ಡೊನಾಲ್ಡ್ ಟ್ರಂಪ್ 
ವಿದೇಶ

ಆಗಸ್ಟ್ 1 ಗಡುವು: ಭಾರತದೊಂದಿಗೆ ವ್ಯಾಪಾರ ಒಪ್ಪಂದ ಅಂತಿಮವಾಗಿಲ್ಲ ಎಂದ ಡೊನಾಲ್ಡ್ ಟ್ರಂಪ್

ಭಾರತದೊಂದಿಗಿನ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆಯೇ ಎಂದು ಸುದ್ದಿಗಾರರು ಕೇಳಿದಾಗ ಇಲ್ಲ ಆಗಿಲ್ಲ ಎಂದರು.

ನ್ಯೂಯಾರ್ಕ್: ಭಾರತವು ಬೇರೆ ದೇಶಗಳಿಗಿಂತ ಹೆಚ್ಚಿನ ಸುಂಕಗಳನ್ನು ವಿಧಿಸುತ್ತದೆ ಎಂದು ಪುನರುಚ್ಛರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದೊಂದಿಗಿನ ವ್ಯಾಪಾರ ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ ಎಂದು ಹೇಳಿದ್ದಾರೆ.

ಸ್ಕಾಟ್ಲೆಂಡ್‌ನಿಂದ ವಾಷಿಂಗ್ಟನ್‌ಗೆ ಹಿಂತಿರುಗುವ ವೇಳೆ ಏರ್ ಫೋರ್ಸ್ ಒನ್‌ನಲ್ಲಿ ಟ್ರಂಪ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಭಾರತದೊಂದಿಗಿನ ವ್ಯಾಪಾರ ಒಪ್ಪಂದದ ಬಗ್ಗೆ ಮಾತನಾಡಿದ್ದಾರೆ.

ಭಾರತದೊಂದಿಗಿನ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆಯೇ ಎಂದು ಸುದ್ದಿಗಾರರು ಕೇಳಿದಾಗ ಇಲ್ಲ ಆಗಿಲ್ಲ ಎಂದರು.

ಭಾರತವು ಶೇಕಡಾ 20ರಿಂದ 25ರಷ್ಟು ಹೆಚ್ಚಿನ ಯುಎಸ್ ಸುಂಕಗಳನ್ನು ಎದುರಿಸಲು ತಯಾರಿ ನಡೆಸುತ್ತಿದೆ ಎಂಬ ವರದಿಗಳ ಬಗ್ಗೆ ಕೇಳಿದಾಗ, ಹೌದು, ಹಾಗೆಂದು ನಾನು ಭಾವಿಸುತ್ತೇನೆ ಎಂದರು.

ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು

ಭಾರತ ನಮ್ಮ ಸ್ನೇಹ ರಾಷ್ಟ್ರವಾಗಿದೆ. ಪ್ರಧಾನಿ ಮೋದಿಯು ನಮ್ಮ ಆಪ್ತ ಸ್ನೇಹಿತರು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸಿ ಟ್ರಂಪ್ ಹೇಳಿದರು.

ನನ್ನ ಕೋರಿಕೆಯ ಮೇರೆಗೆ ಪಾಕಿಸ್ತಾನದೊಂದಿಗಿನ ಯುದ್ಧವನ್ನು ಕೊನೆಗೊಳಿಸಿದರು, ಪಾಕಿಸ್ತಾನ ಜೊತೆಗೆ ಸಹ ನಾವು ಸಾಕಷ್ಟು ಉತ್ತಮ ಒಪ್ಪಂದಗಳನ್ನು ಮಾಡಿದ್ದೇವೆ, ಇತ್ತೀಚಿನದು, ನಿಮಗೆ ತಿಳಿದಿರುವಂತೆ, ಕಾಂಬೋಡಿಯಾದೊಂದಿಗೆ ಮಾಡಿಕೊಂಡ ಒಪ್ಪಂದವಾಗಿದೆ ಎಂದು ಟ್ರಂಪ್ ಹೇಳಿದರು, ವ್ಯಾಪಾರದ ಮೂಲಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದೇವೆ ಎಂಬ ಹೇಳಿಕೆಯನ್ನು ಮತ್ತೆ ಪುನರಾವರ್ತಿಸಿದರು.

