ಶೇಖ್ ಹಸೀನಾ 
ವಿದೇಶ

ಗಲ್ಲು ಶಿಕ್ಷೆ ಬೆನ್ನಲ್ಲೇ ಬಾಂಗ್ಲಾದೇಶ ಪದಚ್ಯುತ ಪ್ರಧಾನಿ ಶೇಖ್ ಹಸೀನಾಗೆ 21 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಸರ್ಕಾರಿ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ 78 ವರ್ಷದ ಹಸೀನಾ, ಅವರ ಮಗ ಸಾಜಿಬ್ ವಾಜೆದ್ ಜಾಯ್ ಮತ್ತು ಮಗಳು ಸೈಮಾ ವಾಜೆದ್ ಪುಟುಲ್ ಅವರಿಗೆ ಮೂರು ಪ್ರಕರಣಗಳಲ್ಲಿ ಢಾಕಾ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಢಾಕಾ: ಸರ್ಕಾರಿ ವಸತಿ ಯೋಜನೆಯಡಿ ನಿವೇಶನ ಹಂಚಿಕೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಢಾಕಾ ನ್ಯಾಯಾಲಯ ಗುರುವಾರ 21 ವರ್ಷ ಜೈಲು ಶಿಕ್ಷೆ ಮತ್ತು ಅವರ ಇಬ್ಬರು ಮಕ್ಕಳಿಗೆ ತಲಾ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ರಾಜಧಾನಿಗೆ ಹೊಂದಿಕೊಂಡಿರುವ ಪುರ್ಬಾಚಲ್‌ನಲ್ಲಿರುವ ಸರ್ಕಾರಿ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ಈಗಾಗಲೇ ಗಲ್ಲು ಶಿಕ್ಷೆಗೆ ಗುರಿಯಾಗಿರುವ 78 ವರ್ಷದ ಹಸೀನಾ, ಅವರ ಮಗ ಸಾಜಿಬ್ ವಾಜೆದ್ ಜಾಯ್ ಮತ್ತು ಮಗಳು ಸೈಮಾ ವಾಜೆದ್ ಪುಟುಲ್ ಅವರಿಗೆ ಮೂರು ಪ್ರಕರಣಗಳಲ್ಲಿ ಢಾಕಾ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

"ಯಾವುದೇ ಅರ್ಜಿ ಸಲ್ಲಿಸದ ಶೇಖ್ ಹಸೀನಾ ಅವರಿಗೆ ಅಧಿಕೃತ ನ್ಯಾಯವ್ಯಾಪ್ತಿಯನ್ನು ಮೀರಿ ನಿವೇಶನ ಹಂಚಿಕೆ ಮಾಡಲಾಗಿದೆ" ಎಂದು ನ್ಯಾಯಾಧೀಶ ಮೊಹಮ್ಮದ್ ಅಬ್ದುಲ್ಲಾ ಅಲ್ ಮಾಮುನ್ ಅವರು ತೀರ್ಪು ನೀಡುತ್ತಾ ಹೇಳಿದ್ದಾರೆ.

ಹಂಚಿಕೆಗೆ ಸಂಬಂಧಿಸಿದ ಮೂರು ಪ್ರಕರಣಗಳಲ್ಲಿ ತಲಾ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಪದಚ್ಯುತ ಪ್ರಧಾನಿಗೆ ಒಟ್ಟು 21 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಹಸೀನಾ ಕುಟುಂಬದ ಹೊರತಾಗಿ, ಮಾಜಿ ಕಿರಿಯ ವಸತಿ ಸಚಿವ ಷರೀಫ್ ಅಹ್ಮದ್ ಮತ್ತು ವಸತಿ ಸಚಿವಾಲಯ ಅಧಿಕಾರಿಗಳು ಸೇರಿದಂತೆ ಇತರ 20 ಜನರನ್ನು ಪ್ರಕರಣಗಳಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಮತ್ತು ಒಬ್ಬರನ್ನು ಹೊರತುಪಡಿಸಿ, ಎಲ್ಲರಿಗೂ ವಿಭಿನ್ನ ಜೈಲು ಶಿಕ್ಷೆ ವಿಧಿಸಲಾಗಿದೆ. ಖುಲಾಸೆಗೊಂಡ ವ್ಯಕ್ತಿ ಸಚಿವಾಲಯದ ಕಿರಿಯ ಅಧಿಕಾರಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BJPಗೆ ಶೆಹಜಾದ್ ಪೂನಾವಾಲಾ ಶಾಕ್‌: ಪಕ್ಷದ ಹುದ್ದೆ, ಸದಸ್ಯತ್ವಕ್ಕೆ ಮತ್ತೊಮ್ಮೆ ರಾಜೀನಾಮೆ; ‘ಯಾರನ್ನೂ ದೂಷಿಸುತ್ತಿಲ್ಲ, ವೈಯಕ್ತಿಕ ಕಾರಣಗಳೇ ನಿರ್ಧಾರಕ್ಕೆ ಕಾರಣ’ ಎಂದ ಫೈರ್‌ಬ್ರಾಂಡ್..!

ನಿನ್ನಿಂದಲೇ ಇಡೀ ಇಲಾಖೆ ಮರ್ಯಾದೆ ಹೋಯಿತು: ಪ್ರಜ್ವಲ್ ರೇವಣ್ಣಗೆ ಅಲೋಕ್ ಕುಮಾರ್ 'ಸ್ಪೆಷಲ್ ಕ್ಲಾಸ್'

‘ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ ಮತ್ತೆ ಪ್ರತಿಭಟನೆ!’: ಕೇಂದ್ರಕ್ಕೆ ಬಾಬಾ ರಾಮದೇವ್ ಖಡಕ್ ಎಚ್ಚರಿಕೆ

ಬಿಹಾರದ ಲಖಿಸರಾಯಿ ದೇವಾಲಯದ ಬಳಿ ಭೀಕರ ಕಾಲ್ತುಳಿತ: 7 ಭಕ್ತರ ಸಾವು, ಹಲವರಿಗೆ ಗಾಯ

ಪಶ್ಚಿಮ ಬಂಗಾಳ: ದೇವಸ್ಥಾನ ಸಮೀಪದ ಹೋಟೆಲ್‌ನಲ್ಲಿ ಭಾರೀ ಅಗ್ನಿ ಅವಘಡ: 7 ಯಾತ್ರಿಕರು ಸಜೀವ ದಹನ