ಧ್ವಂಸಗೊಂಡಿರುವ ಗಾಜಾ  online desk
ವಿದೇಶ

ಕದನ ವಿರಾಮಕ್ಕೆ ಕಿಮ್ಮತ್ತಿಲ್ಲ: ಗಾಜಾದಲ್ಲಿ ಮಾರಣ ಹೋಮ ಮುಂದುವರೆಸಿದ ಇಸ್ರೇಲ್; 9 ಪ್ಯಾಲೆಸ್ತೇನಿಯರು ಸಾವು!

ಇಸ್ರೇಲಿ ಸೇನಾಪಡೆ ಪ್ಯಾಲೆಸ್ಟೀನಿಯನ್ನರ ಮೇಲೆ ಗುಂಡು ಹಾರಿಸಿದ್ದರಿಂದ ಗಾಜಾ ನಗರದ ಶುಜಾಯೆಯಾ ನೆರೆಹೊರೆಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ.

ಕದನ ವಿರಾಮ ಒಪ್ಪಂದ ಮತ್ತು ಗಾಜಾದಲ್ಲಿ ಜನಾಂಗೀಯ ಹತ್ಯೆಯ ಯುದ್ಧ ಕೊನೆಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಭರವಸೆ ನೀಡಿದ್ದರೂ, ಮಂಗಳವಾರ ಗಾಜಾದಾದ್ಯಂತ ನಡೆದ ಪ್ರತ್ಯೇಕ ದಾಳಿಗಳಲ್ಲಿ ಇಸ್ರೇಲ್ ಕನಿಷ್ಠ ಒಂಬತ್ತು ಪ್ಯಾಲೆಸ್ತೇನಿಯನ್ನರನ್ನು ಕೊಂದಿದೆ ಮತ್ತು ಹಲವಾರು ಜನರನ್ನು ಗಾಯಗೊಳಿಸಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ಇಸ್ರೇಲಿ ಸೇನಾಪಡೆ ಪ್ಯಾಲೆಸ್ಟೀನಿಯನ್ನರ ಮೇಲೆ ಗುಂಡು ಹಾರಿಸಿದ್ದರಿಂದ ಗಾಜಾ ನಗರದ ಶುಜಾಯೆಯಾ ನೆರೆಹೊರೆಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ.

ಹತ್ಯೆಗಳನ್ನು ದೃಢೀಕರಿಸುತ್ತಾ, ಇಸ್ರೇಲಿ ಮಿಲಿಟರಿ X ನಲ್ಲಿ ಪೋಸ್ಟ್‌ ಮಾಡಿದ್ದು, ಪ್ಯಾಲೆಸ್ಟೀನಿಯನ್ನರು 'ಹಳದಿ ರೇಖೆ'ಯನ್ನು ದಾಟಿ ಸೈನಿಕರನ್ನು ಸಮೀಪಿಸಿದ್ದಾರೆ, ಇದೇ ಕಾರಣಕ್ಕಾಗಿ ಗುಂಡಿಕ್ಕಲಾಗಿದೆ ಎಂದು ಸಮರ್ಥಿಸಿದೆ. ಅಲ್ ಜಜೀರಾ ಗಾಜಾದ ಖಾನ್ ಯೂನಿಸ್‌ನಲ್ಲಿ ಇಸ್ರೇಲಿ ಡ್ರೋನ್ ದಾಳಿಗಳನ್ನು ಸಹ ವರದಿ ಮಾಡಿದೆ, ಇದು ಅನೇಕ ಸಾವುನೋವುಗಳಿಗೆ ಕಾರಣವಾಗಿದೆ ಎಂದು ನಂಬಲಾಗಿದೆ.

ಪ್ಯಾಲೆಸ್ತೇನಿಯನ್ ಪತ್ರಕರ್ತೆ ಸಲೇಹ್ ಅಲ್ಜಫರಾವಿ ಅವರನ್ನು ಇಸ್ರೇಲ್‌ನೊಂದಿಗೆ ಸಂಬಂಧ ಹೊಂದಿದ್ದಾರೆಂದು ಹೇಳಲಾದ ಸಶಸ್ತ್ರ ಮಿಲಿಟಿಯಾ ಗುಂಡು ಹಾರಿಸಿ ಕೊಂದ ಕೆಲವು ದಿನಗಳ ನಂತರ ಈ ಹತ್ಯೆಗಳು ಸಂಭವಿಸಿವೆ ಎಂದು ಗಾಜಾದ ಆಂತರಿಕ ಸಚಿವಾಲಯ ತಿಳಿಸಿದೆ.

ಕದನ ವಿರಾಮ ಒಪ್ಪಂದದ ಹೊರತಾಗಿಯೂ, ಪ್ಯಾಲೆಸ್ಟೀನಿಯನ್ನರ ಮೇಲಿನ ನಿರಂತರ ದಾಳಿಗಳನ್ನು ಖಂಡಿಸಿರುವ ಯುಎನ್ ವಿಶೇಷ ವರದಿಗಾರ ಫ್ರಾನ್ಸೆಸ್ಕಾ ಅಲ್ಬನೀಸ್, "ಪ್ರತಿಯೊಂದು ಅಪರಾಧಕ್ಕೂ ಲೆಕ್ಕ ಸಿಗುವವರೆಗೆ" ಇಸ್ರೇಲ್ ನ್ನು ಸಾಮೂಹಿಕವಾಗಿ ಬಹಿಷ್ಕರಿಸುವಂತೆ ಕರೆ ನೀಡಿದರು.

"ಮತ್ತೆ: ಇಸ್ರೇಲ್ ಪ್ರಕಾರ ಕದನ ವಿರಾಮ ಅಂದರೆ "ನೀವು ನಿಲ್ಲಿಸಿ, ನಾನು ಗುಂಡು ಹಾರಿಸುತ್ತೇನೆ." ಎಂಬುದೇ ಆದರೆ ಇದನ್ನು "ಶಾಂತಿ" ಎಂದು ಕರೆಯುವುದು ಅವಮಾನ. ಪ್ಯಾಲೆಸ್ಟೈನ್ ಮೇಲೆ ಆಕ್ರಮಣ, ವರ್ಣಭೇದ ನೀತಿ ಮತ್ತು ನರಮೇಧ ಮುಗಿಯುವವರೆಗೆ ಮತ್ತು ಪ್ರತಿಯೊಂದು ಅಪರಾಧಕ್ಕೂ ಲೆಕ್ಕ ಸಿಗುವವರೆಗೆ ಇಸ್ರೇಲ್ ನ್ಯಾಯ, ನಿರ್ಬಂಧಗಳು, ವಿಮೋಚನೆ, ಬಹಿಷ್ಕಾರವನ್ನು ಎದುರಿಸಬೇಕು" ಎಂದು ಅವರು X ನಲ್ಲಿ ಪೋಸ್ಟ್‌ನಲ್ಲಿ ಹೇಳಿದರು.

ಇಸ್ರೇಲ್ ನಿಂದ 45 ಪ್ಯಾಲೆಸ್ಟೀನಿಯನ್ ಬಂಧಿತರ ಶವಗಳನ್ನು ಹಸ್ತಾಂತರ

ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಭಾಗವಾಗಿ ಇಸ್ರೇಲಿ ಜೈಲುಗಳಲ್ಲಿ ಇರಿಸಲಾಗಿದ್ದ 45 ಪ್ಯಾಲೆಸ್ಟೀನಿಯನ್ನರ ಮೃತದೇಹಗಳನ್ನು ಮಂಗಳವಾರ ರೆಡ್‌ಕ್ರಾಸ್‌ಗೆ ಹಸ್ತಾಂತರಿಸಲಾಗಿದೆ.

ಸಾವಿನ ಕಾರಣಕ್ಕಾಗಿ ಶವಗಳನ್ನು ಪರೀಕ್ಷಿಸಲಾಗುತ್ತಿದೆ. ಒಪ್ಪಂದದ ಭಾಗವಾಗಿ ಸೋಮವಾರ 1900 ಕ್ಕೂ ಹೆಚ್ಚು ಜೀವಂತ ಪ್ಯಾಲೆಸ್ಟೀನಿಯನ್ ಬಂಧಿತರನ್ನು ಇಸ್ರೇಲಿ ಪ್ರಿಯಾನ್‌ಗಳಿಂದ ಬಿಡುಗಡೆ ಮಾಡಲಾಯಿತು. ಆದಾಗ್ಯೂ, ಅಲ್ ಜಜೀರಾ ಪ್ರಕಾರ, 360 ಮಕ್ಕಳು ಸೇರಿದಂತೆ 10,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯನ್ನರು ಇಸ್ರೇಲಿ ಜೈಲುಗಳಲ್ಲಿ ಕಾನೂನುಬಾಹಿರವಾಗಿ ಬಂಧಿಸಲ್ಪಟ್ಟಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಪ್ರಿಯಾನ್‌ಗಳಲ್ಲಿ ಕನಿಷ್ಠ 77 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Operation Sindoor ಗೆ ಪಾಕಿಸ್ತಾನದ 100 ಕ್ಕೂ ಹೆಚ್ಚು ಸೈನಿಕರು ಬಲಿ, 12 ವಿಮಾನಗಳು ಧ್ವಂಸ: ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್

ಜೈಸಲ್ಮೇರ್‌ನಲ್ಲಿ ಹೊತ್ತಿ ಉರಿದ ಬಸ್: 15 ಮಂದಿ ಸಜೀವದಹನ; ಕಿಟಕಿಯಿಂದ ಹಾರಿ ಜೀವ ಉಳಿಸಿಕೊಂಡ ಪ್ರಯಾಣಿಕರು, Video!

ಟೀಕೆ ಬದಲು ಸಾಮೂಹಿಕ ಪ್ರಯತ್ನ ಅಗತ್ಯ: ಕಿರಣ್​ ಮಜುಂದಾರ್​ಗೆ ಡಿ.ಕೆ ಶಿವಕುಮಾರ್ ತಿರುಗೇಟು

ಮಿತಿ ಮೀರುತ್ತಿದ್ದೀರಾ? ಒಕ್ಕೂಟ ವ್ಯವಸ್ಥೆಯ ಕಥೆಯೇನು?: ತಮಿಳುನಾಡು ಕೇಸ್ ನಲ್ಲಿ ED ವಿರುದ್ಧ 'ಸುಪ್ರೀಂ' ಗರಂ; ಕೋರ್ಟ್ ಚಾಟಿಗೆ ತನಿಖಾ ಸಂಸ್ಥೆ ಬೇಸ್ತು!

ರಾಜ್ಯದ ಕೈತಪ್ಪಿದ ₹10,000 ಕೋಟಿ ಆದಾಯ, 30,000 ಉದ್ಯೋಗ! Google AI Data Centre ಯೋಜನೆ ಆಂಧ್ರಪ್ರದೇಶದ ಪಾಲು!

SCROLL FOR NEXT