ಅಲ್ಬೇನಿಯಾ ಎಐ ಸಚಿವೆ ಡಿಯೆಲ್ಲಾ 
ವಿದೇಶ

ಅಲ್ಬೇನಿಯಾದ ಎಐ ಸಚಿವೆ ಈಗ ಗರ್ಭಿಣಿ, 83 ಮಕ್ಕಳ ತಾಯಿ..: ಅಲ್ಬೇನಿಯಾ ಪ್ರಧಾನಿ ಎಡಿ ರಾಮ ವಿಲಕ್ಷಣ ಘೋಷಣೆ!

ಇಂದು ನಾವು ಡಿಯೆಲ್ಲಾ ವಿಚಾರವಾಗಿ ರಿಸ್ಕ್‌ ತೆಗೆದುಕೊಂಡಿದ್ದೇವೆ. ಮೊದಲ ಬಾರಿಗೆ ಡಿಯೆಲ್ಲಾ ಗರ್ಭಿಣಿಯಾಗಿದ್ದು, 83 ಮಕ್ಕಳ ತಾಯಿಯಾಗಲಿದ್ದಾರೆ...

ನವದೆಹಲಿ: ಇಡೀ ಜಗತ್ತೇ ಅಚ್ಚರಿಯಿಂದ ನೋಡುವಂತೆ ಮಾಡಿದ್ದ ಅಲ್ಬೇನಿಯಾದ ಎಐ ಸಚಿವೆ ಡಿಯೆಲ್ಲಾ (AI Minister Diella) ಈಗ ಗರ್ಭಿಣಿಯಾಗಿದ್ದು 83 ಮಕ್ಕಳ ತಾಯಿಯಾಗಲಿದ್ದಾರೆ ಎಂದು ಪ್ರಧಾನಿ ಎಡಿ ರಾಮ ವಿಲಕ್ಷಣ ಘೋಷಣೆ ಮಾಡಿದ್ದಾರೆ.

ಬರ್ಲಿನ್‌ನಲ್ಲಿ ನಡೆದ ಗ್ಲೋಬಲ್‌ ಡೈಲಾಗ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಲ್ಬೇನಿಯಾ ಪ್ರಧಾನಿ ಎಡಿ ರಾಮ, 'ಇಂದು ನಾವು ಡಿಯೆಲ್ಲಾ ವಿಚಾರವಾಗಿ ರಿಸ್ಕ್‌ ತೆಗೆದುಕೊಂಡಿದ್ದೇವೆ. ಮೊದಲ ಬಾರಿಗೆ ಡಿಯೆಲ್ಲಾ ಗರ್ಭಿಣಿಯಾಗಿದ್ದು, 83 ಮಕ್ಕಳ ತಾಯಿಯಾಗಲಿದ್ದಾರೆ. ಮಕ್ಕಳು ಅಥವಾ ಸಹಾಯಕರು, ಸಂಸತ್ತಿನಲ್ಲಿ ನಡೆಯುವ ಎಲ್ಲವನ್ನೂ ದಾಖಲಿಸಲಿದ್ದಾರೆ ಎಂದು ಹೇಳಿದರು.

'ಪ್ರತಿಯೊಬ್ಬರೂ… ಸಂಸತ್ತಿನ ಅಧಿವೇಶನಗಳಲ್ಲಿ ಭಾಗವಹಿಸುವವರಿಗೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಾರೆ. ಸಂಸತ್‌ನಲ್ಲಿ ನಡೆಯುವ ಎಲ್ಲದರ ದಾಖಲೆಯನ್ನು ಇಟ್ಟುಕೊಳ್ಳುತ್ತಾರೆ. ಈ ಮಕ್ಕಳು ತಮ್ಮ ತಾಯಿಯ ಜ್ಞಾನವನ್ನು ಹೊಂದಿರುತ್ತಾರೆ. 2026 ರ ಅಂತ್ಯದ ವೇಳೆಗೆ ಈ ವ್ಯವಸ್ಥೆಯು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂದು ಎಡಿ ರಾಮ ತಿಳಿಸಿದ್ದಾರೆ.

ಉದಾಹರಣೆಗೆ, ನೀವು ಕಾಫಿ ಕುಡಿಯಲು ಹೋಗಿ ಸದನಕ್ಕೆ ಹಿಂತಿರುಗಲು ಮರೆತರೆ, ಈ ಮಗು ನೀವು ಸಭಾಂಗಣದಲ್ಲಿ ಇಲ್ಲದಿದ್ದರೂ, ಏನು ಹೇಳಬೇಕೆಂದಿರುತ್ತೀರಿ ಅದನ್ನು ಹೇಳುತ್ತದೆ. ನೀವು ಯಾರ ಮೇಲೆ ಪ್ರತಿದಾಳಿ ಮಾಡಬೇಕೆಂದು ಹೇಳುತ್ತದೆ ಎಂದು ಎಐ ಸಹಾಯಕರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಪ್ರಧಾನಿ ಎಡಿ ರಾಮ ವಿವರಿಸಿದರು.

ಅಂತೆಯೇ 2026 ರ ಅಂತ್ಯದ ವೇಳೆಗೆ ಈ ವ್ಯವಸ್ಥೆಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಪ್ರಧಾನಿ ಎಡಿರಾಮ ವಿಶ್ವಾಸ ವ್ಯಕ್ತಪಡಿಸಿದರು.

ಎಐ ಸಚಿವೆ ಡಿಯೆಲ್ಲಾ

ಅಲ್ಬೇನಿಯಾದ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತಗೊಳಿಸಲು ಎಐ ಸಚಿವೆ ಡಿಯೆಲ್ಲಾ ಅವರನ್ನು ಸೆಪ್ಟೆಂಬರ್‌ನಲ್ಲಿ ನೇಮಿಸಲಾಗಿತ್ತು. ಸಾರ್ವಜನಿಕ ಟೆಂಡರ್‌ಗಳಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಡಿಯೆಲ್ಲಾ ಅವರಿಗೆ ನೀಡಲಾಗಿದೆ. ಅವುಗಳನ್ನು ಶೇಕಡಾ 100 ರಷ್ಟು ಭ್ರಷ್ಟಾಚಾರ ಮುಕ್ತಗೊಳಿಸುತ್ತದೆ. ಟೆಂಡರ್ ಕಾರ್ಯವಿಧಾನಕ್ಕೆ ಸಲ್ಲಿಸಲಾದ ಪ್ರತಿಯೊಂದು ಸಾರ್ವಜನಿಕ ನಿಧಿಯು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ ಎಂದು ಪ್ರಧಾನಿ ಎಡಿ ರಾಮಾ ಈ ಹಿಂದೆ ಹೇಳಿದ್ದರು.

ಇ-ಅಲ್ಬೇನಿಯಾ ವೇದಿಕೆಯಲ್ಲಿ ಜನವರಿಯಲ್ಲಿ ಮೊದಲು ವರ್ಚುವಲ್ ಸಹಾಯಕರಾಗಿ ಪ್ರಾರಂಭಿಸಲಾಯಿತು. ನಾಗರಿಕರು ಮತ್ತು ವ್ಯವಹಾರಗಳು ರಾಜ್ಯ ದಾಖಲೆಗಳನ್ನು ಪಡೆಯಲು ಸಹಾಯ ಮಾಡುತ್ತಿದ್ದಾರೆ. AI- ರಚಿತವಾದ ಸಚಿವೆ ಡೆಯೆಲ್ಲಾರನ್ನು ಸಾಂಪ್ರದಾಯಿಕ ಅಲ್ಬೇನಿಯನ್ ಉಡುಪಿನಲ್ಲಿರುವ ಮಹಿಳೆಯಾಗಿ ತೋರಿಸಲಾಗಿತ್ತು.

ಜಗತ್ತಿನ ಮೊಟ್ಟ ಮೊದಲ ಎಐ ಸಚಿವೆ

ಎಐ ಸಚಿವೆ ಡಿಯೆಲ್ಲಾ ನೇಮಕ ಮೂಲಕ ಅಲ್ಬೇನಿಯಾ ಮಾನವೇತರ ಸರ್ಕಾರಿ ಸಚಿವರನ್ನು ಅಧಿಕೃತವಾಗಿ ನೇಮಿಸಿದ ವಿಶ್ವದ ಮೊದಲ ದೇಶ ಎಂಬ ಕೀರ್ತಿಗೆ ಭಾಜನವಾಯಿತು. ಈ ಕೃತಕ ಬುದ್ಧಿಮತ್ತೆ ಸಚಿವರಿಗಿಂತ ಭಿನ್ನವಾಗಿ, ಡಿಯೆಲ್ಲಾ ಸ್ವತಃ AI ಘಟಕವಾಗಿದ್ದು, ಸಂಪೂರ್ಣವಾಗಿ ಕೋಡ್ ಮತ್ತು ಪಿಕ್ಸೆಲ್‌ಗಳಿಂದ ಕೂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಭಾರತ ಜತೆಗಿನ ಸಂಬಂಧಕ್ಕೆ ಧಕ್ಕೆ ತಂದು ಪಾಕ್‌ ಜೊತೆ ಸ್ನೇಹ ಇಲ್ಲ': ಅಮೆರಿಕ ಕಾರ್ಯದರ್ಶಿ ಮಾರ್ಕೋ ರುಬಿಯೋ

ICC Womens World Cup 2025: ಭಾರತ-ಬಾಂಗ್ಲಾದೇಶ ಪಂದ್ಯ ಮಳೆಗಾಹುತಿಚ ಸೆಮೀಸ್ ನಲ್ಲಿ ಇಂಡಿಯಾ-ಆಸಿಸ್ ಮುಖಾಮುಖಿ!

ದೇಶಾದ್ಯಂತ SIR ಪ್ರಯೋಗ: ಮೊದಲ ಹಂತದಲ್ಲಿ ಬಂಗಾಳ, ಕೇರಳ, ತಮಿಳುನಾಡು; ನಾಳೆ ಕೇಂದ್ರ ಚುನಾವಣಾ ಆಯೋಗ ಮಹತ್ವದ ಸುದ್ದಿಗೋಷ್ಠಿ

ಭಯೋತ್ಪಾದಕರ ಪಟ್ಟಿಗೆ Bollywood ನಟ ಸಲ್ಮಾನ್ ಖಾನ್ ಹೆಸರು ಸೇರಿಸಿದ ಪಾಕಿಸ್ತಾನ!

Cricket: 'ಕೊನೆಯ ವಿದಾಯ ಸಿಡ್ನಿ..'; ರೋಹಿತ್ ಶರ್ಮಾ ಭಾವನಾತ್ಮಕ ಪೋಸ್ಟ್; ವಿಶ್ವಕಪ್ ಗೆ ಡೌಟ್!

SCROLL FOR NEXT