ಪ್ರಧಾನಿ ಬೆಂಜಮಿನ್ ನೆತನ್ಯಾಹು 
ವಿದೇಶ

ಇರಾನ್‌ನಲ್ಲಿ ಗುರಿ ಸಾಧನೆಯ ಸಾಮೀಪ್ಯದಲ್ಲಿ ಇಸ್ರೇಲ್: ಪ್ರಧಾನಿ ಬೆಂಜಮಿನ್ ನೆತನ್ಯಾಹು!

ಇರಾನ್‌ನ ಪರಮಾಣು ತಾಣಗಳ ಮೇಲೆ ಯುಎಸ್ ದಾಳಿಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆತನ್ಯಾಹು, ಇರಾನ್ ಜೊತೆಗಿನ ಯುದ್ಧದಿಂದ ಈಗಲೇ ಹಿಂದೆ ಸರಿಯುವುದಿಲ್ಲ .

ಜೆರುಸೆಲೆಂ: ಇರಾನ್‌ನಲ್ಲಿ ಗುರಿ ಸಾಧನೆಯ ಹತ್ತಿರದಲ್ಲಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾನುವಾರ ಹೇಳಿದ್ದಾರೆ. ಇರಾನ್ ನ ಖಂಡಾಂತರ ಕ್ಷಿಪಣಿ ಮತ್ತು ಪರಮಾಣು ತಾಣಗಳ ಮೇಲೆ ಗಮನಾರ್ಹ ಹಾನಿಯನ್ನುಂಟುಮಾಡಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.

ಇರಾನ್‌ನ ಪರಮಾಣು ತಾಣಗಳ ಮೇಲೆ ಯುಎಸ್ ದಾಳಿಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೆತನ್ಯಾಹು, ಇರಾನ್ ಜೊತೆಗಿನ ಯುದ್ಧದಿಂದ ಈಗಲೇ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ಎಲ್ಲಾ ಉದ್ದೇಶಿತ ಗುರಿ ಸಾಧಿಸುವವರೆಗೂ ಯುದ್ಧವನ್ನು ಕೊನೆಗಾಣಿಸುವುದಿಲ್ಲ ಎಂದರು.

ಗುರಿ ಸಾಧಿಸಿದ ನಂತರ ಕಾರ್ಯಾಚರಣೆ ಮುಂದುವರೆಸುವುದಿಲ್ಲ ಆದರೆ ಯುದ್ಧವನ್ನು ಶೀಘ್ರದಲ್ಲಿಯೇ ಮುಗಿಸುವುದಿಲ್ಲ. ಗುರಿ ಸಾಧಿಸಿದ ಕೂಡಲೇ ಕಾರ್ಯಾಚರಣೆ ಮುಗಿಯಲಿದ್ದು, ಹೋರಾಟ ನಿಲ್ಲಲಿದೆ ಎಂದು ಅವರು ಹೇಳಿದರು.

ಇದು ನಮ್ಮನ್ನು ನಾಶಮಾಡಲು ಬಯಸುತ್ತಿರುವ ಆಡಳಿತವಾಗಿದೆ ಎಂಬುದರಲ್ಲಿ ನನಗೆ ಸಂದೇಹವಿಲ್ಲ. ಅದಕ್ಕಾಗಿಯೇ ನಾವು ನಮ್ಮ ಅಸ್ತಿತ್ವಕ್ಕೆ ಬೆದರಿಕೆಯಾಗಿರುವುದನ್ನು ತೊಡೆದುಹಾಕಲು ಈ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದೇವೆ. ಪರಮಾಣು ಮತ್ತು ಖಂಡಾಂತರ ಕ್ಷಿಪಣಿ ಬೆದರಿಕೆಯನ್ನು ನಾಶಪಡಿಸುವತ್ತ ಹಂತ ಹಂತವಾಗಿ ಸಾಗುತ್ತಿದ್ದೇವೆ. ಅವುಗಳನ್ನು ಪೂರ್ಣಗೊಳಿಸಲು ತುಂಬಾ ಹತ್ತಿರದಲ್ಲಿದ್ದೇವೆ. ಫರ್ಡೋವ್‌ನಲ್ಲಿರುವ ಇರಾನ್‌ನ ಪರಮಾಣು ತಾಣಕ್ಕೆ ಅತ್ಯಂತ ಗಂಭೀರ ಹಾನಿಯಾಗಿದೆ ಎಂದು ಅವರು ತಿಳಿಸಿದರು.

ಆದರೆ, ಹಾನಿಯ ಪ್ರಮಾಣದ ಬಗ್ಗೆ ಅವರು ವಿವರ ನೀಡಲಿಲ್ಲ. ಇರಾನ್‌ನ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ನಾವು ಅವರನ್ನು ಹಿಂದಕ್ಕೆ ಕಳುಹಿಸುತ್ತಿದ್ದೇವೆ. ಬೆದರಿಕೆಯನ್ನು ತೊಡೆದುಹಾಕುತ್ತಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT