ತಾಲಿಬಾನ್ ಉಗ್ರರ ಸಾಂದರ್ಭಿಕ ಚಿತ್ರ 
ವಿದೇಶ

ಮುತಾಕಿ ಭಾರತ ಭೇಟಿ ನಡುವೆ ಅಫ್ಘಾನ್ ಗಡಿಯಲ್ಲಿ ಮಾರಣಹೋಮ: 23 ಪಾಕ್ ಸೈನಿಕರು, 200 ತಾಲಿಬಾನ್ ಗಳ ಹತ್ಯೆ!

ಗಡಿ ಪ್ರದೇಶಗಳಲ್ಲಿ ಅಫ್ಘಾನ್ ಪಡೆಗಳ ಅಪ್ರಚೋದಿತ ದಾಳಿಗಳಿಗೆ ಪ್ರತಿಕ್ರಿಯೆಯಾಗಿ 19 ಅಫ್ಘಾನ್ ಮಿಲಿಟರಿ ಪೋಸ್ಟ್‌ಗಳು ಮತ್ತು ಭಯೋತ್ಪಾದಕ ಅಡಗುತಾಣಗಳನ್ನು ವಶಕ್ಕೆ ಪಡೆದಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ.

ಇಸ್ಲಾಮಾಬಾದ್: ಅಪ್ಘಾನಿಸ್ತಾನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತಾಕಿ ಭಾರತ ಭೇಟಿಯಲ್ಲಿರುವಂತೆಯೇ ಅತ್ತ ಅಫ್ಘಾನ್-ಪಾಕ್ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಮಾರಣಹೋಮ ನಡೆಯುತ್ತಿದೆ.

ಗಡಿಯಲ್ಲಿ ರಾತ್ರಿಯಿಡೀ ನಡೆದ ಘರ್ಷಣೆಯಲ್ಲಿ 23 ಪಾಕಿಸ್ತಾನಿ ಸೈನಿಕರು ಮತ್ತು 200 ಕ್ಕೂ ಹೆಚ್ಚು ತಾಲಿಬಾನ್ ಸೈನಿಕರು ಹಾಗೂ ಅದರ ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನಿ ಸೇನೆ ಭಾನುವಾರ ತಿಳಿಸಿದೆ. ಗಡಿಯಾಚೆಗಿನ ಆಕ್ರಮಣದ ಪರಸ್ಪರ ಆರೋಪಗಳ ನಡುವೆ ನೆರೆಹೊರೆಯವರ ನಡುವೆ ಉದ್ವಿಗ್ನತೆ ಉಲ್ಬಣಗೊಂಡಿದೆ.

ಗಡಿ ಪ್ರದೇಶಗಳಲ್ಲಿ ಅಫ್ಘಾನ್ ಪಡೆಗಳ ಅಪ್ರಚೋದಿತ ದಾಳಿಗಳಿಗೆ ಪ್ರತಿಕ್ರಿಯೆಯಾಗಿ 19 ಅಫ್ಘಾನ್ ಮಿಲಿಟರಿ ಪೋಸ್ಟ್‌ಗಳು ಮತ್ತು ಭಯೋತ್ಪಾದಕ ಅಡಗುತಾಣಗಳನ್ನು ವಶಕ್ಕೆ ಪಡೆದಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ.

ಈ ಮಧ್ಯೆ ಪ್ರತೀಕಾರದ ಕಾರ್ಯಾಚರಣೆಯಲ್ಲಿ 58 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದಾರೆ ಎಂದು ಕಾಬೂಲ್ ಹೇಳಿದೆ.

ಅಕ್ಟೋಬರ್ 11-12 ರ ಮಧ್ಯರಾತ್ರಿಯಲ್ಲಿ, ಅಫ್ಘಾನ್ ತಾಲಿಬಾನ್ ಮತ್ತು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಉಗ್ರರು ಪಾಕ್-ಆಫ್ಘಾನ್ ಗಡಿಯಲ್ಲಿ ಪಾಕಿಸ್ತಾನದ ಮೇಲೆ ಅಪ್ರಚೋದಿತ ದಾಳಿ ಆರಂಭಿಸಿದ್ದು, ಪಾಕಿಸ್ತಾನಿ ಪಡೆಗಳು "ಗಡಿ ಉದ್ದಕ್ಕೂ ನಿರ್ಣಾಯಕವಾಗಿ ದಾಳಿಯನ್ನು ಹಿಮ್ಮೆಟ್ಟಿಸಿದೆ ಮತ್ತು ತಾಲಿಬಾನ್ ಪಡೆಗಳು ಮತ್ತು ಖ್ವಾರ್ಜಿಗಳಿಗೆ (TTP ಉಗ್ರರು) ಭಾರಿ ಸಾವುನೋವುಗಳನ್ನು ಉಂಟುಮಾಡಿದೆ. ಭದ್ರತಾ ಪಡೆಗಳು ತಾಲಿಬಾನ್ ಶಿಬಿರಗಳು, ಪೋಸ್ಟ್‌ಗಳು ಮತ್ತು ಭಯೋತ್ಪಾದಕ ತರಬೇತಿ ಕೇಂದ್ರಗಳ ಮೇಲೆ ನಿಖರವಾದ ದಾಳಿ ನಡೆಸಿವೆ ಎಂದು ಹೇಳಿಕೆಯಲ್ಲಿ ಪಾಕ್ ಸೇನೆ ತಿಳಿಸಿದೆ.

ಅಪ್ಘಾನ್ ಜೊತೆಗಿನ ಸಂಘರ್ಷದಲ್ಲಿ 23 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ. 200 ಕ್ಕೂ ಹೆಚ್ಚು ತಾಲಿಬಾನ್ ಮತ್ತು ಅದರ ಉಗ್ರರು ಹತರಾಗಿದ್ದಾರೆ. ಅನೇಕ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ನಾಶಗೊಳಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಪಾಕಿಸ್ತಾನದ ಸಾರ್ವಭೌಮತ್ವ ಕಾಪಾಡುವಲ್ಲಿ ಯಾವುದೇ ರಾಜಿ" ಇಲ್ಲ ಎಂದು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ್ದಾರೆ.

ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ನೇತೃತ್ವದಲ್ಲಿ ಪಾಕಿಸ್ತಾನ ಸೇನೆಯ ಕ್ರಮವನ್ನು ಶರೀಫ್ ಶ್ಲಾಘಿಸಿದ್ದು, "ಪ್ರತಿಯೊಂದು ಪ್ರಚೋದನೆಗೆ ಸೂಕ್ತ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಯನ್ನು ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕರೂರ್ ಕಾಲ್ತುಳಿತ ಪ್ರಕರಣ ಸಿಬಿಐಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

Israel-Gaza war: 7 ಒತ್ತೆಯಾಳುಗಳ ರೆಡ್ ಕ್ರಾಸ್‌ಗೆ ಹಸ್ತಾಂತರಿಸಿದ ಹಮಾಸ್, ಯುದ್ಧ ಅಂತ್ಯ ಎಂದು ಟ್ರಂಪ್ ಘೋಷಣೆ

ಸಮೀಕ್ಷೆಗೆ ಸಿಬ್ಬಂದಿ ನಿಯೋಜನೆ: ತುರ್ತು ಪರಿಸ್ಥಿತಿ ನಿಭಾಯಿಸುವುದೇ ಸವಾಲು: ಗ್ರೆಟರ್ ಬೆಂಗಳೂರು ಪ್ರಾಧಿಕಾರ

Tamil Nadu: ವಿಷಯುಕ್ತ 'ಕೋಲ್ಡ್ರಿಫ್' ಸಿರಫ್ : ಸ್ರೆಸನ್ ಫಾರ್ಮಾ ಕಂಪನಿಯ ಲೈಸನ್ಸ್ ರದ್ದುಗೊಳಿಸಿ, ಬಾಗಿಲು ಮುಚ್ಚಿಸಿದ ಸ್ಟಾಲಿನ್ ಸರ್ಕಾರ!

IRCTC case: ಬಿಹಾರ ಚುನಾವಣೆ ಸನಿಹದಲ್ಲಿ ಆರ್ ಜೆಡಿಗೆ 'ಬಿಗ್ ಶಾಕ್' ನೀಡಿದ ದೆಹಲಿ ನ್ಯಾಯಾಲಯ!

SCROLL FOR NEXT