ಸಭೆಯಿಂದ ಹೊರ ನಡೆದ ಮಿಸ್ ಯೂನಿವರ್ಸ್ ಸ್ಪರ್ಧಿಗಳು 
ವಿದೇಶ

Miss Universe: ಸ್ಪರ್ಧೆ ಆರಂಭಕ್ಕೂ ಮುನ್ನವೇ ಹೈಡ್ರಾಮಾ; ಹೊರ ನಡೆದ ರೂಪದರ್ಶಿಯರು; ಆಗಿದ್ದೇನು? Video

ನವಾತ್ ಇತ್ಸರಾಗ್ರಿಸಿಲ್ ಮಾತಿನಿಂದ ಆಕ್ರೋಶಗೊಂಡ ಸ್ಫರ್ಧಿಗಳು ಸಭೆಯಿಂದ ಹೊರ ನಡೆದ ಪ್ರಸಂಗವೂ ನಡೆದಿದೆ.

ಮೆಕ್ಸಿಕೋ ಸಿಟಿ: 74ನೇ ಮಿಸ್ ಯೂನಿವರ್ಸ್ ಸ್ಪರ್ಧೆಯ ಆರಂಭದಲ್ಲೇ ದೊಡ್ಡ ಹೈಡ್ರಾಮಾ ನಡೆದಿದ್ದು, ಸ್ಪರ್ಧಿಗಳು ಮತ್ತು ಆಯೋಜಕರ ನಡುವಿನ ಗೊಂದಲಗಳಿಂದ ಸ್ಪರ್ಧೆಯನ್ನೇ ಮುಂದೂಡುವ ಪರಿಸ್ಥಿತಿ ಬಂದಿದೆ.

ಹೌದು.. 74ನೇ ಮಿಸ್ ಯೂನಿವರ್ಸ್ ಸ್ಪರ್ಧೆಯ ಮಂಗಳವಾರ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮವಾದ 'ಸಾಶಿಂಗ್ ಸೆರೆಮನಿ' ಆರಂಭವಾಗುವ ಮುನ್ನವೇ, ಸ್ಪರ್ಧಿಗಳು ಮತ್ತು ಆಯೋಜಕರಾದ ಮಿಸ್ ಯೂನಿವರ್ಸ್ ಥೈಲ್ಯಾಂಡ್ (MUT) ನ ರಾಷ್ಟ್ರೀಯ ನಿರ್ದೇಶಕ ನವಾತ್ ಇತ್ಸರಾಗ್ರಿಸಿಲ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ನವಾತ್ ಇತ್ಸರಾಗ್ರಿಸಿಲ್ ಮಾತಿನಿಂದ ಆಕ್ರೋಶಗೊಂಡ ಸ್ಫರ್ಧಿಗಳು ಸಭೆಯಿಂದ ಹೊರ ನಡೆದ ಪ್ರಸಂಗವೂ ನಡೆದಿದೆ.

ಆಗಿದ್ದೇನು?

MUT ನಿರ್ದೇಶಕ ನವಾತ್ ಪ್ರೋಮೋ ಚಿತ್ರಿಕರಣದಲ್ಲಿ ಭಾಗವಹಿಸದ ಸ್ಪರ್ಧಿಗಳು ಹಾಗೂ ಸ್ಪರ್ಧಿಗಳಿಗೆ ಕೆಲವು ಕ್ಯಾಸಿನೋ ಸಂಸ್ಥೆಗಳು ಪ್ರಾಯೋಜಿಸುತ್ತಿರುವಂತಹ ವಿಷಯಗಳ ಕುರಿತು ಮಾತನಾಡಿದರು.

ಈ ವೇಳೆ ನವಾತ್ , MUT ನ ಪ್ರಚಾರ ಕಾರ್ಯಕ್ರಮಗಳಿಗೆ ಒಪ್ಪಿಗೆ ನೀಡದ ಸ್ಪರ್ಧಿಗಳನ್ನು ತಮ್ಮ ಕೈ ಎತ್ತಲು ಕೇಳಿದರು. ಯಾರೂ ಕೈ ಎತ್ತದಿದ್ದಾಗ, ಅವರು ಮೆಕ್ಸಿಕೊ ಪ್ರತಿನಿಧಿ ಫಾತಿಮಾ ಬಾಶ್ ಅವರನ್ನು ಹೆಸರಿಸಿ ಮಾತನಾಡಿ ತಮ್ಮ ಸಿಬ್ಬಂದಿ ನೀಡಿದ ಮಾಹಿತಿ ಪ್ರಕಾರ, ಫಾತಿಮಾ ಅವರ ರಾಷ್ಟ್ರೀಯ ನಿರ್ದೇಶಕರು ಥೈಲ್ಯಾಂಡ್ ಬಗ್ಗೆ ಯಾವುದೇ ಪೋಸ್ಟ್ ಮಾಡದಂತೆ ಸೂಚನೆ ನೀಡಿದ್ದಾರೆ ಎಂದು ನವಾತ್ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಫಾತಿಮಾ, ತಾವು ನವಾತ್ ಅವರ ಆದೇಶಗಳನ್ನು ಪಾಲಿಸುವುದಾಗಿ ತಿಳಿಸಿದರು.ಆದರೆ, ಫಾತಿಮಾ ಮಾತನಾಡುತ್ತಿದ್ದಂತೆಯೇ, ಮೆಕ್ಸಿಕೊದ ರಾಷ್ಟ್ರೀಯ ನಿರ್ದೇಶಕರನ್ನು ದೇಶದಿಂದ ಹೊರಹಾಕಲಾಗಿದೆ ಎಂದು ಹೇಳಿದ್ದಾರೆ.

ಇನ್ನು, ಕೆಲ ಕ್ಷಣಗಳ ನಂತರ ಮತ್ತೆ ನವಾತ್‌ ನಿಮ್ಮ ರಾಷ್ಟ್ರೀಯ ನಿರ್ದೇಶಕರ ಆದೇಶಗಳನ್ನು ನೀವು ಪಾಲಿಸಿದರೆ, ನೀವು ಮೂರ್ಖರಾಗುತ್ತೀರಿ ಎಂದು ಹೇಳಿದ್ದಾರೆ.

ಇದಕ್ಕೆ ಸ್ಪಷ್ಟನೆ ಕೇಳಲು ಫಾತಿಮಾ ಮುಂದಾದಾಗ ನವಾತ್‌ ನಾನು ಮೈಕ್ರೋಪೋನ್‌ ನಲ್ಲಿ ಮಾತನಾಡುತ್ತಿದ್ದೇನೆ, ಹಾಗೂ ನಾನು ಎಲ್ಲರೊಂದಿಗೆ ಮಾತನಾಡುತಿರುವಾಗ ನೀನು ಏಕೆ ಮಧ್ಯೆ ಎದ್ದು ನಿಲ್ಲುತ್ತಿದ್ದೀಯಾ ಎಂದು ಕೇಳಿದಾಗ ಆಕೆ ಏಕೆಂದರೆ ನನಗೂ ಧ್ವನಿ ಇದೆ ಎಂದಿದ್ದಾಳೆ.

ಇದಕ್ಕೆ ಕೋಪಗೊಂಡ ನವಾತ್‌ ಹೌದು ನಿಮಗೂ ಧ್ವನಿ ಇದೆ, ಆದರೆ ನಾನು ಮಾತನಾಡುವಾಗ ನೀವು ಗೌರವಿಸಬೇಕು ಎಂದು ಹೇಳಿ, ಏಕಾಏಕಿ ಭದ್ರತಾ ಸಿಬ್ಬಂದಿಯನ್ನು ಕರೆದು ಆಕೆಯನ್ನು ಹೊರತೆಗೆದುಕೊಂಡು ಹೋಗಲು ಆದೇಶಿಸಿದ್ದಾರೆ.

ಇದಕ್ಕೆ ಫಾತಿಮ ನೀವು ಒಬ್ಬ ಮಹಿಳೆಯಾಗಿ ನನ್ನನ್ನು ಗೌರವಿಸುತ್ತಿಲ್ಲ, ಒಬ್ಬ ಮಹಿಳೆಯಾಗಿ, ನಾವು ಗೌರವಿಸಲ್ಪಡುತ್ತೇವೆ ಮತ್ತು ಗೌರವಿಸಲ್ಪಡಬೇಕು. ನಾನು ನನ್ನ ದೇಶವನ್ನು ಪ್ರತಿನಿಧಿಸಲು ಇಲ್ಲಿಗೆ ಬಂದಿದ್ದೇನೆ, ನನ್ನ ಸಂಸ್ಥೆಯೊಂದಿಗೆ ನಿಮಗೆ ಸಮಸ್ಯೆಗಳಿರುವುದು ನನ್ನ ತಪ್ಪಲ್ಲ ಎಂದರು.

ಸಭೆಯಿಂದ ಹೊರ ನಡೆದ ಸ್ಪರ್ಧಿಗಳು

ಇತ್ತ ಫಾತಿಮ ಅವರನ್ನು ನವಾತ್‌ ನಿರ್ವಹಿಸಿದ ರೀತಿ ಅಲ್ಲಿದ್ದ ಹಲವು ಸ್ಪರ್ಧಿಗಳನ್ನು ಕೆರಳಿಸಿದ್ದು, ಹಾಲಿ ಮಿಸ್ ಯೂನಿವರ್ಸ್ ವಿಕ್ಟೋರಿಯಾ ಕಜಾರ್ ಥೇಲ್ವಿಗ್ ಕೋಣೆಯಿಂದ ಹೊರ ನಡೆಯುತ್ತಿದ್ದಂತೆ, ಇತರೆ ಸ್ಪರ್ಧಿಗಳೂ ಕೂಡ ಅವರನ್ನು ಹಿಂಬಾಲಿಸಿದ್ದಾರೆ.

ನಂತರ ಮಾಧ್ಯಮಗಳೊಂದಿಗೆ ಈ ಕುರಿತು ಮಾತಾನಾಡಿದ ವಿಕ್ಟೋರಿಯಾ " ನಾವು ಎಲ್ಲರನ್ನೂ ಗೌರವಿಸುತ್ತೇವೆ, ಆದರೆ ವಿಷಯಗಳನ್ನು ಹೀಗೆ ನಿರ್ವಹಿಸಬಾರದು. ಇನ್ನೊಬ್ಬ ಹೆಣ್ಣನ್ನು ಹೀಗೆ ಟೀಕಿಸುವುದು ಅತ್ಯಂತ ಅವಮಾನಕರ" ಎಂದು ನವಾತ್‌ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಮಿಸ್ ಮೆಕ್ಸಿಕೋರನ್ನು ಬೆಂಬಲಿಸುವವರ ಅನರ್ಹ

ಅಂತೆಯೇ ಮಿಸ್ ಮೆಕ್ಸಿಕೊವನ್ನು ಬೆಂಬಲಿಸುವವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸುವುದಾಗಿಯೂ ಅವರು ನವಾತ್ ಬಾಷ್ ಬೆದರಿಕೆ ಹಾಕಿದರು. "ಯಾರಾದರೂ ಸ್ಪರ್ಧೆಯನ್ನು ಮುಂದುವರಿಸಲು ಬಯಸಿದರೆ, ಕುಳಿತುಕೊಳ್ಳಿ. ನೀವು ಹೊರಬಂದರೆ, ಉಳಿದ ಹುಡುಗಿಯರು ಮುಂದುವರಿಯುತ್ತಾರೆ" ಎಂದು ಅವರು ಹೇಳಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಮೂರ್ಖರು ಎಂಬ ಹೇಳಿಕೆ ಸರಿಯಲ್ಲ

ಇನ್ನು ಈ ಕುರಿತು ಮಾತನಾಡಿರುವ ಮೆಕ್ಸಿಕೋ ಪ್ರತಿನಿಧಿಸುತ್ತಿರುವ ಸ್ಪರ್ಧಿ ಫಾತಿಮ "ಥಾಯ್ ಜನರ ಮೇಲೆ ನನಗೆ ಅಪಾರ ಪ್ರೀತಿ ಹಾಗೂ ಗೌರವವಿದೆ . ಆದರೆ, ನವಾತ್ ಅವರ ʼಮೂರ್ಖರುʼ ಎಂಬ ಹೇಳಿಕೆಯ ಸರಿಯಲ್ಲ. ಜಗತ್ತು ಇದನ್ನು ಕೇಳಬೇಕು ಮತ್ತು ನೋಡಬೇಕು, ಏಕೆಂದರೆ ನಾವೆಲ್ಲರೂ ಸಬಲ ಮಹಿಳೆಯರು. ಈ ವೇದಿಕೆಯು ನಮ್ಮ ಧ್ವನಿಗಾಗಿ ಇದೆ, ಮತ್ತು ಯಾರೂ ನಮ್ಮ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ" ಎಂದು ಫಾತಿಮಾ ಹೇಳಿದ್ದಾರೆ.

ಘಟನೆ ಖಂಡಿಸಿದ ಎಂಒಯು

ಮಿಸ್ ಯೂನಿವರ್ಸ್ ಆರ್ಗನೈಸೇಶನ್ (ಎಂಒಯು) ಇಟ್ಸಾರಾಗಿಸಿಲ್ ನಡವಳಿಕೆಯನ್ನು ಖಂಡಿಸಿದ್ದು, ಮಾತ್ರವಲ್ಲದೇ ಸ್ಪರ್ಧೆಯಲ್ಲಿ ಅವರ ಭಾಗವಹಿಸುವಿಕೆ ಗಮನಾರ್ಹವಾಗಿ ಕಡಿತಗೊಳಿಸಲಾಗುತ್ತದೆ ಎಂದು ಹೇಳಿದೆ.

ಕ್ಷಮೆಯಾಚನೆ

ಇನ್ನು ಮಿಸ್ ಯೂನಿವರ್ಸ್ ಸ್ಪರ್ಧೆ ಆರಂಭದಲ್ಲೇ ವಿವಾದವಾಗುತ್ತಲೇ ಎಚ್ಚೆತ್ತ Itsaragrisil ತಮ್ಮ ಕೃತ್ಯಗಳಿಗೆ ಕ್ಷಮೆಯಾಚಿಸಿದ್ದಾರೆ. ನಾನು "ತುಂಬಾ ಒತ್ತಡಕ್ಕೊಳಗಾಗಿದ್ದೆ" ಎಂದು ಹೇಳಿದ್ದಾರೆ. "ಯಾರಿಗಾದರೂ ಕೆಟ್ಟದಾಗಿ, ಅನಾನುಕೂಲವಾಗಿ ಅಥವಾ ಪ್ರಭಾವಿತರಾಗಿದ್ದರೆ, ನಾನು ಎಲ್ಲರಲ್ಲೂ ಕ್ಷಮೆಯಾಚಿಸುತ್ತೇನೆ. ನಾನು ವಿಶೇಷವಾಗಿ ಹಾಜರಿದ್ದ ಸುಮಾರು 75 ಹುಡುಗಿಯರಿಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.

ಬಾಷ್ ಪ್ರತಿಕ್ರಿಯೆ

ನಂತರದ ಸಂದರ್ಶನವೊಂದರಲ್ಲಿ ಮಾತನಾಡಿದ ಸ್ಪರ್ಧಿ Miss Mexico ಬಾಷ್, "ನನ್ನ ದೇಶಕ್ಕೆ ತಿಳಿಸಲು ನಾನು ಬಯಸುತ್ತೇನೆ, ನನ್ನ ಧ್ವನಿಯನ್ನು ಕೇಳಲು ನಾನು ಹೆದರುವುದಿಲ್ಲ. ಇದು ಇಲ್ಲಿ ಎಂದಿಗಿಂತಲೂ ಬಲವಾಗಿದೆ. ನನಗೆ ಒಂದು ಉದ್ದೇಶವಿದೆ.

ನನಗೆ ಹೇಳಲು ವಿಷಯಗಳಿವೆ. ನಾವು 21 ನೇ ಶತಮಾನದಲ್ಲಿದ್ದೇವೆ. ಮೇಕಪ್ ಮಾಡಲು, ಸ್ಟೈಲ್ ಮಾಡಲು ಮತ್ತು ನನ್ನ ಬಟ್ಟೆಗಳನ್ನು ಬದಲಾಯಿಸಲು ನಾನು ಗೊಂಬೆಯಲ್ಲ. ಎಲ್ಲಾ ಮಹಿಳೆಯರು ಮತ್ತು ಉದ್ದೇಶಗಳಿಗಾಗಿ ಹೋರಾಡುವ ಎಲ್ಲಾ ಹುಡುಗಿಯರಿಗೆ ಧ್ವನಿಯಾಗಲು ಮತ್ತು ನನ್ನ ದೇಶಕ್ಕೆ ನಾನು ಅದಕ್ಕೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ ಎಂದು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ ವಿಧಾನಸಭೆ ಚುನಾವಣೆ: ಮೊದಲ ಹಂತದ ಚುನಾವಣೆ ಮುಕ್ತಾಯ, ಒಟ್ಟಾರೇ ಶೇ. 60,25 ರಷ್ಟು ಮತದಾನ!

ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ತೀವ್ರ: ಸಂಪುಟ ಸಭೆ ನಂತರ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ರೈತರ ಆಕ್ರೋಶದ ಕಿಚ್ಚು: ಸಚಿವ ಶಿವಾನಂದ ಪಾಟೀಲ್ ಕಾರ್ ಮೇಲೆ ಚಪ್ಪಲಿ, ನೀರಿನ ಬಾಟಲ್ ಎಸೆದು ಆಕ್ರೋಶ!

ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ 5 ಸಚಿವರು ಸೇರಿ 67 ಶಾಸಕರ ಪಟ್ಟಿ ಬಿಡುಗಡೆ

ಕಬ್ಬು ಬೆಳೆಗಾರರ ಪ್ರತಿಭಟನೆ: 'ಕೇಂದ್ರದ ಕಡೆ ಬೊಟ್ಟು', ಕೈ ತೊಳೆದುಕೊಳ್ಳುವ ಪ್ರಯತ್ನ, ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿ!

SCROLL FOR NEXT