ರಾಜನಾಥ್ ಸಿಂಗ್  
ವಿದೇಶ

ಭಯೋತ್ಪಾದನೆ ಬಗ್ಗೆ ಭಾರತದ ನಿಲುವು ದುರ್ಬಲಗೊಳಿಸುವ ಯತ್ನ: SCO ಸಭೆಯಲ್ಲಿ ಸಹಿ ಹಾಕಲು ರಾಜನಾಥ್ ಸಿಂಗ್ ನಿರಾಕರಣೆ; Video

ಶೃಂಗಸಭೆಯ ಸಮಯದಲ್ಲಿ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಉಲ್ಲೇಖವನ್ನು ಕೈಬಿಡಲು ಚೀನಾ ಮತ್ತು ಪಾಕಿಸ್ತಾನ ಪ್ರಯತ್ನಿಸಿ ಜಾಫರ್ ಎಕ್ಸ್‌ಪ್ರೆಸ್ ಅಪಹರಣವನ್ನು ಸೇರಿಸಲು ಬಯಸಿದ್ದವು ಎಂದು ತಿಳಿದುಬಂದಿದೆ.

ಗುರುವಾರ ಮುಂಜಾನೆ ಚೀನಾದ ಕ್ವಿಂಗ್ಡಾವೊದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ರಕ್ಷಣಾ ಸಚಿವರ ಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತದ ನಿಲುವನ್ನು ದುರ್ಬಲಗೊಳಿಸುವ ದಾಖಲೆಗೆ ಸಹಿ ಹಾಕಲು ನಿರಾಕರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಶೃಂಗಸಭೆಯ ಸಮಯದಲ್ಲಿ ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಉಲ್ಲೇಖವನ್ನು ಕೈಬಿಡಲು ಚೀನಾ ಮತ್ತು ಪಾಕಿಸ್ತಾನ ಪ್ರಯತ್ನಿಸಿದ್ದವು. ಅಲ್ಲದೆ, ಜಾಫರ್ ಎಕ್ಸ್‌ಪ್ರೆಸ್ ಅಪಹರಣ ಪ್ರಕರಣವನ್ನು ಸೇರಿಸಲು ಬಯಸಿದ್ದವು ಎಂದು ತಿಳಿದುಬಂದಿದೆ. ಹೀಗಾಗಿ ಈ ಬಗ್ಗೆ ಯಾವುದೇ ಒಮ್ಮತ ಮೂಡಲಿಲ್ಲ ಎಂದು ಮೂಲಗಳು ತಿಳಿಸಿವೆ.

26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಭಾರತದ ನಿಲುವನ್ನು ರಕ್ಷಣಾ ಸಚಿವರು ದೃಢವಾಗಿ ಇಂದಿನ ಸಭೆಯಲ್ಲಿ ದೃಢವಾಗಿ ಮಂಡಿಸಿದರು. ಇದಲ್ಲದೆ, ಗಡಿಯಾಚೆಗಿನ ಭಯೋತ್ಪಾದನೆಯನ್ನು ನೀತಿ ಸಾಧನವಾಗಿ ಬಳಸುವ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಗಳನ್ನು ರಾಜನಾಥ್ ಸಿಂಗ್ ಬಲವಾಗಿ ಖಂಡಿಸಿದರು.

ಕೆಲವು ದೇಶಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ನೀತಿ ಸಾಧನವಾಗಿ ಬಳಸುತ್ತವೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುತ್ತವೆ. ಅಂತಹ ದ್ವಿಮುಖ ನೀತಿಗಳನ್ನು ನಾವು ಒಪ್ಪುವುದಿಲ್ಲ. SCO ಅಂತಹ ರಾಷ್ಟ್ರಗಳನ್ನು ಟೀಕಿಸಲು ಹಿಂಜರಿಯಬಾರದು ಎಂದು ರಾಜನಾಥ್ ಸಿಂಗ್ ಒತ್ತಾಯಿಸಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಶೃಂಗಸಭೆಯ ಗಮನ ಸೆಳೆದ ರಕ್ಷಣಾ ಸಚಿವರು, "ಏಪ್ರಿಲ್ 22 ರಂದು, ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ಭಯೋತ್ಪಾದಕ ಗುಂಪು 'ದಿ ರೆಸಿಸ್ಟೆನ್ಸ್ ಫ್ರಂಟ್' ಭೀಕರ ಮತ್ತು ಘೋರ ದಾಳಿ ನಡೆಸಿತು.ನೇಪಾಳಿ ಪ್ರಜೆ ಸೇರಿದಂತೆ ಇಪ್ಪತ್ತಾರು ಅಮಾಯಕ ನಾಗರಿಕರು ಕೊಲ್ಲಲ್ಪಟ್ಟರು.

