ಬೆಂಜಮಿನ್ ನೆತನ್ಯಾಹು ಮತ್ತು ಡೊನಾಲ್ಡ್ ಟ್ರಂಪ್ 
ವಿದೇಶ

ಟ್ರಂಪ್ 'ಶ್ರೇಷ್ಠ ಸ್ನೇಹಿತ' ಎಂದ ನೆತನ್ಯಾಹು; ಅಮೆರಿಕ ಅಧ್ಯಕ್ಷರಿಗೆ ಇಸ್ರೇಲ್ ಸಂಸತ್ ನಲ್ಲಿ standing ovation ಸ್ವಾಗತ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್‌ನಲ್ಲಿ ಅಮೆರಿಕದ ಮಧ್ಯಸ್ಥಿಕೆಯ ಕದನ ವಿರಾಮ ಮತ್ತು ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು ಒಪ್ಪಂದವನ್ನು ಆಚರಿಸಲು ಇಸ್ರೇಲ್ ಗೆ ಆಗಮಿಸಿದ್ದಾರೆ.

ಟೆಲ್ ಅವೀವ್: ಡೊನಾಲ್ಡ್ ಟ್ರಂಪ್ ಅಮೆರಿಕದ ಶ್ವೇತಭವನದಲ್ಲಿ ಇಸ್ರೇಲ್ ಹೊಂದಿದ್ದ ಶ್ರೇಷ್ಠ ಸ್ನೇಹಿತ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಣ್ಣಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್‌ನಲ್ಲಿ ಅಮೆರಿಕದ ಮಧ್ಯಸ್ಥಿಕೆಯ ಕದನ ವಿರಾಮ ಮತ್ತು ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳು ಒಪ್ಪಂದವನ್ನು ಆಚರಿಸಲು ಇಸ್ರೇಲ್ ಗೆ ಆಗಮಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ನೇತನ್ಯಾಹು, 'ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಇಸ್ರೇಲ್​ನ ಇದುವರೆಗೆ ಸಿಕ್ಕಿರುವ ಅತ್ಯುತ್ತಮ ಸ್ನೇಹಿತನಾಗಿದ್ದಾರೆ. ಯಾವುದೇ ಅಮೇರಿಕನ್ ಅಧ್ಯಕ್ಷರು ಇಸ್ರೇಲ್‌ಗಾಗಿ ಈವರೆಗೂ ಮಾಡಲಾಗದ್ದನ್ನು ಟ್ರಂಪ್ ಮಾಡಿದ್ದಾರೆ ಎಂದು ಬಣ್ಣಿಸಿದ್ದಾರೆ.

ಇದೇ ವೇಳೆ ಹಮಾಸ್ ವಿರುದ್ಧದ ಯುದ್ಧದಲ್ಲಿನ ಇಸ್ರೇಲ್ ಸೈನಿಕರ ಹೋರಾಟವನ್ನು ಶ್ಲಾಘಿಸಿದ ನೆತನ್ಯಾಹು, 'ಯುದ್ದದಲ್ಲಿ ವೀರವೇಷದಿಂದ ಹೋರಾಡಿದ ಇಸ್ರೇಲ್ ಸೈನಿಕರ ಸಾಹಸ ಶ್ಲಾಘನೀಯ. ನಮ್ಮ ರಾಷ್ಟ್ರವು ಹಮಾಸ್ ವಿರುದ್ಧ ಅದ್ಭುತ ವಿಜಯಗಳನ್ನು ಸಾಧಿಸಿದೆ. ಶಾಂತಿಗೆ ತಮ್ಮ ಬದ್ಧತೆ ಎಂದು ಪ್ರತಿಜ್ಞೆ ಮಾಡಿದ್ದಾರೆ ಎಂದರು. ಅಂತೆಯೇ ಕದನ ವಿರಾಮವನ್ನು ಎತ್ತಿಹಿಡಿಯುವುದಾಗಿ ಮತ್ತು ಈ ಪ್ರದೇಶದಲ್ಲಿ ಸ್ಥಿರತೆಯನ್ನು ಅನುಸರಿಸುವುದಾಗಿ ಇಸ್ರೇಲ್​ ಪ್ರಧಾನಿ ಪ್ರತಿಜ್ಞೆ ಮಾಡಿದ್ದಾರೆ.

