ವಿದೇಶ

ವಲಸೆ ನೀತಿಗೆ ವಿರೋಧ: ಲಾಸ್ ಏಂಜಲೀಸ್'ನಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಹೆಚ್ಚುವರಿ 2,000 ನ್ಯಾಷನಲ್ ಗಾರ್ಡ್ ನಿಯೋಜಿಸಿದ ಡೊನಾಲ್ಡ್ ಟ್ರಂಪ್; Video

ವಲಸೆ ಅಧಿಕಾರಿಗಳ ಶೋಧಕಾರ್ಯ ವಿರೋಧಿಸಿ ಲಾಸ್‌ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದ್ದು, ಸಾವಿರಾರು ಪ್ರತಿಭಟನಾಕಾರರು ವಲಸಿಗರನ್ನು ಹಿಡಿದಿಟ್ಟಿರುವ ಫೆಡರಲ್ ಬಂಧನ ಕೇಂದ್ರದ ಹೊರಗೆ ಜಮಾಯಿಸಿದ್ದಾರೆ.

ಲಾಸ್‌ ಏಂಜಲೀಸ್‌: ವಲಸಿಗರನ್ನು ಹೊರದಬ್ಬುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ನಿರ್ಧಾರದ ವಿರುದ್ಧ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ನಡುವಲ್ಲೇ ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಮತ್ತು ಶಾಂತಿ ಸ್ಥಾಪಿಸಲು ಟ್ರಂಪ್ ಅವರು ಹೆಚ್ಚುವರಿಯಾಗಿ 2,000 ನ್ಯಾಷನಲ್ ಗಾರ್ಡ್ ಮತ್ತು ನೌಕಾಪಡೆಯ 700 ತುಕಡಿಗಳನ್ನು ನಿಯೋಜನೆಗೊಳಿಸಿದ್ದಾರೆ.

ಟ್ರಂಪ್ ಅವರ ಆದೇಶವನ್ನು ನಮ್ಮನ್ನು ಸಕ್ರಿಯವಾಗಿ ಕರ್ತವ್ಯ ನಿರ್ವಹಿಸುವಂತೆ ಮಾಡುತ್ತದೆ. ಆದರೆ, ಆದೇಶಕ್ಕೆ ಈಗಷ್ಟೇ ಸರ್ಕಾರ ಸಹಿ ಹಾಕಿದ್ದು, ಭದ್ರತಾಪಡೆಗಳು ಸ್ಥಳಕ್ಕಾಗಮಿಸಲು ಒಂದು ಅಥವಾ 2 ದಿನ ಸಮಯ ಬೇಕಾಗಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ನಡುವೆ ಹೆಚ್ಚುವರಿ ನ್ಯಾಷನಲ್ ಗಾರ್ಡ್ ಗಳನ್ನು ನಿಯೋಜಿಸಿರುವ ಟ್ರಂಪ್ ಅವರು, ಪ್ರತಿಭಟನಾಕಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ವಲಸೆ ನೀತಿಗಳ ವಿರುದ್ಧ ಪ್ರತಿಭಟಿಸುವವರಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಹೊಡೆತ ನೀಡಲಾಗುವುದು. ಈ ಕೂಡಲೇ ಪ್ರತಿಭಟನೆ ನಿಲ್ಲಿಸದರೆ ಸರಿ, ಇಲ್ಲವಾದಲ್ಲಿ ಅಡಳಿತದ ಕಠಿಣ ಕ್ರಮಗಳನ್ನು ಎದುರಿಸಲು ಸಜ್ಜಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಪೊಲೀಸರು ಪ್ರತಿಭಟನಾಕಾರರ ಮೇಲೆ ಫ್ಲ್ಯಾಷ್ ಬ್ಯಾಂಗ್‌ ಮತ್ತು ರಬ್ಬರ್ ಗುಂಡುಗಳ ಬಳಕೆ ಮಾಡುತ್ತಿದ್ದು, ಪ್ರತಿಭಟನಾಕಾರರು ಕೂಡ ಕಾರುಗಳಿಗೆ ಬೆಂಕಿ ಹಚ್ಚಿ ಹೆದ್ದಾರಿ ಸಂಚಾರಕ್ಕೆ ತಡೆಯೊಡ್ಡುತ್ತಿದ್ದಾರೆ.

ಲಾಸ್‌ ಏಂಜಲೀಸ್‌ನ ಬೀದಿ ಬೀದಿಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ನೇರ ಜಟಾಪಟಿ ನಡೆಯುತ್ತಿದ್ದು, ಪರಿಸ್ಥಿತಿ ಭೀಕರವಾಗಿದೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಕ್ಯಾಲಿಫೋರ್ನಿಯಾ ರಾಜ್ಯವು ನ್ಯಾಷನಲ್‌ ಗಾರ್ಡ್ ಮತ್ತು ನೌಕಾಪಡೆ ನಿಯೋಜನೆಯನ್ನು ನಿರ್ಬಂಧಿಸಲು, ಟ್ರಂಪ್ ಆಡಳಿತದ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ. ಇದು ಫೆಡರಲ್ ಕಾನೂನು ಮತ್ತು ರಾಜ್ಯ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ ಎಂದು ಕ್ಯಾಲಿಫೋರ್ನಿಯಾ ವಾದಿಸಿದೆ.

ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್ ಅವರು ಟ್ರಂಪ್ ಅವರ ನಡೆಯನ್ನು ವಿರೋಧಿಸಿದ್ದಾರೆ. 2,000 ಸೈನಿಕರ ಆರಂಭಿಕ ನಿಯೋಜನೆಯ ನಂತರ ಲಾಸ್ ಏಂಜಲೀಸ್‌ಗೆ ಇನ್ನೂ 2,000 ನ್ಯಾಷನಲ್ ಗಾರ್ಡ್ ಪಡೆಗಳನ್ನು ನಿಯೋಜಿಸುತ್ತಿದ್ದಾರೆ. ಇದು ಹುಚ್ಚುತನ ಹಾಗೂ ಅಹಂಕಾರಯುತ ನಡೆಯಾಗಿದ್ದು, ನಮ್ಮ ಸೈನಿಕರಿಗೆ ಅಗೌರವ ಸೂಚಿಸಿದಂತಾಗಿದೆ ಎಂದು ಕಿಡಿಕಾರಿದ್ದಾರೆ.

ಈ ನಡುವೆ ಲಾಸ್‌ ಏಂಜಲೀಸ್‌ಗೆ ಹೆಚ್ಚುವರಿ ತುಕಡಿಗಳನ್ನು ನಿಯೋಜಿಸುವ ತಮ್ಮ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿರುವ ಕ್ಯಾಲಿಫೋರ್ನಿಯಾ ಗವರ್ನರ್‌ ಗ್ಯಾವಿನ್‌ ನ್ಯೂಸಮ್‌ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರೂ ಕಿಡಿಕಾರಿದ್ದಾರೆ.

ಕ್ಯಾಲಿಫೋರ್ನಿಯಾ ಗವರ್ನರ್ ನ್ಯೂಸಮ್ ಹಾಗೂ ಲಾಸ್‍ಎಂಜಲೀಸ್ ಮೇಯರ್ ಕರೆನ್ ಬಾಸ್ ಸೇರಿದಂತೆ ತಮ್ಮ ಕಾರ್ಯದಲ್ಲಿ ಅಡ್ಡಿಯಾಗುವ ಯಾರನ್ನಾರದೂ ಬಂಧಿಸುವುದಾಗಿ ಟ್ರಂಪ್ ಅವರ ಗಡಿ ಝಾರ್ ಟಾಮ್ ಹೊಮನ್ ಶನಿವಾರ ಬೆದರಿಕೆ ಹಾಕಿದ್ದು, ಇದಕ್ಕೆ ಟ್ರಂಪ್ ಅವರು ಬೆಂಬಲ ಸೂಚಿಸಿದ್ದಾರೆ.

ಟಾಮ್ ಸ್ಥಾನದಲ್ಲಿ ನಾನಿದ್ದರೂ ಅದನ್ನೇ ಮಾಡುತ್ತಿದ್ದೆ. ಅದು ಒಳ್ಳೆಯ ಕೆಲಸ ಎಂಬ ಭಾವನೆ ನನ್ನದು. ಗಾವಿನ್‍ಗೆ ಪ್ರಚಾರದ ಬಯಕೆ. ಆದರೆ ನಾನು ಇದು ಒಳ್ಳೆಯದು ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ವಲಸೆ ಅಧಿಕಾರಿಗಳ ಶೋಧಕಾರ್ಯ ವಿರೋಧಿಸಿ ಲಾಸ್‌ ಏಂಜಲೀಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದ್ದು, ಸಾವಿರಾರು ಪ್ರತಿಭಟನಾಕಾರರು ವಲಸಿಗರನ್ನು ಹಿಡಿದಿಟ್ಟಿರುವ ಫೆಡರಲ್ ಬಂಧನ ಕೇಂದ್ರದ ಹೊರಗೆ ಜಮಾಯಿಸಿದ್ದಾರೆ. ಡೌನ್‌ಟೌನ್‌ ರಸ್ತೆಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹಿಂಸಾತ್ಮಕ ಪ್ರತಿಭಟನೆಗಳಿಂದಾಗಿ ಲಾಸ್‌ ಏಂಜಲೀಸ್‌ ನಗರ ಅಕ್ಷರಶಃ ನಲುಗಿ ಹೋಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Sonam Wangchuk Arrested: NSA ಅಡಿ ಕೇಸ್; ಜಾಮೀನು ಸಿಗುವ ಸಾಧ್ಯತೆಯೇ ಇಲ್ಲ!

ಜಾತಿ ಗಣತಿ: ಇಲ್ಲಿಯವರೆಗೆ ಕೇವಲ ಶೇ.2 ರಷ್ಟು ಪ್ರಗತಿ; ಪ್ರತಿದಿನ ಶೇ.10 ರಷ್ಟು ಸಮೀಕ್ಷೆಗೆ ಸಿಎಂ ಸೂಚನೆ; ಗಡುವಿನೊಳಗೆ ಪೂರ್ಣ!

Asia Cup 2025: Indian Army ಕುರಿತು ವ್ಯಂಗ್ಯ, ಪಾಕ್ ಕ್ರಿಕೆಟಿಗ Haris Rauf ಗೆ ಬರೆ ಹಾಕಿದ ICC, ದಂಡ, ಫರ್ಹಾನ್ ಗೂ ಎಚ್ಚರಿಕೆ!

'I Love Muhammed' row: ಬರೇಲಿಯ ಮಸೀದಿ ಹೊರಗೆ ಸ್ಥಳೀಯ ಮುಸ್ಲಿಮರು, ಪೊಲೀಸರ ನಡುವೆ ಭಾರಿ ಘರ್ಷಣೆ! ಕಾರಣವೇನು?

Cricket: 'ಅವರ ''ಗರ್ವ'' ಮುರಿಯಿರಿ'..: Asia Cup Final ನಲ್ಲಿ ಭಾರತ ಮಣಿಸಲು Shoaib Akhtar ಮಾಸ್ಟರ್ ಪ್ಲಾನ್!

SCROLL FOR NEXT