ಡೊನಾಲ್ಡ್ ಟ್ರಂಪ್-ಕ್ಸಿ ಜಿನ್ ಪಿಂಗ್  
ವಿದೇಶ

ವ್ಯಾಪಾರ ಉದ್ವಿಗ್ನತೆ ನಂತರ ಅಮೆರಿಕ-ಚೀನಾ ಸಂಬಂಧ ಸ್ಥಿರಗೊಳಿಸುವ ಪ್ರಯತ್ನ: ಇಂದು ದ.ಕೊರಿಯಾದಲ್ಲಿ ಟ್ರಂಪ್-ಜಿನ್ ಪಿಂಗ್ ಭೇಟಿ, ಮಾತುಕತೆ

ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ನಂತರ ಟ್ರಂಪ್ ಅವರು ಹಲವು ದೇಶಗಳ ಮೇಲೆ ಸುಂಕ ಹೇರಿಕೆಯನ್ನು ನವೀಕರಿಸಿದ್ದು, ರಫ್ತಿನ ಮೇಲಿನ ಪ್ರತೀಕಾರದ ನಿರ್ಬಂಧಗಳು ಚೀನಾದೊಂದಿಗೆ ಮಾತುಕತೆಯ ತುರ್ತು ಪರಿಸ್ಥಿತಿಯನ್ನು ಹೆಚ್ಚಿಸಿವೆ.

ಬುಸಾನ್: ಹಲವು ತಿಂಗಳುಗಳಿಂದ ನಡೆಯುತ್ತಿರುವ ವ್ಯಾಪಾರ ಉದ್ವಿಗ್ನತೆಯ ನಂತರ ವಿಶ್ವದ ಎರಡು ದೊಡ್ಡ ಆರ್ಥಿಕ ರಾಷ್ಟ್ರಗಳ ನಡುವಿನ ಸಂಬಂಧವನ್ನು ಸ್ಥಿರಗೊಳಿಸುವ ಪ್ರಯತ್ನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಗುರುವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡುತ್ತಿದ್ದಾರೆ.

ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ವಹಿಸಿಕೊಂಡ ನಂತರ ಟ್ರಂಪ್ ಅವರು ಹಲವು ದೇಶಗಳ ಮೇಲೆ ಸುಂಕ ಹೇರಿಕೆಯನ್ನು ನವೀಕರಿಸಿದ್ದು, ರಫ್ತಿನ ಮೇಲಿನ ಪ್ರತೀಕಾರದ ನಿರ್ಬಂಧಗಳು ಚೀನಾದೊಂದಿಗೆ ಮಾತುಕತೆಯ ತುರ್ತು ಪರಿಸ್ಥಿತಿಯನ್ನು ಹೆಚ್ಚಿಸಿವೆ. ದೀರ್ಘಕಾಲದ ಬಿಕ್ಕಟ್ಟು ಜಾಗತಿಕ ಆರ್ಥಿಕತೆಯನ್ನು ಅಪಾಯಕ್ಕೆ ಸಿಲುಕಿಸಬಹುದು ಮತ್ತು ತಮ್ಮದೇ ಆದ ಬೆಳವಣಿಗೆಯ ನಿರೀಕ್ಷೆಗಳಿಗೆ ಹಾನಿ ಮಾಡುತ್ತದೆ ಎಂದು ಅಮೆರಿಕ ಚೀನಾ ಎರಡೂ ದೇಶಗಳು ಮನಗಂಡಂತಿದೆ.

ಚೀನಾದ ಸರಕುಗಳ ಮೇಲೆ ಹೆಚ್ಚುವರಿ ಶೇಕಡಾ 100ರಷ್ಟು ಆಮದು ತೆರಿಗೆಯನ್ನು ವಿಧಿಸುವ ಇತ್ತೀಚಿನ ಬೆದರಿಕೆಯನ್ನು ಟ್ರಂಪ್ ಸರಿಪಡಿಸಲು ಉದ್ದೇಶಿಸಿಲ್ಲ ಎಂದು ಯುಎಸ್ ಅಧಿಕಾರಿಗಳು ಹೇಳುತ್ತಾರೆ. ಚೀನಾ ಅಪರೂಪದ ತನ್ನ ರಫ್ತು ನಿಯಂತ್ರಣಗಳನ್ನು ಸಡಿಲಿಸಲು ಮತ್ತು ಅಮೆರಿಕದಿಂದ ಸೋಯಾಬೀನ್ ನ್ನು ಖರೀದಿಸಲು ಸಿದ್ಧವಾಗಿರುವ ಲಕ್ಷಣಗಳನ್ನು ತೋರಿಸಿದೆ.

ಡೊನಾಲ್ಡ್ ಟ್ರಂಪ್ ಅವರು ದಕ್ಷಿಣ ಕೊರಿಯಾಕ್ಕೆ ಹೋಗುವ ದಾರಿಯಲ್ಲಿ ಏರ್ ಫೋರ್ಸ್ ಒನ್‌ನಲ್ಲಿ ಫೆಂಟನಿಲ್ ತಯಾರಿಕೆಯಲ್ಲಿ ಚೀನಾದ ಪಾತ್ರಕ್ಕೆ ಸಂಬಂಧಿಸಿದಂತೆ ಈ ವರ್ಷದ ಆರಂಭದಲ್ಲಿ ಚೀನಾದ ಮೇಲೆ ವಿಧಿಸಲಾದ ಸುಂಕಗಳನ್ನು ಕಡಿಮೆ ಮಾಡಬಹುದು ಎಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಶೃಂಗಸಭೆಯ ಮುಖ್ಯ ಸ್ಥಳವಾದ ಜಿಯೊಂಗ್ಜುವಿನ ದಕ್ಷಿಣಕ್ಕೆ ಸುಮಾರು 76 ಕಿ.ಮೀ ದೂರದಲ್ಲಿರುವ ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಭಾರತೀಯ ಕಾಲಮಾನ ಇಂದು ಬೆಳಗ್ಗೆ 11 ಗಂಟೆಗೆ ಸಭೆ ಪ್ರಾರಂಭವಾಗಲಿದೆ.

ಈ ವಾರದ ಆರಂಭದಲ್ಲಿ ಕೌಲಾಲಂಪುರದಲ್ಲಿ ಎರಡೂ ದೇಶಗಳ ಅಧಿಕಾರಿಗಳು ತಮ್ಮ ನಾಯಕರಿಗೆ ಮಾತುಕತೆ ನಿಗದಿಪಡಿಸಲು ನಿಶ್ಚಯಿಸಿದ್ದರು. ನಂತರ, ಚೀನಾದ ಉನ್ನತ ವ್ಯಾಪಾರ ಸಮಾಲೋಚಕ ಲಿ ಚೆಂಗ್‌ಗ್ಯಾಂಗ್ ಅವರು "ಪ್ರಾಥಮಿಕ ಒಮ್ಮತ"ವನ್ನು ತಲುಪಿದ್ದೇವೆ ಎಂದು ಹೇಳಿದರು, ಈ ಹೇಳಿಕೆಯನ್ನು US ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ದೃಢಪಡಿಸಿದರು,

ಚೀನಾವನ್ನು ವಿಶ್ವಾಸಾರ್ಹ ಪಾಲುದಾರನನ್ನಾಗಿ ಇರಿಸಿಕೊಳ್ಳಲು ಮತ್ತು ಅಮೆರಿಕದ ಆಡಳಿತದ ಸುಂಕ ನೀತಿಯಿಂದ ನಿರಾಶೆಗೊಂಡ ದೇಶಗಳೊಂದಿಗೆ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಕ್ಸಿ ಜಿನ್ ಪಿಂಗ್ ಒಂದು ಅವಕಾಶವನ್ನು ನೋಡುತ್ತಾರೆ ಎಂದು ಗುಪ್ತಚರ ಸಲಹಾ ಸಂಸ್ಥೆಯಾದ ಟಿಡಿ ಇಂಟರ್ನ್ಯಾಷನಲ್‌ನ ಸಿಇಒ ಆಗಿರುವ ಮಾಜಿ ವಿದೇಶಾಂಗ ಇಲಾಖೆಯ ಅಧಿಕಾರಿ ಜೇ ಟ್ರೂಸ್‌ಡೇಲ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Video: 17 ಮಕ್ಕಳು ಸೇರಿ 19 ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ವ್ಯಕ್ತಿ ಮುಂಬೈ ಪೊಲೀಸ್ ಗುಂಡಿಗೆ ಬಲಿ!

2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ನಟ ಪ್ರಕಾಶ್‌ ರಾಜ್‌ ಸೇರಿ 70 ಮಂದಿ ಆಯ್ಕೆ

ಡಿಕೆಶಿ, ತೇಜಸ್ವಿ ಸೂರ್ಯ ಜಟಾಪಟಿ; ಬೆಂಗಳೂರಿನಲ್ಲಿ ಟನಲ್ ರಸ್ತೆ ಬಗ್ಗೆ ಕೇಂದ್ರ ಸಚಿವ ಖಟ್ಟರ್ ಹೇಳಿದ್ದೇನು?

ಕೇಂದ್ರದ ಬೆಳೆ ವಿಮಾ ಯೋಜನೆ: ಅನ್ನದಾತನಿಗೆ 'ಅಪಹಾಸ್ಯ'; ಕೇವಲ 3 ರೂ. ಪರಿಹಾರ, ಚೆಕ್ ಗಳ ಮೂಲಕ ಹಿಂತಿರುಗಿಸಿದ ಮಹಾರಾಷ್ಟ್ರ ರೈತರು!

ಚಿತ್ತಾಪುರದಲ್ಲಿ ಪಥ ಸಂಚಲನ: ಮತ್ತೊಂದು ಶಾಂತಿ ಸಭೆ ನಡೆಸುವಂತೆ ಹೈಕೋರ್ಟ್ ಸೂಚನೆ; RSSಗೆ ಹಿನ್ನಡೆ

SCROLL FOR NEXT