ಒತ್ತೆಯಾಳುಗಳ ಕುಟುಂಬಸ್ಥರ ಸಂಭ್ರಮಾಚರಣೆ ಇಸ್ರೇಲ್​ನ ರಾಜಧಾನಿ ಟೆಲ್ ಅವಿವ್‌ನಲ್ಲಿ ಒತ್ತೆಯಾಳುಗಳ ಬಿಡುಗಡೆಯ ಸುದ್ದಿ ಹರಡುತ್ತಿದ್ದಂತೆ ಕುಟುಂಬಗಳನ್ನು ಬೆಂಬಲಿಸಲು ನೆರೆದಿದ್ದ ಜನಸಮೂಹವು ಕಣ್ಣೀರು, ಜಯಘೋಷ ಮತ್ತು ಹಾಡುಗಳನ್ನು ಹಾಡಿ ಸಂಭ್ರಮಿಸಿತು. ಇದು ಒತ್ತೆಯಾಳುಗಳ ಹಿಂತಿರುಗುತ್ತಿರುವವರಿಗೆ ಸಮಾಧಾನ ಮತ್ತು ಬದುಕುಳಿಯದವರಿಗೆ ದುಃಖದ ಮಿಶ್ರಣವಾಗಿತ್ತು.

ಅಲ್ಲದೆ, ಕದನ ವಿರಾಮ ಒಪ್ಪಂದದ ಭಾಗವಾಗಿ, ಇಸ್ರೇಲ್ ಸುಮಾರು 2,000 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ರಮಲ್ಲಾದಲ್ಲಿ, ಬಿಡುಗಡೆಯಾದ ಬಂಧಿತರನ್ನು ಕರೆದೊಯ್ಯುವ ಮೊದಲ ಬಸ್‌ಗಳನ್ನು ಸ್ವಾಗತಿಸಲು ಸಾವಿರಾರು ಜನರು ಬೀದಿಗಿಳಿದು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಾ ಸಂಭ್ರಮಿಸಿದ್ದಾರೆ.

ಅಮೆರಿಕ ಅಧ್ಯಕ್ಷರಿಗೆ standing ovation ಸ್ವಾಗತ!

ಇನ್ನು ಇಂದು ದಿಢೀರ್ ಇಸ್ರೇಲ್ ಭೇಟಿ ಕೈಗೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಸಂಸತ್ ಗೆ ಭೇಟಿ ನೀಡಿದರು. ಈ ವೇಳೆ ಇಸ್ರೇಲ್ ಎಲ್ಲ ಜನಪ್ರತಿನಿಧಿಗಳು ಎದ್ದುನಿಂತು ಚಪ್ಪಾಳೆ ತಟ್ಟುವ ಮೂಲಕ ಅಭೂತಪೂರ್ವ ಸ್ವಾಗತ ಕೋರಿದರು. ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಮತ್ತು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಟ್ರಂಪ್ ಅವರನ್ನು ಸ್ವಾಗತಿಸಿದರು.

ಈ ವೇಳೆ ಇಸ್ರೇಲ್ ಸೇನಾಪಡೆಗಳು ಮಿಲಿಟರಿ ಬ್ಯಾಂಡ್ ನುಡಿಸಿ ಸ್ವಾಗತ ಕೋರಿತು. ಇದಕ್ಕೂ ಮೊದಲು ಟ್ರಂಪ್ ಗೆ ರಾಜಧಾನಿ ಟೆಲ್ ಅವೀವ್‌ನ ಹೋಸ್ಟೇಜಸ್ ಸ್ಕ್ವೇರ್‌ನಲ್ಲಿ, ಇಸ್ರೇಲ್ ಜನಸಮೂಹವು ಸಂಸತ್ತಿಗೆ ಸ್ವಾಗತಿಸಿತು. "ನಾವು ಈ ದಿನಕ್ಕಾಗಿ ಹಾತೊರೆಯುತ್ತಿದ್ದೇವೆ" ಎಂದು ಘೋಷಣೆಗಳನ್ನೂ ಕೂಗಿದರು. ಸಂಸತ್ ನ ಗ್ಯಾಲರಿಯಲ್ಲಿ ಕೆಲವರು "ಟ್ರಂಪ್, ಶಾಂತಿ ಅಧ್ಯಕ್ಷ" ಎಂದು ಬರೆದ ಕೆಂಪು ಟೋಪಿಗಳನ್ನು ಧರಿಸಿದ್ದರು.

