ಗಾಜಾ  online desk
ವಿದೇಶ

ಗಾಜಾ ಯುದ್ಧ 'ಈಗಲೇ ಕೊನೆಗೊಳ್ಳಬೇಕು': ಯುಕೆ, ಫ್ರಾನ್ಸ್ ಸೇರಿ 23 ದೇಶಗಳಿಂದ ಜಂಟಿ ಹೇಳಿಕೆ

ಆಸ್ಟ್ರೇಲಿಯಾ, ಕೆನಡಾ ಮತ್ತು ಜಪಾನ್ ಸೇರಿದಂತೆ ದೇಶಗಳ ವಿದೇಶಾಂಗ ಸಚಿವರು "ಗಾಜಾದಲ್ಲಿ ನಾಗರಿಕರ ನೋವು ತೀವ್ರವಾಗತೊಡಗಿವೆ" ಎಂದು ಹೇಳಿದ್ದಾರೆ.

ಲಂಡನ್: ಬ್ರಿಟನ್, ಫ್ರಾನ್ಸ್ ಮತ್ತು ಹಲವಾರು ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಇಪ್ಪತ್ತೈದು ದೇಶಗಳು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿ, ಗಾಜಾದಲ್ಲಿನ ಯುದ್ಧ "ಈಗ ಕೊನೆಗೊಳ್ಳಬೇಕು" ಮತ್ತು ಇಸ್ರೇಲ್ ಅಂತರರಾಷ್ಟ್ರೀಯ ಕಾನೂನನ್ನು ಪಾಲಿಸಬೇಕು ಎಂದು ಆಗ್ರಹಿಸಿವೆ.

ಆಸ್ಟ್ರೇಲಿಯಾ, ಕೆನಡಾ ಮತ್ತು ಜಪಾನ್ ಸೇರಿದಂತೆ ದೇಶಗಳ ವಿದೇಶಾಂಗ ಸಚಿವರು "ಗಾಜಾದಲ್ಲಿ ನಾಗರಿಕರ ನೋವು ತೀವ್ರವಾಗತೊಡಗಿವೆ" ಎಂದು ಹೇಳಿದ್ದಾರೆ."ಗಾಜಾಗೆ ನೀಡಲಾಗುತ್ತಿರುವ ನೆರವಿಗೆ ಕೊಕ್ಕೆ ಹಾಕುತ್ತಿರುವುದು ಮತ್ತು ಆಹಾರದ ಮೂಲಭೂತ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುತ್ತಿರುವ ಮಕ್ಕಳು ಸೇರಿದಂತೆ ನಾಗರಿಕರ ಅಮಾನವೀಯ ಹತ್ಯೆ ಖಂಡನೀಯ, "ಇಸ್ರೇಲ್ ಸರ್ಕಾರದ ನೆರವು ವಿತರಣಾ ಮಾದರಿ ಅಪಾಯಕಾರಿಯಾಗಿದ್ದು, ಅಸ್ಥಿರತೆಯನ್ನು ಹೆಚ್ಚಿಸುತ್ತದೆ ಮತ್ತು ಗಾಜಾ ನಿವಾಸಿಗಳ ಮಾನವ ಘನತೆಯನ್ನು ಕಸಿದುಕೊಳ್ಳುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

"ನಾಗರಿಕ ಜನಸಂಖ್ಯೆಗೆ ಅಗತ್ಯ ಮಾನವೀಯ ಸಹಾಯವನ್ನು ಇಸ್ರೇಲ್ ಸರ್ಕಾರ ನಿರಾಕರಿಸುವುದು ಸ್ವೀಕಾರಾರ್ಹವಲ್ಲ. ಇಸ್ರೇಲ್ ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ತನ್ನ ಬಾಧ್ಯತೆಗಳನ್ನು ಪಾಲಿಸಬೇಕು" ಎಂದು ಅದು ಹೇಳಿದೆ.

ಸಹಿ ಮಾಡಿದವರಲ್ಲಿ ಸುಮಾರು 20 ಯುರೋಪಿಯನ್ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳು ಹಾಗೂ ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮತ್ತು ಸಮಾನತೆ, ಸನ್ನದ್ಧತೆ ಮತ್ತು ಬಿಕ್ಕಟ್ಟು ನಿರ್ವಹಣೆಗಾಗಿ EU ಆಯುಕ್ತರು ಸೇರಿದ್ದಾರೆ. ಅಮೆರಿಕ ಮತ್ತು ಜರ್ಮನಿ ಹೇಳಿಕೆಗೆ ಸಹಿ ಹಾಕಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಸಹಿ ಹಾಕಿದ ಸದಸ್ಯರು ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದು ಈ ಪ್ರದೇಶದಲ್ಲಿ ಶಾಂತಿಗೆ ರಾಜಕೀಯ ಮಾರ್ಗವನ್ನು ಬೆಂಬಲಿಸಲು ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT