ಏಳು ಅಂತಾರಾಷ್ಟ್ರೀಯ ಸಂಘರ್ಷಗಳನ್ನು ಕೊನೆಗೊಳಿಸಿದ ನಂತರವೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡದಿದ್ದರೆ ಅದು ಅಮೆರಿಕಕ್ಕೆ ದೊಡ್ಡ ಅವಮಾನ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಛರಿಸಿದ್ದಾರೆ.
ಗಾಜಾ ಸಂಘರ್ಷವನ್ನು ಕೊನೆಗೊಳಿಸುವ ತಮ್ಮ ಯೋಜನೆಯನ್ನು ಉಲ್ಲೇಖಿಸುತ್ತಾ, ಡೊನಾಲ್ಡ್ ಟ್ರಂಪ್ ನಿನ್ನೆ ಕ್ವಾಂಟಿಕೋದಲ್ಲಿ ಮಿಲಿಟರಿ ನಾಯಕರಿಗೆ ಸಂಘರ್ಷ ಇತ್ಯರ್ಥವಾಗುತ್ತದೆ ಎಂದು ನಾವು ಭಾವಿಸುತ್ತೇವೆ, ಬಗೆಹರಿಯುತ್ತದೆ, ನೋಡೋಣ ಎಂದರು.
ಹಮಾಸ್ ಒಪ್ಪಿಕೊಳ್ಳಬೇಕು, ಅವರು ಒಪ್ಪಿಕೊಳ್ಳದಿದ್ದರೆ, ಅವರಿಗೆ ಮುಂಬರುವ ದಿನ ತುಂಬಾ ಕಠಿಣವಾಗಿರುತ್ತದೆ. ಎಲ್ಲಾ ಅರಬ್ ರಾಷ್ಟ್ರಗಳು, ಮುಸ್ಲಿಂ ರಾಷ್ಟ್ರಗಳು ಒಪ್ಪಿಕೊಂಡಿವೆ. ಇಸ್ರೇಲ್ ಒಪ್ಪಿಕೊಂಡಿದೆ. ಇದು ಉತ್ತಮ ಬೆಳವಣಿಗೆ ಎಂದರು.
ಸೋಮವಾರ ಘೋಷಿಸಲಾದ ಗಾಜಾ ಸಂಘರ್ಷವನ್ನು ಕೊನೆಗೊಳಿಸುವ ತನ್ನ ಯೋಜನೆಯು ಅಮೆರಿಕದಲ್ಲಿ ಕಾರ್ಯರೂಪಕ್ಕೆ ಬಂದರೆ, ಇದುವರೆಗಿನ ಒಟ್ಟು ಎಂಟು ಸಂಘರ್ಷಗಳನ್ನು ತಿಂಗಳುಗಳಲ್ಲಿ ಪರಿಹರಿಸುತ್ತಿದ್ದೆ, ಇಂತಹ ಕೆಲಸ ಈ ಹಿಂದೆ ಯಾರೂ ಮಾಡಿರಲಿಲ್ಲ ಎಂದರು.
ಹಾಗಾದರೆ ನಿಮಗೆ ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಸಿಗುತ್ತದೆಯೇ ಎಂದು ಸುದ್ದಿಗಾರರು ಕೇಳಿದಾಗ, ಅವರು ಅದನ್ನು ಏನೂ ಮಾಡದ ವ್ಯಕ್ತಿಗೆ ನೀಡುತ್ತಾರೆ. ಡೊನಾಲ್ಡ್ ಟ್ರಂಪ್ ಅವರ ಮನಸ್ಸಿನ ಬಗ್ಗೆ ಮತ್ತು ಯುದ್ಧವನ್ನು ಪರಿಹರಿಸಲು ಏನು ಮಾಡಿದರು ಎಂಬುದರ ಕುರಿತು ಪುಸ್ತಕ ಬರೆದ ವ್ಯಕ್ತಿಗೆ ನೀಡುತ್ತಾರೆ. ನೊಬೆಲ್ ಪ್ರಶಸ್ತಿ ಬರಹಗಾರರಿಗೆ ಹೋಗುತ್ತದೆ ಎಂದರು.
ನನಗೆ ವೈಯಕ್ತಿಕವಾಗಿ ನೋಬಲ್ ಶಾಂತಿ ಪ್ರಶಸ್ತಿ ಬೇಡ. ಅಮೆರಿಕ 'ದೇಶ' ಅದನ್ನು ಪಡೆಯಬೇಕೆಂದು ನಾನು ಬಯಸುತ್ತೇನೆ. ಅದು ಅದನ್ನು ಪಡೆಯಬೇಕು ಏಕೆಂದರೆ ಅಂತಹದ್ದೇನೂ ಎಂದಿಗೂ ನಡೆದಿಲ್ಲ. ಯೋಚಿಸಿ, ಗಾಜಾ ಸಂಘರ್ಷವನ್ನು ಕೊನೆಗೊಳಿಸುವ ಯೋಜನೆ ಕಾರ್ಯಗತಗೊಂಡರೆ ಎಷ್ಟು ಉತ್ತಮ ಎಂದರು.
ನಾನು ಇದನ್ನು ಹಗುರವಾಗಿ ಹೇಳುತ್ತಿಲ್ಲ, ನನಗೆ ಎಲ್ಲರಿಗಿಂತ ಹೆಚ್ಚು ಒಪ್ಪಂದಗಳ ಬಗ್ಗೆ ತಿಳಿದಿದೆ. ನನ್ನ ಇಡೀ ಜೀವನವು ಇದನ್ನೇ ಆಧರಿಸಿದೆ. ಎಂಟು ಸಂಘರ್ಷಗಳನ್ನು ನಿಲ್ಲಿಸಿದ್ದು ನನ್ನ ಜೀವನಕ್ಕೆ ಗೌರವದ ವಿಷಯ ಎಂದರು.