿಸಿಕೊಳ್ಳಲು ಎಲ್ಲಾ ದೇಶಗಳಿಗೂ ಅಮೆರಿಕದೊಂದಿಗೆ ಹೊಸ ವ್ಯಾಪಾರ ಒಪ್ಪಂದಕ್ಕೆ ಅವಕಾಶ ಕಲ್ಪಿಸಿದ್ದರು. ಅದರನ್ವಯ ಪ್ರತಿ ತೆರಿಗೆ ಜಾರಿ ದಿನಾಂಕ ಜು.9ಕ್ಕೆ ಮುಂದೂಡಿದ್ದರು.

ಆದರೆ ಈ 90 ದಿನಗಳ ಅವಧಿಯಲ್ಲಿ ಭಾರತ ಸೇರಿದಂತೆ ಹಲವು ದೇಶಗಳು ಅಮೆರಿಕದ ಜೊತೆಗೆ ಹೊಸದಾಗಿ ಒಪ್ಪಂದ ಮಾತುಕತೆ ನಡೆಸಿದ್ದವು.

ಬಹುತೇಕ ದೇಶಗಳ ಜೊತೆ ಮಾತುಕತೆ ಅಂತಿಮ ಹಂತಕ್ಕೆ ಬಂದಿದೆಯಾದರೂ, ಕೆಲವೊಂದು ವಿಷಯಗಳ ಕುರಿತು ಭಿನ್ನಾಭಿಪ್ರಾಯ ಹಾಗೆಯೇ ಉಳಿದುಕೊಂಡಿದೆ. ಹೀಗಾಗಿ ಭಾರತ ಸೇರಿದಂತೆ ಕೆಲ ದೇಶಗಳಿಗೆ ಮಾತುಕತೆ ಅಂತಿಮಗೊಳಿಸಲು ಇನ್ನಷ್ಟು ಸಮಯ ನೀಡಲು ಟ್ರಂಪ್ ನಿರ್ಧರಿಸಿದ್ದಾರೆ.

ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್‌ ವೇಳೆಗೆ ಮೊದಲ ಹಂತದ ಮಾತುಕತೆಯನ್ನು ಮುಕ್ತಾಯಗೊಳಿಸಲು ಗಡುವನ್ನು ನಿಗದಿಪಡಿಸಿದ್ದಾರೆ. ಅದಕ್ಕೂ ಮೊದಲು, ಎರಡೂ ದೇಶಗಳು ಮಧ್ಯಂತರ ಒಪ್ಪಂದ ಅಂತಿಮಗೊಳಿಸುವ ಸಾಧ್ಯತೆಯಿದೆ.

ಈಗಾಗಲೇ ಅಮೆರಿಕದ ಜತೆ ಭಾರತದ ಮಾತುಕತೆ ಅಂತಿಮ ಹಂತ ಆರಂಭವಾಗಿದ್ದು, ಶೀಘ್ರವೇ ಮಧ್ಯಂತರ ಮಿನಿ ಒಪ್ಪಂದವಾಗುವ ನಿರೀಕ್ಷೆಯಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಟ್ರಂಪ್ ಅವರು, ನಾವು ಈಗಾಗಲೇ ಬ್ರಿಟನ್ ಹಾಗೂ ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಭಾರತದೊಂದಿಗೂ ನಿಕಟ ಹಂತದಲ್ಲಿದ್ದೇವೆ ಎಂದು ವಾಷಿಂಗ್ಟನ್‌ನಲ್ಲಿ ಹೇಳಿದ್ದಾರೆ.

ನಾವು ಬೇರೆ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದೇನೆ. ಹಾಗಾಗಿ ಕೆಲವು ದೇಶಗಳಿಗೆ ಸುಂಕ ವಿಧಿಸುವ ಆದೇಶ ಪತ್ರಗಳನ್ನು ಕಳುಹಿಸಿದ್ದೇವೆ. ಇನ್ನು ಕೆಲವು ದೇಶಗಳೊಂದಿಗೆ ಸ್ವಲ್ಪ ಹೊಂದಾಣಿಕೆಯಾಗಬಹುದು ಎಂದು ತಿಳಿಸಿದ್ದಾರೆ.

ಈ ಪತ್ರಗಳನ್ನು ಸ್ವೀಕರಿಸಿದ ದೇಶಗಳಲ್ಲಿ ಬಾಂಗ್ಲಾದೇಶ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಕಾಂಬೋಡಿಯಾ, ಇಂಡೋನೇಷ್ಯಾ, ಜಪಾನ್, ಕಝಾಕಿಸ್ತಾನ್, ಲಾವೋಸ್, ಮಲೇಷ್ಯಾ, ಸೆರ್ಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಟುನೀಶಿಯಾ ಸೇರಿವೆ.

ಏನಿದು ವ್ಯಾಪಾರ ಒಪ್ಪಂದ?

ಎಲ್ಲಾ ದೇಶಗಳು ಒಂದಲ್ಲಾ ಒಂದು ಸರಕು, ಸೇವೆಗಳಿಗಾಗಿ ಅನ್ಯ ದೇಶಗಳ ಮೇಲೆ ಅವಲಂಬಿತವಾಗಿರುತ್ತವೆ. ಈ ವಿನಿಮಯಕ್ಕೆ ಸಂಬಂಧಿಸಿದಂತೆ, ವ್ಯಾಪಾರದಲ್ಲಿ ತೊಡಗಿರುವ ದೇಶಗಳು ಪರಸ್ಪರ ಕೆಲ ಒಪ್ಪಂದ ಮಾಡಿಕೊಂಡಿ ರುತ್ತವೆ. ಅದು ಒಬ್ಬರ ಸರಕುಗಳ ಮೇಲೆ ಇನ್ನೊಬ್ಬರು ವಿಧಿಸಬಹುದಾದ ತೆರಿಗೆ ಮಿತಿ, ಆಮದಿನ ಪ್ರಮಾಣದ ಮೇಲೆ ಮಿತಿ ಸೇರಿದಂತೆ, ರಫ್ತು ಮತ್ತು ಆಮದಿಗೆ ಸಂಬಂಧಿಸಿದ ಎಲ್ಲಾ ನೀತಿ ನಿಯಮಗಳನ್ನು ಒಳಗೊಂಡಿರುತ್ತದೆ. ಈ ಒಡಂಬಡಿಕೆಯ ಆಧಾರದಲ್ಲೇ ವ್ಯಾಪಾರ ನಡೆಯುತ್ತಿರುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT