ಓಕ್ ವಿಲ್ಲೆ: ಕೆನಡಾದಲ್ಲಿ ಜನಾಂಗೀಯ ನಿಂದನೆ ಹೆಚ್ಚಾಗುತ್ತಿದೆ. ಇಲ್ಲಿನ ಓಕ್‌ವಿಲ್ಲೆಯಲ್ಲಿ ಭಾರತೀಯ ಕೆಲಸಗಾರ್ತಿಯನ್ನು ಸ್ಥಳೀಯ ಪ್ರಜೆಯೊಬ್ಬ ಕೆಟ್ಟದಾಗಿ ನಿಂದಿಸಿರುವ ವಿಡಿಯೋ ವೈರಲ್ ಆಗಿದೆ. ಮೆಕ್‌ಡೊನಾಲ್ಡ್ ಮಳಿಗೆಯಲ್ಲಿ ನಡೆದಿರುವ ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಭಾರತೀಯ ಕೆಲಸಗಾರ್ತಿಯ ವಿರುದ್ಧ ಸ್ಥಳೀಯ ಯುವಕ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಗೋ ಬ್ಯಾಕ್ ಯುವರ್ fu**king country, you st****ng as***le Indian ಎಂದು ಬೈದಿದ್ದಾನೆ. ಆಕ್ರೋಶಗೊಂಡ ಯುವಕ ಪದೇ ಪದೇ ಇದೇ ರೀತಿಯ ಪದಗಳನ್ನು ಬಳಸಿ ನಿಂದಿಸಿದ್ದಾರೆ.
ಈ ಘಟನೆ ಬಗ್ಗೆ ನೆಟ್ಟಿಗರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದು ಭಯಾನಕ. ಇದು ನನ್ನ ಹುಟ್ಟೂರು. ನಮ್ಮ ಸಮಾಜದಲ್ಲಿ ಇಂಹದೆಲ್ಲಾ ನಡೆಯಬಾರದು. ಅವರೆಲ್ಲರಿಗೂ ನಾಚಿಕೆಗೆಟ್ಟವರು. ಅವರ ವಿರುದ್ಧ ನಿಂತ ಮಹಿಳೆಗೆ ಧನ್ಯವಾದ ಎಂದು ಸ್ಥಳೀಯರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ. ಈ ತಿಂಗಳ ಆರಂಭದಲ್ಲಿ ಒಂಟಾರಿಯೊ ಶಾಸಕ ಹರ್ದೀಪ್ ಗ್ರೆವಾಲ್ ಜನಾಂಗೀಯ ದಾಳಿಗೆ ಗುರಿಯಾಗಿದ್ದರು. ಇಬ್ಬರು ಅಪರಿಚಿತರು ಅವರ ವಿರುದ್ಧ ದ್ವೇಷಪೂರಿತ, ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ಒಬ್ಬರು "ಹೇ ಪೇಟ ತಲೆ, ಮನೆಗೆ ಹೋಗು ಎಂದು ಹೇಳಿದ್ದರೆ, ಇನ್ನೋರ್ವರು ನೀವೆಲ್ಲರೂ ಸಾಯಬೇಕು" ಎಂದು ಘೋಷಣೆ ಕೂಗುತ್ತಾ ಹೇಳಿದ್ದರು.