ಡೊನಾಲ್ಡ್ ಟ್ರಂಪ್ 
ವಿದೇಶ

Big step or big threat? ರಷ್ಯಾದಿಂದ ತೈಲ ಖರೀದಿ, ಭಾರತಕ್ಕೆ ಮತ್ತೆ ಭಾರಿ ಸುಂಕದ ಎಚ್ಚರಿಕೆ ನೀಡಿದ ಟ್ರಂಪ್!

ರಷ್ಯಾದಿಂದ ತೈಲ ಆಮದುಗಳನ್ನು ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಯನ್ನು ಮಿತಿಗೊಳಿಸದಿದ್ದಲ್ಲಿ ಭಾರತಕ್ಕೆ ಭಾರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ.

ರಷ್ಯಾದಿಂದ ತೈಲ ಆಮದುಗಳನ್ನು ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ರಷ್ಯಾದೊಂದಿಗೆ ತೈಲ ಖರೀದಿಗೆ ಹೋಗುವುದಿಲ್ಲ ಎಂದು ಭಾರತದ ಪ್ರಧಾನಿ ನನಗೆ ಹೇಳಿದ್ದಾರೆ. ಆದರೆ ಅವರು ಮತ್ತೆ ತೈಲ ಖರೀದಿ ಮುಂದುವರೆಸಿದರೆ ಅವರು ಭಾರಿ ಸುಂಕವನ್ನು ಪಾವತಿಸಬೇಕಾಗುತ್ತದೆ ಎಂದರು.

ತಮ್ಮ ಮತ್ತು ಪ್ರಧಾನಿ ಮೋದಿ ನಡುವಿನ ಇತ್ತೀಚಿನ ದೂರವಾಣಿ ಮಾತುಕತೆ ಬಗ್ಗೆ ತಿಳಿದಿಲ್ಲ ಎಂಬ ಭಾರತ ಸರ್ಕಾರದ ಪ್ರತಿಕ್ರಿಯೆ ಕುರಿತು ಉತ್ತರಿಸಿದ ಟ್ರಂಪ್, ಆ ರೀತಿ ಅವರು ಹೇಳಿದರೆ, ಅವರು ಭಾರಿ ಸುಂಕ ಪಾವತಿಸುವುದನ್ನು ಮುಂದುವರೆಸುತ್ತಾರೆ. ಅವರು ಅದನ್ನು ಮಾಡಲು ಬಯಸುವುದಿಲ್ಲ ಎಂದು ಹೇಳಿದರು.

ರಷ್ಯಾದಿಂದ ತೈಲ ಖರೀದಿಯನ್ನು ಭಾರತ ನಿಲ್ಲಿಸುತ್ತದೆ ಎಂದು ಪ್ರಧಾನಿ ಮೋದಿ ಅವರಿಗೆ ಭರವಸೆ ನೀಡಿದ್ದಾರೆ ಎಂದು ಬುಧವಾರ ಹೇಳಿದ್ದ ಟ್ರಂಪ್, ಇದನ್ನು "ದೊಡ್ಡ ಹೆಜ್ಜೆ" ಎಂದು ಕರೆದಿದ್ದರು. ಆದರೆ ಪ್ರಧಾನಿ ಮೋದಿ ಅಂತಹ ಯಾವುದೇ ಹೇಳಿಕೆ ನೀಡಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತ್ತು.

ಗುರುವಾರ ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ MEA ವಕ್ತಾರ ರಣಧೀರ್ ಜೈಸ್ವಾಲ್, ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಣ ಅಂತಹ ಯಾವುದೇ ಸಂಭಾಷಣೆ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar Polls: ನಾಮಪತ್ರ ಸಲ್ಲಿಕೆಗೆ ಕಡೆಯ ದಿನ, ಆರ್ ಜೆಡಿಯ 143 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ!

ರಾಜ್ಯದಲ್ಲಿ 'PPP' ಮಾದರಿಯಲ್ಲಿ ಎಂಟು ವೈದ್ಯಕೀಯ ಕಾಲೇಜುಗಳು: ಸರ್ಕಾರದ ಪ್ರಸ್ತಾವನೆಗೆ ಶಿಕ್ಷಣ ತಜ್ಞರ ಆಕ್ಷೇಪ!

ಬೆಂಗಳೂರಿನ ಮೂಲಸೌಕರ್ಯ ಬಗ್ಗೆ ಟೀಕೆ: ನಾವು ಹೇಗಿದ್ವಿ, ಹೇಗಾದ್ವಿ? ಅನ್ನೋದನ್ನ ಮರೆತು ಮಾತಡ್ತಾರೆ; ಉದ್ಯಮಿ ಗಳಿಗೆ ಡಿಕೆಶಿ ಟಾಂಗ್!

ಬಿಜೆಪಿ ವಿರುದ್ಧ ‘ವೋಟ್ ಚೋರ್ ಗದ್ದಿ ಚೋಡ್ ’: ಪ್ರತಿ ಕ್ಷೇತ್ರದಲ್ಲಿ 2 ಲಕ್ಷ ಸಹಿ ಸಂಗ್ರಹಿಸಲು ಶಿವಕುಮಾರ್ ಟಾರ್ಗೆಟ್!

PAK vs SA: ಸ್ಪಾಟ್ ಫಿಕ್ಸಿಂಗ್ ನಿಂದ ಬ್ಯಾನ್ ಆಗಿದ್ದ ಆಟಗಾರನಿಗೆ ಮತ್ತೆ ಮಣೆ, 38ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ!

SCROLL FOR NEXT