ಡೊನಾಲ್ಡ್ ಟ್ರಂಪ್ 
ವಿದೇಶ

ಇರಾನ್ ಹೇಳಿಕೆಯಿಂದ ಮುಜುಗರ: ಪರಮಾಣು ತಾಣಗಳ ಮೇಲಿನ ದಾಳಿಯನ್ನು ಹಿರೋಷಿಮಾ, ನಾಗಸಾಕಿಗೆ ಹೋಲಿಸಿದ Donald Trump!

ತನ್ನ ಅತ್ಯಂತ ಮಾರಕ B2 ಬಾಂಬರ್‌ಗಳ ಮೂಲಕ ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ನಾಶಪಡಿಸಿದ ಬಗ್ಗೆ ಹೆಮ್ಮೆಪಡುತ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಈಗ ಆಘಾತಕ್ಕೊಳಗಾಗಿದ್ದಾರೆ.

ಇರಾನ್‌ನಿಂದ ಹೊರಬಂದಿರುವ ದೊಡ್ಡ ಸುದ್ದಿ ಮತ್ತೊಮ್ಮೆ ಅಮೆರಿಕವನ್ನು ಮುಜುಗರಕ್ಕೀಡು ಮಾಡಿದೆ. ತನ್ನ ಅತ್ಯಂತ ಮಾರಕ B2 ಬಾಂಬರ್‌ಗಳ ಮೂಲಕ ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ನಾಶಪಡಿಸಿದ ಬಗ್ಗೆ ಹೆಮ್ಮೆಪಡುತ್ತಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ ಈಗ ಆಘಾತಕ್ಕೊಳಗಾಗಿದ್ದಾರೆ. ವಾಸ್ತವವಾಗಿ, ಅನೇಕ ಮಾಧ್ಯಮ ವರದಿಗಳು ಇರಾನ್‌ನ ಪರಮಾಣು ತಾಣಗಳು ಇನ್ನೂ ಹಾಗೇ ಇವೆ ಎಂದು ಹೇಳುತ್ತಿವೆ. ಅವುಗಳಿಗೆ ಯಾವುದೇ ಹಾನಿಯಾಗಿಲ್ಲ. ಇದರಿಂದಾಗಿ ಅಮೆರಿಕಾದ ಅಧ್ಯಕ್ಷರು ಆಕ್ರೋಶಗೊಂಡಿದ್ದು ಅವು ನಕಲಿ ಸುದ್ದಿ ಎಂದು ಹೇಳಿದ್ದಾರೆ.

ಇರಾನ್‌ನ ಪರಮಾಣು ಕಾರ್ಯಕ್ರಮವನ್ನು "ದಶಕಗಳ ಹಿಂದಕ್ಕೆ ತಳ್ಳಲಾಗಿದೆ" ಮತ್ತು ಅವರು ಇನ್ನು ಮುಂದೆ ಬಾಂಬ್ ತಯಾರಿಸುವ ಸ್ಥಿತಿಯಲ್ಲಿರಲು ಸಾಧ್ಯವಾಗದ ಸ್ಥಿತಿಗೆ ತರಲಾಗಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕದ ದಾಳಿಗಳು ಇರಾನ್‌ನ ಪರಮಾಣು ತಾಣಗಳನ್ನು "ಸಂಪೂರ್ಣವಾಗಿ ಧ್ವಂಸಗೊಳಿಸಿವೆ" ಎಂದು ಅವರು ಪ್ರತಿಪಾದಿಸಿದರು. ಯಹೂದಿ ರಾಷ್ಟ್ರ ಮತ್ತು ಖಮೇನಿ ನೇತೃತ್ವದ ದೇಶಗಳ ನಡುವಿನ ಕದನ ವಿರಾಮ ಪ್ರಕ್ರಿಯೆಯು ತುಂಬಾ ಚೆನ್ನಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.

ಎರಡನೇ ಮಹಾಯುದ್ಧ ಮತ್ತು ಜೂನ್ 22ರಂದು ಇರಾನ್ ವಿರುದ್ಧದ ಅಮೆರಿಕದ ದಾಳಿಗಳ ನಡುವಿನ ಹೋಲಿಕೆಯನ್ನು ಸೂಚಿಸಿದ ಟ್ರಂಪ್, ಆ ಅಂತ್ಯವು ಯುದ್ಧವನ್ನು ಕೊನೆಗೊಳಿಸಿತು. ನಾನು ಹಿರೋಷಿಮಾದ ಉದಾಹರಣೆಯನ್ನು ನೀಡಲು ಬಯಸುವುದಿಲ್ಲ. ನಾನು ನಾಗಸಾಕಿಯ ಉದಾಹರಣೆಯನ್ನು ನೀಡಲು ಬಯಸುವುದಿಲ್ಲ. ಆದರೆ ಅದು ಮೂಲಭೂತವಾಗಿ ಒಂದೇ ವಿಷಯವಾಗಿತ್ತು. ಅದು ಆ ಯುದ್ಧವನ್ನು ಕೊನೆಗೊಳಿಸಿತು ಎಂದು ಹೇಳಿದರು.

ಇದಕ್ಕೂ ಮೊದಲು, ಇರಾನ್ ಮೇಲಿನ ಇತ್ತೀಚಿನ ಯುಎಸ್ ದಾಳಿಗಳು ಟೆಹ್ರಾನ್‌ನ ಪರಮಾಣು ಕಾರ್ಯಕ್ರಮವನ್ನು ನಾಶಮಾಡಲು ವಿಫಲವಾಗಿವೆ ಎಂಬ ಸುದ್ದಿ ವರದಿಗಳನ್ನು ಟ್ರಂಪ್ ತಳ್ಳಿಹಾಕಿದರು. ಇದನ್ನು "ನಕಲಿ ಸುದ್ದಿ" ಎಂದು ಕರೆದರು ಮತ್ತು ತಾಣಗಳು "ಸಂಪೂರ್ಣವಾಗಿ ನಾಶವಾಗಿವೆ" ಎಂದು ಒತ್ತಾಯಿಸಿದರು.

ಟ್ರೂತ್ ಸೋಷಿಯಲ್‌ನಲ್ಲಿ ಪೂರ್ಣ ಪ್ರಮಾಣದ ಪೋಸ್ಟ್ ಮಾಡಿದ ಟ್ರಂಪ್, ಸುಳ್ಳು ಸುದ್ದಿ CNN, Failure ನ್ಯೂಯಾರ್ಕ್ ಟೈಮ್ಸ್ ಜೊತೆಗೆ, ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಮಿಲಿಟರಿ ದಾಳಿಗಳಲ್ಲಿ ಒಂದನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನಿಸಿದೆ. ಇರಾನ್‌ನಲ್ಲಿ ಪರಮಾಣು ತಾಣಗಳು ಸಂಪೂರ್ಣವಾಗಿ ನಾಶವಾಗಿವೆ. ಟೈಮ್ಸ್ ಮತ್ತು ಸಿಎನ್‌ಎನ್ ಎರಡನ್ನೂ ಸಾರ್ವಜನಿಕರು ತೀವ್ರವಾಗಿ ಟೀಕಿಸುತ್ತಿದ್ದಾರೆ ಎಂದು ಬರೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT