ಗಾಜಾ ಪಟ್ಟಿಯ ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಯಲ್ಲಿರುವ ಅಪೌಷ್ಟಿಕತೆಯಿಂದ ಬಳಲುತ್ತಿರುವವರು  
ವಿದೇಶ

ಮಾನವೀಯ ನೆರವಿಗೆ ಇಸ್ರೇಲ್ ತಡೆ: ಮುಂದಿನ 48 ಗಂಟೆಗಳಲ್ಲಿ ಗಾಜಾದಲ್ಲಿ 14 ಸಾವಿರ ಮಕ್ಕಳ ಪ್ರಾಣ ಅಪಾಯದಲ್ಲಿ ಎಂದ ಗಾಜಾ

ಮುಂದಿನ 48 ಗಂಟೆಗಳಲ್ಲಿ ನಾವು ಸಾಧ್ಯವಾದಷ್ಟು 14,000 ಶಿಶುಗಳನ್ನು ಉಳಿಸಲು ಬಯಸುತ್ತೇವೆ ಎಂದು ಬಿಬಿಸಿಗೆ ತಿಳಿಸಿದ್ದಾರೆ.

ಯುನೈಟೆಡ್ ನೇಷನ್ಸ್: ಸಾಕಷ್ಟು ನೆರವು ಸಮಯಕ್ಕೆ ತಲುಪದಿದ್ದರೆ ಮುಂದಿನ 48 ಗಂಟೆಗಳಲ್ಲಿ ಗಾಜಾದಲ್ಲಿ 14,000 ಕ್ಕೂ ಹೆಚ್ಚು ಮಕ್ಕಳು ಸಾಯಬಹುದು ಎಂದು ವಿಶ್ವಸಂಸ್ಥೆಯ ಮಾನವೀಯ ಮುಖ್ಯಸ್ಥ ಟಾಮ್ ಫ್ಲೆಚರ್ ಹೇಳಿದ್ದಾರೆ. ಇಸ್ರೇಲ್‌ನ ಮೂರು ತಿಂಗಳ ಕಾಲದ ಮಾನವೀಯ ನೆರವಿನ ದಿಗ್ಬಂಧನವು ಗಾಜಾ ಜನರನ್ನು ಕ್ಷಾಮದಂತಹ ಪರಿಸ್ಥಿತಿಗೆ ತಳ್ಳಿದೆ, ಇದರ ಪರಿಣಾಮವಾಗಿ ಹಲವು ಶಿಶುಗಳು ಮತ್ತು ಮಕ್ಕಳು ಸೇರಿದಂತೆ ಹಲವು ಜನ ಮೃತಪಟ್ಟಿದ್ದಾರೆ.

ಬಿಬಿಸಿ ರೇಡಿಯೊ 4 ರ ಟುಡೇ ಕಾರ್ಯಕ್ರಮದಲ್ಲಿ ಮಾತನಾಡಿದ ಫ್ಲೆಚರ್, ಇಸ್ರೇಲ್‌ನ ಇತ್ತೀಚಿನ ಘೋಷಣೆ ನಂತರ ಗಾಜಾಕ್ಕೆ ಮಾಡಿದ ನೆರವು "ಸಾಗರದಲ್ಲಿ ಹನಿ" ಯಂತಾಗಿದ್ದು, ಜನರ ಅಗತ್ಯಗಳಿಗೆ ಸಾಕಾಗುತ್ತಿಲ್ಲ ಎಂದಿದ್ದಾರೆ.

ಮುಂದಿನ 48 ಗಂಟೆಗಳಲ್ಲಿ ನಾವು ಸಾಧ್ಯವಾದಷ್ಟು 14,000 ಶಿಶುಗಳನ್ನು ಉಳಿಸಲು ಬಯಸುತ್ತೇವೆ ಎಂದು ಬಿಬಿಸಿಗೆ ತಿಳಿಸಿದ್ದಾರೆ. ಇಸ್ರೇಲ್, ಮಾನವೀಯ ನೆರವಿಗೆ ತಡೆ ನೀಡುತ್ತಿರುವುದರಿಂದ ಗಾಜಾದಲ್ಲಿ ಸುಮಾರು 2,90,000 ಮಕ್ಕಳು ಸಾವಿನ ಅಂಚಿನಲ್ಲಿದ್ದಾರೆ ಎಂದು ಗಾಜಾದ ಸರ್ಕಾರಿ ಮಾಧ್ಯಮ ಕಚೇರಿ (GMO) ಈ ತಿಂಗಳ ಆರಂಭದಲ್ಲಿ ಹೇಳಿತ್ತು.

ಪ್ರತಿದಿನ 1.1 ಮಿಲಿಯನ್ ಮಕ್ಕಳು ಬದುಕುಳಿಯಲು ಕನಿಷ್ಠ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ಹೊಂದಿರದ ಸಮಯದಲ್ಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ಮಾಡುತ್ತಿರುವ ಕೆಲಸ ನಾಚಿಕೆಗೇಡಿನ ವಿಷಯವಾಗಿದೆ. ಗಾಜಾದಲ್ಲಿ ಇಲ್ಲಿಯವರೆಗೆ ಕನಿಷ್ಠ 57 ಪ್ಯಾಲೆಸ್ತೀನಿಯನ್ನರು ಹಸಿವಿನಿಂದ ಮೃತಪಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಗಾಜಾದಲ್ಲಿ ವಿಶ್ವಸಂಸ್ಥೆಯ ಬಲವಾದ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಫ್ಲೆಚ್ಚರ್ ಹೇಳಿದ್ದಾರೆ.

ಇಸ್ರೇಲ್‌ನ ನಿರಂತರ ಬಾಂಬ್ ದಾಳಿಯಲ್ಲಿ ಗಾಜಾದಲ್ಲಿ ವಿಶ್ವಸಂಸ್ಥೆಯ ಪ್ಯಾಲೇಸ್ತೀನಿಯನ್ ನಿರಾಶ್ರಿತರ ಸಂಸ್ಥೆಯ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಅಲ್ ಜಜೀರಾ ಪ್ರಕಾರ, ಯುಎನ್‌ಆರ್‌ಡಬ್ಲ್ಯೂಎ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇಬ್ಬರು ವಿಶ್ವಸಂಸ್ಥೆಯ ಕಾರ್ಯಕರ್ತರು ಮೃತಪಟ್ಟಿದ್ದಾರೆ. ಇಸ್ರೇಲ್ ತನ್ನ ಜನಾಂಗೀಯ ವಿನಾಶಕಾರಿ ಯುದ್ಧದ ಆರಂಭದಿಂದಲೂ ನೆರವು ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಮತ್ತು ಪತ್ರಕರ್ತರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿದೆ. ಅಕ್ಟೋಬರ್ 2023 ರಿಂದ ಗಾಜಾದಲ್ಲಿ ಇಸ್ರೇಲ್ 200 ಕ್ಕೂ ಹೆಚ್ಚು ಪತ್ರಕರ್ತರನ್ನು ಕೊಂದಿದೆ.

ಈ ಮಧ್ಯೆ ಇಂಗ್ಲೆಂಡ್ ಮಂಗಳವಾರ ಇಸ್ರೇಲ್ ಜೊತೆಗಿನ ಮುಕ್ತ ವ್ಯಾಪಾರ ಮಾತುಕತೆಗಳನ್ನು ಸ್ಥಗಿತಗೊಳಿಸಿತು, ಗಾಜಾದಲ್ಲಿ ಅದರ ತೀವ್ರಗೊಂಡ ನರಮೇಧ ಕಾರ್ಯಾಚರಣೆಗಳನ್ನು ಅತ್ಯಂತ ಅಸಹನೀಯ ಎಂದು ಕರೆದಿದೆ, ಕದನ ವಿರಾಮ ಮತ್ತು ಗಾಜಾದಲ್ಲಿ ಪರಿಣಾಮ ಬೀರುವವರಿಗೆ ಮಾನವೀಯ ನೆರವು ಹೆಚ್ಚಿಸುವ ಕರೆಗಳನ್ನು ಪುನರುಚ್ಚರಿಸಿದೆ.

ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ 19 ತಿಂಗಳ ಸುದೀರ್ಘ ನರಮೇಧದ ಯುದ್ಧದಿಂದ ಇಲ್ಲಿಯವರೆಗೆ 53,339 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರನ್ನು ಕೊಂದಿದೆ, ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಮತ್ತು ಕನಿಷ್ಠ 121,034 ಜನರು ಗಾಯಗೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT