ಇಸ್ಲಾಮಾಬಾದ್ ಕೋರ್ಟ್ ನಲ್ಲಿ ಕಾರ್ ಬಾಂಬ್ ಸ್ಫೋಟ AP
ವಿದೇಶ

ದೆಹಲಿ ಬೆನ್ನಲ್ಲೇ ಪಾಕಿಸ್ತಾನದಲ್ಲೂ ಭೀಕರ ಸ್ಫೋಟ: ಜಿಲ್ಲಾ ನ್ಯಾಯಾಲಯದಲ್ಲಿ ಕಾರ್ ಬಾಂಬ್ ಬ್ಲಾಸ್ಟ್, ಕನಿಷ್ಠ 12 ಮಂದಿ ಸಾವು

ಸಾವಿಗೀಡಾದವರಲ್ಲಿ ಹೆಚ್ಚಿನವರು ನ್ಯಾಯಾಲಯಕ್ಕೆ ಆಗಮಿಸಿದ್ದವರು ಅಥವಾ ಪಾದಚಾರಿಗಳು. ಸ್ಫೋಟದಿಂದ ಹಲವಾರು ವಾಹನಗಳಿಗೆ ಹಾನಿಯಾಗಿದ್ದು, ಯಾವುದೇ ಸಂಘಟನೆ ಈ ಘಟನೆಯ ಹೊಣೆ ಹೊತ್ತಿಲ್ಲ.

ಇಸ್ಲಾಮಾಬಾದ್: ದೆಹಲಿ ಬಾಂಬ್ ಸ್ಫೋಟ ಪ್ರಕರಣ ಹಸಿರಾಗಿರುವಂತೆಯೇ ಅತ್ತ ಪಾಕಿಸ್ತಾನದಲ್ಲೂ ಭೀಕರ ಕಾರ್ ಬಾಂಬ್ ಸ್ಫೋಟ ಸಂಭವಿಸಿ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ.

ಇಸ್ಲಾಮಾಬಾದ್‌ನ ಜಿಲ್ಲಾ ನ್ಯಾಯಾಲಯದ ಹೊರಗೆ ನಡೆದ ಕಾರು ಸ್ಫೋಟದಲ್ಲಿ 12 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ನ್ಯಾಯಾಲಯಕ್ಕೆ ಆಗಮಿಸಿದ್ದವರು ಅಥವಾ ಪಾದಚಾರಿಗಳು. ಸ್ಫೋಟದಿಂದ ಹಲವಾರು ವಾಹನಗಳಿಗೆ ಹಾನಿಯಾಗಿದ್ದು, ಯಾವುದೇ ಸಂಘಟನೆ ಈ ಘಟನೆಯ ಹೊಣೆ ಹೊತ್ತಿಲ್ಲ.

ಇಸ್ಲಾಮಾಬಾದ್ ಜಿಲ್ಲಾ ನ್ಯಾಯಾಲಯದ ಹೊರಭಾಗದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಭಾರೀ ತೀವ್ರತೆಯ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ ಹಾಗೂ 20 ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಸಂಸ್ಥೆ ಪಾಕಿಸ್ತಾನ್ ಟಿವಿ ವರದಿ ಮಾಡಿದೆ.

ಪೊಲೀಸರು ಮತ್ತು ಆಂಬುಲೆನ್ಸ್ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುತ್ತುವರಿಸಿದ್ದಾರೆ. ಸ್ಫೋಟ ಶಬ್ದವು ನಗರದಿಂದ ಮೈಲಿಗಳಷ್ಟು ದೂರದವರೆಗೆ ಕೇಳಿಬಂದಿದೆ. ಸ್ಫೋಟದ ತೀವ್ರತೆಗೆ ನ್ಯಾಯಾಲಯದ ಹೊರಗೆ ನಿಲ್ಲಿಸಿದ್ದ ಹಲವಾರು ವಾಹನಗಳು ಸಹ ಹಾನಿಗೊಳಗಾಗಿವೆ. ನ್ಯಾಯಾಲಯಕ್ಕೆ ಹಾಜರಾಗಿದ್ದವರು ಹಾಗೂ ಪಾದಚಾರಿಗಳು ಮೃತರು ಮತ್ತು ಗಾಯಾಳುಗಳಲ್ಲಿ ಸೇರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

5 ಕಿ.ಮೀ. ದೂರದವರೆಗೂ ಕೇಳಿದ ಸ್ಫೋಟದ ಸದ್ದು!

