ರೈಲಿನಲ್ಲಿ ಊಟ ಮಾಡುತ್ತಿರುವ ಮಹಿಳೆ 
ವಿದೇಶ

London: ಟ್ಯೂಬ್ ರೈಲಿನಲ್ಲಿ ಕೈಯಿಂದ ಊಟ ಮಾಡಿದ ಭಾರತೀಯ ಮಹಿಳೆ; ವಿಡಿಯೋ ವೈರಲ್! ವ್ಯಾಪಕ ಚರ್ಚೆ

ಕೆಲವರು ಇದನ್ನು ಸಾಂಪ್ರದಾಯಿಕ ಅಭ್ಯಾಸ ಎಂದರೆ ಮತ್ತೆ ಕೆಲವರು ಇದನ್ನು 'ಅನೈರ್ಮಲ್ಯ', ಸಾರ್ವಜನಿಕ ಜಾಗದಲ್ಲಿ ಹಾಗೆ ಮಾಡಬಾರದು ಅನುತ್ತಿದ್ದಾರೆ.

ಲಂಡನ್: ಲಂಡನ್ ನ ಟ್ಯೂಬ್ ರೈಲಿನಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಕೈಯಿಂದ ಊಟ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.

ಕೆಲವರು ಇದನ್ನು ಸಾಂಪ್ರದಾಯಿಕ ಅಭ್ಯಾಸ ಎಂದರೆ ಮತ್ತೆ ಕೆಲವರು ಇದನ್ನು 'ಅನೈರ್ಮಲ್ಯ', ಸಾರ್ವಜನಿಕ ಜಾಗದಲ್ಲಿ ಹಾಗೆ ಮಾಡಬಾರದು ಅನುತ್ತಿದ್ದಾರೆ. ಆದರೆ ಏಷ್ಯಾ ಮತ್ತು ಆಫ್ರಿಕಾ ಸೇರಿದಂತೆ ಪ್ರಪಂಚದ ಅನೇಕ ಭಾಗಗಳಲ್ಲಿ ಅತಿ ಹೆಚ್ಚಾಗಿ ರೂಢಿಯಾಗಿರುವ ಕೈಗಳಿಂದ ತಿನ್ನುವುದು ಅನಾರೋಗ್ಯಕರವಾಗಿದೆಯೇ? ಎಂಬ ಪ್ರಶ್ನೆ ಎದ್ದಿದೆ.

ವಿಡಿಯೋದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಮೊಬೈಲ್ ನಲ್ಲಿ ಮಾತನಾಡುತ್ತಾ ಕೈಯಿಂದ ಕರಿ ಮತ್ತು ಅನ್ನವನ್ನು ತಿನ್ನುತ್ತಿರುವುದು ಸೆರೆಯಾಗಿದೆ. ಇದನ್ನು ಮೊದಲಿಗೆ TikTok ನಲ್ಲಿ ಶೇರ್ ಮಾಡಲಾಗಿದೆ. ತದನಂತರ ಎಕ್ಸ್ ಬಳಕೆದಾರರು ಹೆಚ್ಚೆಚ್ಚು ಶೇರ್ ಮಾಡುತ್ತಾ ವಿಡಿಯೋ ವೈರಲ್ ಆಗಿದೆ.

ಜೊತೆಗೆ ಆನ್ ಲೈನ್ ನಲ್ಲಿ ಕೈಯಲ್ಲಿ ಅನ್ನ ತಿನ್ನುವ ಅಭ್ಯಾಸದ ಕುರಿತು ಪರ ಹಾಗೂ ವಿರುದ್ಧ ತೀವ್ರವಾದ ಚರ್ಚೆ ನಡೆಯುತ್ತಿದೆ. ಪಾಶ್ಚಾತ್ಯರು ಯಾವಾಗಲೂ ಕೈಯಿಂದ ತಿನ್ನುವುದನ್ನು ಕೀಳಾಗಿ ನೋಡುತ್ತಾರೆ. ಆದರೆ ಭಾರತ ಸೇರಿದಂತೆ ವಿಶ್ವದ ಅನೇಕ ಕಡೆಗಳಲ್ಲಿ ಕೈಯಿಂದ ತಿನ್ನುವುದು ರೂಢಿಯಲ್ಲಿದ್ದು, ಕೆಲವರು ಇದು ಆರೋಗ್ಯಕ್ಕೆ ಒಳ್ಳೆಯದಲ್ಲಾ ಎಂಬಂತಹ ಸಲಹೆ ನೀಡಿದ್ದಾರೆ.

ಆಕೆ ಯಾರೊಂದಿಗೂ ಮಾತನಾಡುತ್ತಿಲ್ಲ. ಆಕೆ ತನ್ನ ಊಟವನ್ನು ಎಂಜಾಯ್ ಮಾಡುತ್ತಿದ್ದಾರೆ. ಆಕೆಯನ್ನು ತನ್ನ ಪಾಡಿಗೆ ಇರುವುದನ್ನು ಬಿಟ್ಟು ನಿಮ್ಮದೇನೂ ಅದ್ನ ನೋಡಿಕೊಳ್ಳಿ ಎಂದು ಮತ್ತೋರ್ವ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT