ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಂದು ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೇಟಿ ಮಾಡಿ ಮಾತುಕತೆ ನಡೆಸಿ ಎರಡೂ ದೇಶಗಳು ಪಾಲುದಾರರು ಮತ್ತು ಸ್ನೇಹಿತರಾಗಲು ಶ್ರಮಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಚೀನಾ ಮತ್ತು ಅಮೆರಿಕ ಪ್ರಮುಖ ದೇಶಗಳಾಗಿ ನಮ್ಮ ಜವಾಬ್ದಾರಿಯನ್ನು ಜಂಟಿಯಾಗಿ ನಿಭಾಯಿಸಬಹುದು. ಎರಡೂ ದೇಶಗಳು ಇಡೀ ಪ್ರಪಂಚದ ಒಳಿತಿಗಾಗಿ ಹೆಚ್ಚು ಉತ್ತಮ ಮತ್ತು ತಳಮಟ್ಟದ ವಿಷಯಗಳನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡಬಹುದು ಎಂದು ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಮಾತುಕತೆಗಳು ಪ್ರಾರಂಭವಾದಾಗ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.
ಕ್ಸಿ ಜಿನ್ ಪಿಂಗ್ ಅವರನ್ನು "ಕಠಿಣ ಸಮಾಲೋಚಕ" ಎಂದು ಕರೆದ ಟ್ರಂಪ್, ಚೀನಾದ ನಾಯಕನೊಂದಿಗಿನ "ಅತ್ಯಂತ ಯಶಸ್ವಿ ಸಭೆ"ಯನ್ನು ನಿರೀಕ್ಷಿಸುವುದಾಗಿ ಹೇಳಿದರು, ದೀರ್ಘಕಾಲದವರೆಗೆ ಅದ್ಭುತ ಸಂಬಂಧವನ್ನು" ಹೊಂದಿರುತ್ತಾರೆ ಎಂದು ಹೇಳಿದರು.
ತಿಂಗಳುಗಳ ಕಾಲ ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯ ನಂತರ ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಸಂಬಂಧವನ್ನು ಸ್ಥಿರಗೊಳಿಸಲು ಈ ಸಭೆಯು ಒಂದು ಹೆಚ್ಚಿನ ಪ್ರಯತ್ನವಾಗಿದೆ.