ಭಾರತದೊಂದಿಗಿನ ಒಪ್ಪಂದದಿಂದ ಏನನ್ನು ನಿರೀಕ್ಷಿಸುತ್ತಿದ್ದೀರಿ ಎಂದು ಕೇಳಿದಾಗ, ಭಾರತ ಉತ್ತಮ ಸ್ನೇಹಿತ ರಾಷ್ಟ್ರವಾಗಿದೆ. ಆದರೆ ಭಾರತವು ವರ್ಷಗಳಲ್ಲಿ ಬಹುತೇಕ ಯಾವುದೇ ದೇಶಕ್ಕಿಂತ ಹೆಚ್ಚಿನ ಸುಂಕಗಳನ್ನು ವಿಧಿಸಿದೆ. ವ್ಯಾಪಾರ ಒಪ್ಪಂದಗಳು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿವೆ ಎಂದು ನಾನು ಭಾವಿಸುತ್ತೇನೆ ಎಂದರು.

ಆಗಸ್ಟ್ 25ಕ್ಕೆ ಭಾರತಕ್ಕೆ ಭೇಟಿ

ಉಭಯ ದೇಶಗಳ ನಡುವಿನ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕಾಗಿ ಮುಂದಿನ ಸುತ್ತಿನ ಮಾತುಕತೆಗಾಗಿ ಅಮೆರಿಕದ ತಂಡ ಆಗಸ್ಟ್ 25 ರಂದು ಭಾರತಕ್ಕೆ ಭೇಟಿ ನೀಡಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂದಿನ ತಿಂಗಳ ಕೊನೆಯಲ್ಲಿ ತಂಡ ಬರುತ್ತಿದ್ದರೂ, ಆಗಸ್ಟ್ 1 ರ ಮೊದಲು ಮಧ್ಯಂತರ ವ್ಯಾಪಾರ ಒಪ್ಪಂದಕ್ಕಾಗಿ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಎರಡೂ ಕಡೆಯವರು ತೊಡಗಿಸಿಕೊಂಡಿದ್ದಾರೆ, ಇದು ಭಾರತ ಸೇರಿದಂತೆ ಡಜನ್ ಗಟ್ಟಲೆ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕಗಳ ರದ್ದು ಅವಧಿಯ ಅಂತ್ಯವನ್ನು ಸೂಚಿಸುತ್ತದೆ.

ಭಾರತ ಮತ್ತು ಅಮೆರಿಕದ ತಂಡಗಳು ಕಳೆದ ವಾರ ವಾಷಿಂಗ್ಟನ್‌ನಲ್ಲಿ ಒಪ್ಪಂದಕ್ಕಾಗಿ ಐದನೇ ಸುತ್ತಿನ ಮಾತುಕತೆ ನಡೆಸಿದ್ದವು.

ಈ ವರ್ಷ ಏಪ್ರಿಲ್ 2 ರಂದು ಡೊನಾಲ್ಡ್ ಟ್ರಂಪ್ ಹೆಚ್ಚಿನ ಪರಸ್ಪರ ಸುಂಕಗಳನ್ನು ಘೋಷಿಸಿದರು. ಅಮೆರಿಕವು ವಿವಿಧ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾತುಕತೆ ನಡೆಸುತ್ತಿರುವುದರಿಂದ, ಹೆಚ್ಚಿನ ಸುಂಕಗಳ ಅನುಷ್ಠಾನವನ್ನು ಜುಲೈ 9 ರವರೆಗೆ, ನಂತರ ದಿನಾಂಕವನ್ನು ದೂಡಿ ಆಗಸ್ಟ್ 1 ರವರೆಗೆ 90 ದಿನಗಳವರೆಗೆ ತಕ್ಷಣವೇ ಸ್ಥಗಿತಗೊಳಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

SCROLL FOR NEXT