ಮಧ್ಯಾಹ್ನದ ಹೊತ್ತಿನಲ್ಲಿ ಜನರು ಹೆಚ್ಚಾಗಿರುವ ಸಮಯದಲ್ಲೇ ಈ ಬಾಂಬ್ ಸ್ಫೋಟ ಸಂಭವಿಸಿದ್ದು, ಉಗ್ರರಿಂದಲೇ ಆಗಿರುವ ಕೃತ್ಯ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಸ್ಫೋಟದ ತೀವ್ರತೆ ಎಷ್ಟಿತ್ತು ಎಂದರೆ ಬರೊಬ್ಬರಿ 5 ಕಿ.ಮೀದೂರದವರೆಗೂ ಬಾಂಬ್ ಸ್ಫೋಟದ ಶಬ್ದಕೇಳಿದೆ.

ಅಂತೆಯೇ ಸುತ್ತಮುತ್ತಲು ಇದ್ದ ವಾಹನಗಳು ಕೂಡ ಸ್ಫೋಟದಲ್ಲಿ ಹಾನಿಗೀಡಾಗಿದ್ದು, ಗಾಯಗೊಂಡವರ ಪೈಕಿ ಹೆಚ್ಚಿನ ಜನರು ವಕೀಲರು ಮತ್ತು ಕೋರ್ಟ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಎನ್ನಲಾಗಿದೆ. ಮತ್ತೊಂದು ಕಡೆ ಪೊಲೀಸರು ಆತ್ಮಹತ್ಯಾ ದಾಳಿ ಇದಾಗಿರಬಹುದು ಎಂದು ಶಂಕಿಸಿದ್ದಾರೆ.

ದಕ್ಷಿಣ ವಜಿರಿಸ್ತಾನದ ಕೆಡೆಟ್ ಕಾಲೇಜು ವಾನಾದಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಡೆಸಿದ ದಾಳಿಯನ್ನು ಪಾಕಿಸ್ತಾನಿ ಭದ್ರತಾ ಪಡೆಗಳು ವಿಫಲಗೊಳಿಸಿದ ಕೆಲವೇ ಗಂಟೆಗಳ ನಂತರ ಈ ಸ್ಫೋಟ ಸಂಭವಿಸಿದೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಟಿಟಿಪಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಹಾರ ವಿಧಾನಸಭಾ ಚುನಾವಣೆ 2025: Exit Poll Results ಬಹಿರಂಗ; ಯಾರಿಗೆ ಎಷ್ಟು ಸ್ಥಾನ?- ಇಲ್ಲಿದೆ ಮಾಹಿತಿ

Delhi Blast: ಆಪರೇಷನ್ ಸಿಂದೂರ್ ಗೆ ಸೇಡು... 20 ಟೈಮರ್, 3000 ಕೆಜಿ ಸ್ಫೋಟಕ.. ಉಗ್ರರ ಯೋಜನೆ ಕಾರ್ಯಗತವಾಗಿದ್ದರೇ ಇತಿಹಾಸದ ಅತೀ ದೊಡ್ಡ 'ಭಯೋತ್ಪಾದಕ ದಾಳಿ'!

Delhi Red Fort blast: ಸ್ಪೂಟಕ್ಕೂ ಮುನ್ನ 3 ಗಂಟೆ ಕಾರು ಪಾರ್ಕಿಂಗ್! ನಿರ್ಣಾಯಕ 'ಮೂರು ಆಯಾಮ'ಗಳಲ್ಲಿ ಪೊಲೀಸರ ತನಿಖೆ

Delhi Blast: ಲಖನೌನಲ್ಲಿ ಡಾ. ಶಾಹೀನ್ ಶಾಹಿದ್ ಮನೆಯಲ್ಲಿ ಪೊಲೀಸರಿಂದ ತೀವ್ರ ಶೋಧ

Delhi Blast: ಟೋಲ್ ಪ್ಲಾಜಾದಲ್ಲಿ 'ಸೂಸೈಡ್ ಬಾಂಬರ್'; ಹೊಸ CCTV ದೃಶ್ಯಾವಳಿ ಪತ್ತೆ..! Video

SCROLL FOR NEXT