ಡೊನಾಲ್ಡ್ ಟ್ರಂಪ್ 
ವಿದೇಶ

No Nobel for Trump? ನಾರ್ವೆ ದೇಶಕ್ಕೆ 'ರಾಜತಾಂತ್ರಿಕ ಬಿಕ್ಕಟ್ಟಿ'ನ ಭೀತಿ!

ಟ್ರಂಪ್ ಅವರ ಅಸ್ಥಿರ ಮನೋಭಾವ ಅನಿರೀಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ನಾರ್ವೆಯ ಸಮಾಜವಾದಿ ಎಡಪಕ್ಷದ ನಾಯಕ ಕಿರ್ಸ್ಟಿ ಬರ್ಗ್ಸ್ಟ್ ಕಳವಳ ವ್ಯಕ್ತಪಡಿಸಿದ್ದಾರೆ.

ಓಸ್ಲೋ: ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರ ಘೋಷಣೆಗಾಗಿ ಜಗತ್ತು ಕಾಯುತ್ತಿರುವಂತೆಯೇ ಸಮಾರಂಭವನ್ನು ಆಯೋಜಿಸುವ ರಾಷ್ಟ್ರವಾದ ನಾರ್ವೆ ಅಸಾಮಾನ್ಯ ಸಂಕಟದಲ್ಲಿ ಸಿಲುಕಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ನೀಡಿದಿದ್ದಲ್ಲಿ ರಾಜತಾಂತ್ರಿಕ ವಿವಾದ ಭುಗಿಲೆಳುವ ಸಾಧ್ಯತೆಯಿದೆ ಎಂದು ಓಸ್ಲೋದಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ನೊಬೆಲ್ ಪ್ರಶಸ್ತಿ ವಿಜೇತರನ್ನು ನಿರ್ಧರಿಸುವಲ್ಲಿ ನಾರ್ವೆ ಸರ್ಕಾರ ಯಾವುದೇ ಪಾತ್ರವನ್ನು ವಹಿಸದಿದ್ದರೂ, ನೊಬೆಲ್ ಕಮಿಟಿಯ ಸ್ವಾತಂತ್ರ್ಯವನ್ನು ಟ್ರಂಪ್ ಸಂಪೂರ್ಣವಾಗಿ ಪ್ರಶಂಸಿಸುವುದಿಲ್ಲ ಎಂಬ ನಂಬಿಕೆಯಿಂದ ಆತಂಕ ಉಂಟಾಗುತ್ತದೆ. ಟ್ರಂಪ್ ಅವರ ಅಸ್ಥಿರ ಮನೋಭಾವ ಅನಿರೀಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ನಾರ್ವೆಯ ಸಮಾಜವಾದಿ ಎಡಪಕ್ಷದ ನಾಯಕ ಕಿರ್ಸ್ಟಿ ಬರ್ಗ್ಸ್ಟ್ ಕಳವಳ ವ್ಯಕ್ತಪಡಿಸಿದ್ದಾರೆ.

ದಿ ಗಾರ್ಡಿಯನ್ ಜೊತೆ ಮಾತನಾಡಿದ ಅವರು, "ನೊಬೆಲ್ ಆಯ್ಕೆ ಸಮಿತಿ, ಸ್ವತಂತ್ರ ಸಂಸ್ಥೆಯಾಗಿದ್ದು, ನಾರ್ವೇ ಸರ್ಕಾರ ವಿಜೇತರನ್ನು ನಿರ್ಧರಿಸುವಲ್ಲಿ ತೊಡಗಿಸಿಕೊಂಡಿಲ್ಲ. ಆದರೆ ಟ್ರಂಪ್ ಅವರಿಗೆ ಅದು ತಿಳಿದಿದೆ ಎಂದು ನನಗೆ ಖಚಿತವಿಲ್ಲ. ನಾವು ಯಾವುದಕ್ಕೂ ಸಿದ್ಧರಾಗಿರಬೇಕು ಎಂದು ಹೇಳಿದರು.

ಟ್ರಂಪ್ ಹಠಕ್ಕೆ ಇದೇ ಕಾರಣ:

ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕು ಅಂತಾ ಟ್ರಂಪ್ ಬಹಳ ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಬರಾಕ್ ಒಬಾಮಾ ಅವರು 2009 ರಲ್ಲಿ "ಅಂತಾರಾಷ್ಟ್ರೀಯ ರಾಜತಾಂತ್ರಿಕತೆ ಮತ್ತು ಜನರ ನಡುವಿನ ಸಹಕಾರವನ್ನು ಬಲಪಡಿಸುವ ಅಸಾಧಾರಣ ಪ್ರಯತ್ನಗಳಿಗಾಗಿ ಪ್ರತಿಷ್ಠಿತ ಪ್ರಶಸ್ತಿ ಪಡೆದಿದ್ದರು. ಈಗ ನಾನು ಏನಾದರೂ ಮಾಡಿ ಆ ಪ್ರಶಸ್ತಿ ಪಡೆಯಬೇಕು ಎಂಬ ಹಠದಲ್ಲಿದ್ದಾರೆ ಟ್ರಂಪ್.

ಈ ಮಧ್ಯೆ ಇಸ್ರೇಲ್ ಸೇರಿದಂತೆ ಹಲವಾರು ಅರಬ್ ರಾಷ್ಟ್ರಗಳ ನಡುವಿನ ಒಪ್ಪಂದಗಳು ಭಾರತ ಪಾಕ್ ನಡುವಿನ ಕದನ ವಿರಾಮ ಜಾರಿ ಸೇರಿದಂತೆ ಅನೇಕ ಕ್ರಮಗಳು ಜಾಗತಿಕ ಮನ್ನಣೆಗೆ ಹೆಚ್ಚು ಅರ್ಹವಾಗಿವೆ ಎಂದು ಟ್ರಂಪ್ ಪದೇ ಪದೇ ವಾದಿಸಿದ್ದಾರೆ.

ದಿ ಗಾರ್ಡಿಯನ್ ಪ್ರಕಾರ, ಟ್ರಂಪ್ ಆಡಳಿತ ಇಸ್ರೇಲ್-ಗಾಜಾ ಕದನ ವಿರಾಮ ಘೋಷಿಸುವ ಮುನ್ನಾವೇ ನೊಬೆಲ್ ಸಮಿತಿಯು ಈ ವರ್ಷದ ಪ್ರಶಸ್ತಿ ವಿಜೇತರನ್ನು ಈಗಾಗಲೇ ಆಯ್ಕೆ ಮಾಡಿದೆ ಎನ್ನಲಾಗಿದೆ. ಟ್ರಂಪ್ ಪ್ರತಿಷ್ಠಿತ ಪ್ರಶಸ್ತಿಗೆ ಅರ್ಹರು ಎಂದು ಅವರ ಬೆಂಬಲಿಗ ರಾಷ್ಟ್ರಗಳು ಹೇಳುತ್ತಿದ್ದರೆ, ಟ್ರಂಪ್ ಬಹುಮಾನವನ್ನು ಸ್ವೀಕರಿಸುವುದು "ಅತ್ಯಂತ ಅಸಂಭವ ಎಂದು ಕೆಲ ತಜ್ಞರು ಹೇಳುತ್ತಿದ್ದಾರೆ.

ಟ್ರಂಪ್ ಈ ಹಿಂದೆ ಸುಂಕಗಳ ಕುರಿತು ಚರ್ಚಿಸುವ ನೆಪದಲ್ಲಿ ನಾರ್ವೆಯ ಆಗಿನ ಹಣಕಾಸು ಸಚಿವ ಜೆನ್ಸ್ ಸ್ಟೋಲ್ಟೆನ್‌ಬರ್ಗ್‌ಗೆ ಕರೆ ಮಾಡಿದ್ದರು. ಆದರೆ, ಸುಂಕ ವಿಚಾರದ ಬದಲು ನೊಬೆಲ್ ಪ್ರಶಸ್ತಿ ಕುರಿತು ಮಾತನಾಡಿದ್ದರು ಎಂದು ವರದಿಗಳು ಹೇಳಿವೆ. ಇದು ಪ್ರಶಸ್ತಿಯ ಬಗ್ಗೆ ಟ್ರಂಪ್ ಅವರಿಗೆ ಇರುವ ವಿಶಿಷ್ಟ ವ್ಯಾವೋಹವನ್ನು ಸ್ಪಷ್ಟವಾಗಿ ತಿಳಿಸಿತ್ತು.