ಇದಕ್ಕೂ ಮೊದಲು ಇಸ್ರೇಲ್ ನೆಸ್ಸೆಟ್‌ ಬಳಿ ಸುದ್ದಿಗಾರರೊಂದಿಗೆ ಚುಟುಕಾಗಿ ಪ್ರತಿಕ್ರಿಯಿಸಿದ ಟ್ರಂಪ್ "ಇದು ಒಂದು ಉತ್ತಮ ದಿನ, ಇದು ಸಂಪೂರ್ಣ ಹೊಸ ಆರಂಭ". ಇಂತಹ ಕಾರ್ಯಕ್ರಮ ಎಂದಿಗೂ ನಡೆದಿಲ್ಲ ಎಂದು ನಾನು ಭಾವಿಸುತ್ತೇನೆ, ನಾನು ಎಂದಿಗೂ ಇಂತಹದ್ದನ್ನು ನೋಡಿಲ್ಲ ಎಂದು ಹೇಳಿದರು.

ರೆಡ್ ಕ್ರಾಸ್ ವಶಕ್ಕೆ ಒತ್ತೆಯಾಳುಗಳು

ಇನ್ನು ಗಾಜಾದಲ್ಲಿ ಹಮಾಸ್‌ನಿಂದ ಬಂಧಿಸಲ್ಪಟ್ಟ ಎಲ್ಲಾ ಜೀವಂತ ಸೆರೆಯಾಳುಗಳನ್ನು ಸೋಮವಾರ ರೆಡ್‌ಕ್ರಾಸ್‌ನ ವಶಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ದೃಢಪಡಿಸಿದೆ. ಬಂಧಿತರನ್ನು ಎರಡು ಬ್ಯಾಚ್‌ಗಳಲ್ಲಿ ಬಿಡುಗಡೆ ಮಾಡಲಾಯಿತು, ಏಳು ಜನರನ್ನು ದಿನದ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು ಎಂದು ಹೇಳಿದೆ.

ಅಕ್ಟೋಬರ್ 7, 2023ರಂದು, ಹಮಾಸ್ ಉಗ್ರಗಾಮಿಗಳು ಇಸ್ರೇಲ್ ಮೇಲೆ ದಾಳಿ ಮಾಡಿ 251 ಜನರನ್ನು ಅಪಹರಿಸಿ ಗಾಜಾಗೆ ಕರೆದೊಯ್ದರು. ಕಳೆದ ಎರಡು ವರ್ಷಗಳಲ್ಲಿ, ಕೆಲವು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಅನೇಕರು ಅಲ್ಲೇ ದುರಂತವಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಇದೀಗ 2 ವರ್ಷಗಳ ನಂತರ, ಉಳಿದ 20 ಜೀವಂತ ಒತ್ತೆಯಾಳುಗಳು ಮನೆಗೆ ಮರಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

'ಮಾತು' ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಮಹಿಳೆಗೆ ಕಚ್ಚಿದ ನಾಯಿ, ಪ್ರಶ್ನೆ ಮಾಡಿದ ಸಂತ್ರಸ್ಥೆಗೆ ಮಾಲಕಿ ಕಪಾಳಮೋಕ್ಷ, Video Viral

ಸಂಸತ್ತಿನಲ್ಲಿ 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳಿಗೆ ಆಕ್ಷೇಪಣೆ ಯಾಕೆ?: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!

SCROLL FOR NEXT