ವಾಷಿಂಗ್ಟನ್: ಅಮೆರಿಕದ ಉನ್ನತ ಆರೋಗ್ಯ ಸಂಶೋಧನೆ ಮತ್ತು ಧನಸಹಾಯ ಸಂಸ್ಥೆಗಳಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ (NIH)ನಿರ್ದೇಶಕರಾಗಿ ಭಾರತೀಯ-ಅಮೆರಿಕನ್ ವಿಜ್ಞಾನಿ ಜೈ ಭಟ್ಟಾಚಾರ್ಯ ಅವರ ನೇಮಕವನ್ನು US ಸೆನೆಟ್ ದೃಢಪಡಿಸಿದೆ.
ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಆರೋಗ್ಯ ನೀತಿಯ ಪ್ರಾಧ್ಯಾಪಕ ಭಟ್ಟಾಚಾರ್ಯ ಅವರು ಮಂಗಳವಾರ 53-47 ಮತಗಳಿಂದ ದೃಢಪಟ್ಟಿದ್ದಾರೆ ಎಂದು ಯುಎಸ್ ಸೆನೆಟ್‌ನ ಅಧಿಕೃತ ವೆಬ್‌ಸೈಟ್ ತಿಳಿಸಿದೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಭಟ್ಟಾಚಾರ್ಯರನ್ನು 18 ನೇ ಎನ್‌ಐಎಚ್ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿದ್ದರು.
ಡಾ. ಭಟ್ಟಾಚಾರ್ಯ ಅವರು ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರ ಜೊತೆಗೆ ರಾಷ್ಟ್ರದ ವೈದ್ಯಕೀಯ ಸಂಶೋಧನೆಯನ್ನು ನಿರ್ದೇಶಿಸಲು ಮತ್ತು ಆರೋಗ್ಯವನ್ನು ಸುಧಾರಿಸುವ, ಜೀವಗಳನ್ನು ಉಳಿಸುವ ಪ್ರಮುಖ ಆವಿಷ್ಕಾರಗಳನ್ನು ಮಾಡಲು ಕೆಲಸ ಮಾಡುತ್ತಾರೆ ಎಂದು ಟ್ರಂಪ್ ಹೇಳಿದ್ದರು.
"ದೃಢೀಕರಿಸಿದರೆ ಅಮೆರಿಕ ಆರೋಗ್ಯವನ್ನು ಮತ್ತಷ್ಟು ಸುಧಾರಿಸುವ ಅಧ್ಯಕ್ಷ ಟ್ರಂಪ್ ಮತ್ತು (ಆರೋಗ್ಯ ಮತ್ತು ಮಾನವ ಸೇವೆ) ಕಾರ್ಯದರ್ಶಿ ಕೆನಡಿಯವರ ಅಜೆಂಡಾವನ್ನು ಕೈಗೆತ್ತಿಕೊಳ್ಳುತ್ತೇನೆ. ವಿಜ್ಞಾನ ಮತ್ತು ನಾವೀನ್ಯತೆಯೊಂದಿಗೆ ದೇಶದ ತೀವ್ರ ದೀರ್ಘಕಾಲದ ಆರೋಗ್ಯ ಅಗತ್ಯಗಳನ್ನು ಪರಿಹರಿಸಲು NIHಗೆ ಬದ್ದವಾಗಿರುವುದಾಗಿ ಜೈ ಭಟ್ಟಾಚಾರ್ಯ ಹೇಳಿದ್ದಾರೆ
ಭಟ್ಟಾಚಾರ್ಯ ಅವರ ನೇಮಕಕ್ಕೆ "ಹೆಮ್ಮೆಯಿಂದ" ಸ್ಟ್ಯಾನ್‌ಫೋರ್ಡ್ ಮೆಡಿಸಿನ್ಅಭಿನಂದಿಸಿದೆ ಮತ್ತು ಸಾರ್ವಜನಿಕ ಸೇವೆಗೆ ಅವರ ಬದ್ಧತೆಯನ್ನು "ಶ್ಲಾಘನೀಯ" ಎಂದು ಕರೆದಿದೆ. ಒಂದು ಸಂಸ್ಥೆಯಾಗಿ ನಾವು NIH ಮಿಷನ್‌ನ ದೃಢವಾದ ಬೆಂಬಲಿಗರಾಗಿದ್ದೇವೆ. ಇದು ವೈದ್ಯಕೀಯ ಜ್ಞಾನದ ಗಡಿಗಳನ್ನು ಮುಂದುವರಿಸಲು ಮತ್ತು ಆರೋಗ್ಯ ಸುಧಾರಣೆಗೆ ಹೊಸ ಆವಿಷ್ಕಾರಗಳನ್ನು ಮುಂದುವರೆಸಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.