ಈ ಮಧ್ಯೆ ನಾರ್ವೇಜಿಯನ್ ರಾಜಕಾರಣಿಗಳು ಟ್ರಂಪ್ ಅವರ ಸಂಭಾವ್ಯ ಪ್ರತಿಕ್ರಿಯೆಯ ಬಗ್ಗೆ ಜಾಗರೂಕರಾಗಿದ್ದಾರೆ. ದೇಶೀಯ ಮತ್ತು ಅಂತರಾಷ್ಟ್ರೀಯ ಎರಡರಲ್ಲೂ ಸೂಕ್ಷ್ಮತೆಗಳ ಮೇಲೆ ಉದ್ಧಟತನ ತೋರುವ ಅವರ ಪ್ರವೃತ್ತಿಯು ಓಸ್ಲೋದಲ್ಲಿ ಅನೇಕರನ್ನು ಅಸಮಾಧಾನಗೊಳಿಸಿದೆ.

ಸುಂಕಗಳು ಮತ್ತು ನಿರ್ಬಂಧಗಳ ಮೂಲಕ ಮಿತ್ರರಾಷ್ಟ್ರಗಳಿಗೆ ಬೆದರಿಕೆ ಹಾಕುವ ಅವರ ಇತಿಹಾಸವನ್ನು ಗಮನಿಸಿದರೆ, ನೊಬೆಲ್ ಪ್ರಕ್ರಿಯೆಯ ಮೇಲೆ ಯಾವುದೇ ನಿಯಂತ್ರಣವಿಲ್ಲದಿದ್ದರೂ ಸಹ, ಘೋಷಣೆಯ ನಂತರದ ಪ್ರಕೋಪವು ನಾರ್ವೆಗೆ ಸಣ್ಣ ರಾಜತಾಂತ್ರಿಕ ತಲೆನೋವನ್ನು ಉಂಟುಮಾಡಬಹುದು ಎನ್ನಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಶಾಂತಿಗಿಂತ ರಾಜಕೀಯವೇ ಹೆಚ್ಚಾಯಿತು': ನೊಬೆಲ್ ಸಮಿತಿ ವಿರುದ್ಧ ಶ್ವೇತಭವನ ಕೆಂಡಾಮಂಡಲ!

ಚಿಕ್ಕಬಳ್ಳಾಪುರ: 'Miss U Chinna' ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

Maria Corina Machado: ನೋಬೆಲ್ ಶಾಂತಿ ಪ್ರಶಸ್ತಿ ಗೆದ್ದ ಮರಿಯಾ ಕೊರಿನಾ ಮಚಾದೊ ಕುರಿತು ಆಸಕ್ತಿಕರ ಮಾಹಿತಿ ಇಲ್ಲಿದೆ!

ಶಾಸಕರ ಭವನದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಮರುಜೀವ?: ಗಿರೀಶ್ ಮಟ್ಟಣ್ಣವರ್ ಗೆ ಸಂಕಷ್ಟ!

'ಇದೇ ಕೊನೆ, ಇನ್ನೆಂದೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ.. ಕರ್ನಾಟಕ 3 ಭಾಗ, ಭಾರತ 2 ಭಾಗ'.. 'ಮೋದಿ ದೇಶದ ರಕ್ಷಾ ಕವಚ': "ಬ್ರಹ್ಮಾಂಡ" ಭವಿಷ್ಯ

SCROLL FOR NEXT