ಬಲಿಪಶುಗಳನ್ನು ಅವರ ಧಾರ್ಮಿಕ ಗುರುತಿನ ಆಧಾರದ ಮೇಲೆ ಗುರುತಿಸಿ ಭಯೋತ್ಪಾದಕರು ಗುಂಡು ಹಾರಿಸಿದ್ದರು. ವಿಶ್ವಸಂಸ್ಥೆಯಿಂದ ಗೊತ್ತುಪಡಿಸಿದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಪ್ರತಿನಿಧಿಯಾಗಿರುವ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಇದಕ್ಕೆ ಪ್ರತ್ಯುತ್ತರವಾಗಿ ಭಾರತವು ತನ್ನ ರಕ್ಷಿಸುವ ಹಕ್ಕನ್ನು ಚಲಾಯಿಸಿ ಗಡಿಯಾಚೆಗಿನ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡುವ ಗುರಿಯನ್ನು ಹೊಂದಿರುವ 'ಆಪರೇಷನ್ ಸಿಂಧೂರ್' ನ್ನು ಯಶಸ್ವಿಯಾಗಿ ನಡೆಸಿತು.

ಚೀನಾಕ್ಕೆ ತೆರಳುವ ಮೊದಲು, ರಾಜನಾಥ್ ಸಿಂಗ್ ಅವರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಭದ್ರತಾ ಪರಿಸ್ಥಿತಿಯ ಬಗ್ಗೆ, ಗಡಿ ಪ್ರದೇಶಗಳು, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು ಮತ್ತು ಮುಂದಿನ ತಿಂಗಳು ಪ್ರಾರಂಭವಾಗಲಿರುವ ಅಮರನಾಥ ಯಾತ್ರೆಯ ಬಗ್ಗೆ ಉನ್ನತ ಸೇನಾಧಿಕಾರಿಗಳು ವಿವರಿಸಿದರು.

ಉಧಂಪುರದಲ್ಲಿರುವ ಉತ್ತರ ಕಮಾಂಡ್ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಉತ್ತರ ಕಮಾಂಡ್‌ನ ಕಮಾಂಡಿಂಗ್-ಇನ್-ಚೀಫ್ ಜನರಲ್ ಆಫೀಸರ್ ಲೆಫ್ಟಿನೆಂಟ್ ಜನರಲ್ ಪ್ರತೀಕ್ ಶರ್ಮಾ ಮತ್ತು ಎಲ್ಲಾ ಘಟಕಗಳ ಕಮಾಂಡಿಂಗ್ ಅಧಿಕಾರಿಗಳು ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಯಕತ್ವ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಗರಂ; ನಾಯಕರಿಗೆ ಖಡಕ್ ಸಂದೇಶ

ಭಕ್ತಿ ಗೀತೆ ಹಾಡಿದ್ದಕ್ಕೆ ಬಂಗಾಳಿ ಗಾಯಕಿ ಲಗ್ನಜಿತಾ ಚಕ್ರವರ್ತಿ ಮೇಲೆ ಮೆಹಬೂಬ್ ಮಲ್ಲಿಕ್‌ನಿಂದ ಹಲ್ಲೆಗೆ ಯತ್ನ, Video Viral

ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಮೇಲೆ ಹಲ್ಲೆ: Air India Expressನಿಂದ ಪೈಲಟ್‌ಗೆ ನೋಟಿಸ್

ಆರೋಗ್ಯ ತಪಾಸಣೆಯೋ ಅಥವಾ ರಾಜಕೀಯವೋ? ಕುತೂಹಲ ಮೂಡಿಸಿದ ನಿತೀಶ್ ಕುಮಾರ್ ದೆಹಲಿ ಭೇಟಿ

U-19 Asia Cup ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಹೀನಾಯ ಸೋಲು!

SCROLL FOR NEXT