ಮಾರಿಷಸ್ ಅಧ್ಯಕ್ಷರಿಗೆ ಮಹಾ ಕುಂಭದ ಗಂಗಾಜಲ ಉಡುಗೊರೆ ನೀಡಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಇಂದಿನಿಂದ 2 ದಿನಗಳ ಕಾಲ ಮಾರಿಷಸ್ ನಲ್ಲಿರಲಿದ್ದು, ಗೋಖೂಲ್‌ಗೆ ಮಹಾಕುಂಭದ ಗಂಗಾಜಲದ ಜೊತೆ ಇನ್ನೂ ಇತರ ಉಡುಗೊರೆಗಳನ್ನು ನೀಡಿದ್ದಾರೆ.
ಮಾರಿಷಸ್: ಪ್ರಧಾನಿ ನರೇಂದ್ರ ಮೋದಿ ಮಾರಿಷಸ್ ಪ್ರವಾಸ ಕೈಗೊಂಡಿದ್ದು, ಮಾರಿಷಸ್ ಅಧ್ಯಕ್ಷ ಧರಂ ಗೋಖೂಲ್ ಅವರಿಗೆ ಮಹಾಕುಂಭ ಮೇಳದ ಗಂಗಾಜಲವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಪ್ರಧಾನಿ ಮೋದಿ ಇಂದಿನಿಂದ 2 ದಿನಗಳ ಕಾಲ ಮಾರಿಷಸ್ ನಲ್ಲಿರಲಿದ್ದು, ಗೋಖೂಲ್‌ಗೆ ಮಹಾಕುಂಭದ ಗಂಗಾಜಲದ ಜೊತೆ ಇನ್ನೂ ಇತರ ಉಡುಗೊರೆಗಳನ್ನು ನೀಡಿದ್ದಾರೆ.
ಅಧ್ಯಕ್ಷ ಗೋಖೂಲ್ ಅವರನ್ನು ಭೇಟಿ ಮಾಡುವ ಮೊದಲು, ಪ್ರಧಾನಿ ಮೋದಿ ಅವರು ಮಾರಿಷಸ್ ಪ್ರಧಾನಿ ನವೀನಚಂದ್ರ ರಾಮಗೂಲಮ್ ಅವರನ್ನು ಭೇಟಿಯಾದರು ಉಭಯ ನಾಯಕರು ಸರ್ ಸೀವೂಸಾಗುರ್ ರಾಮಗೂಲಮ್ ಸಸ್ಯೋದ್ಯಾನದಲ್ಲಿ ಸಸಿ ನೆಟ್ಟರು. ಪ್ರಧಾನಿ ಮೋದಿ ಅಧ್ಯಕ್ಷ ಗೋಖೂಲ್ ಅವರನ್ನು ಭೇಟಿ ಮಾಡಿ ಮಹಾ ಕುಂಭದಿಂದ ಗಂಗಾಜಲ ಸೇರಿದಂತೆ ಹಲವಾರು ಉಡುಗೊರೆಗಳನ್ನು ನೀಡಿದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನಲ್ ತಿಳಿಸಿದೆ.
ಇದಕ್ಕೂ ಮೊದಲು, ಸುಮಾರು ಒಂದು ದಶಕದ ನಂತರ ದೇಶಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ದೊರೆಯಿತು. ಮೋದಿ 2015 ರಲ್ಲಿ ಮಾರಿಷಸ್‌ಗೆ ಭೇಟಿ ನೀಡಿದ್ದರು ಆ ಬಳಿಕ ಮಾರಿಷಸ್ ಗೆ ಇದು ಅವರ 2 ನೇ ಭೇಟಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿಗೆ ಮಾರಿಷಸ್ ಪ್ರಧಾನಿ ರಾಮಗೂಲಮ್ ಮತ್ತು ಇತರ ನಾಯಕರು ಔಪಚಾರಿಕ ಸ್ವಾಗತ ನೀಡಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. "ಇದು ಭಾರತ ಮತ್ತು ಮಾರಿಷಸ್ ನಡುವಿನ ಬಲವಾದ ಸಂಬಂಧವನ್ನು ತೋರಿಸುತ್ತದೆ" ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೀವೂಸಾಗುರ್ ರಾಮಗೂಲಂಗೆ ಗೌರವ ಸಲ್ಲಿಸಿದ ನಂತರ, ಮೋದಿ ರಾಷ್ಟ್ರಪತಿಗಳನ್ನು ಭೇಟಿಯಾದರು ಮತ್ತು ರಾಜ್ಯ ಭೋಜನಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಜೈಸ್ವಾಲ್ ಹೇಳಿದ್ದಾರೆ.