ಪ್ರಧಾನಿ ನರೇಂದ್ರ ಮೋದಿ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ 
ವಿದೇಶ

ಶಾಂತಿ ಮಾತುಕತೆಗೆ ದಾರಿ ತೋರಿಸಿ ಉಕ್ರೇನ್ ಸಂಘರ್ಷ ಕೊನೆಗೊಳಿಸಲು ಭಾರತದ ಪಾತ್ರ ಮುಖ್ಯ: EU ನಾಯಕರು

ಉಕ್ರೇನ್ ಸಂಘರ್ಷ ಚರ್ಚೆಯ ಜೊತೆಗೆ, ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಡಿಸೆಂಬರ್ ವೇಳೆಗೆ ತಮ್ಮ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದೆ.

ನವದೆಹಲಿ: ರಷ್ಯಾ ಉಕ್ರೇನ್ ಮೇಲೆ "ತನ್ನ ಆಕ್ರಮಣಕಾರಿ ಯುದ್ಧವನ್ನು ಕೊನೆಗೊಳಿಸುವಲ್ಲಿ ಮತ್ತು ಶಾಂತಿಯತ್ತ ಹಾದಿಯನ್ನು ಸೃಷ್ಟಿಸಲು ಸಹಾಯ ಮಾಡುವಲ್ಲಿ" ಭಾರತವು ಪ್ರಮುಖ ಪಾತ್ರ ವಹಿಸಿದೆ ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿದ್ದಾರೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಭಾರತದ ನಿರಂತರ ಸಂಬಂಧವನ್ನು ಅವರು ಸ್ವಾಗತಿಸಿದ್ದಾರೆ.

27 ರಾಷ್ಟ್ರಗಳ ಒಕ್ಕೂಟ ವ್ಯವಸ್ಥೆಯಾದ ಐರೋಪ್ಯ ಒಕ್ಕೂಟದ ಉನ್ನತ ನಾಯಕರಾದ ಆಂಟೋನಿಯೊ ಕೋಸ್ಟಾ ಮತ್ತು ವಾನ್ ಡೆರ್ ಲೇಯೆನ್ ಅವರೊಂದಿಗಿನ ಜಂಟಿ ಫೋನ್ ಕರೆಯ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರ ಮತ್ತು ಸ್ಥಿರತೆಯ ಆರಂಭಿಕ ಪುನಃಸ್ಥಾಪನೆಗೆ ಭಾರತದ ಸ್ಥಿರ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.

ಉಕ್ರೇನ್ ಸಂಘರ್ಷ ಚರ್ಚೆಯ ಜೊತೆಗೆ, ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಡಿಸೆಂಬರ್ ವೇಳೆಗೆ ತಮ್ಮ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದೆ. ಅಮೆರಿಕದ ಸುಂಕ ಸಮರದ ನಡುವೆ ನಿಯಮ ಆಧಾರಿತ ಜಾಗತಿಕ ಕ್ರಮವನ್ನು ಉತ್ತೇಜಿಸುವ ಮಹತ್ವವನ್ನು ಮೋದಿ ಮತ್ತು ಐರೋಪ್ಯ ಒಕ್ಕೂಟ ನಾಯಕರು ಒತ್ತಿ ಹೇಳಿದರು.

ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ, ಸ್ಥಿರತೆಯನ್ನು ಬೆಳೆಸುವಲ್ಲಿ ಮತ್ತು ಪರಸ್ಪರ ಸಮೃದ್ಧಿಯನ್ನು ಮುನ್ನಡೆಸುವಲ್ಲಿ ಭಾರತ- ಐರೋಪ್ಯ ಒಕ್ಕೂಟ ಕಾರ್ಯತಂತ್ರದ ಪಾಲುದಾರಿಕೆಯ ಪಾತ್ರವನ್ನು ನಾಯಕರು ಒತ್ತಿ ಹೇಳಿದರು.

"ಈ ಯುದ್ಧವು ಜಾಗತಿಕ ಭದ್ರತೆ ಮೇಲೆ ಪರಿಣಾಮಗಳನ್ನು ಬೀರುತ್ತದೆ ಮತ್ತು ಆರ್ಥಿಕ ಸ್ಥಿರತೆಯನ್ನು ಹಾಳು ಮಾಡುತ್ತದೆ. ಆದ್ದರಿಂದ ಇದು ಇಡೀ ಜಗತ್ತಿಗೆ ಅಪಾಯವಾಗಿದೆ." ಭಾರತ-ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ ಮತ್ತು ಶೃಂಗಸಭೆಯ ಮೇಲೆ ಹೆಚ್ಚಾಗಿ ಕೇಂದ್ರೀಕರಿಸಿದ ಮಾತುಕತೆಗಳು, ಯುರೋಪಿಯನ್ ಒಕ್ಕೂಟದ ವ್ಯಾಪಾರ ಆಯುಕ್ತ ಮಾರೋಸ್ ಸೆಫ್ಕೊವಿಕ್ ಅವರ ಭಾರತ ಭೇಟಿ ನೀಡುವ ಕೆಲವು ದಿನಗಳ ಮೊದಲು ನಡೆದಿವೆ.

ಟ್ರಂಪ್ ಆಡಳಿತವು ಭಾರತೀಯ ಸರಕುಗಳ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸಿದ ಪರಿಣಾಮವನ್ನು ಭಾರತ ತಗ್ಗಿಸಲು ಪ್ರಯತ್ನಿಸುತ್ತಿರುವಾಗ ಮೂವರು ನಾಯಕರ ನಡುವೆ ಮಾತುಕತೆ ನಡೆದಿದೆ.

ಪರಸ್ಪರ ಅನುಕೂಲಕ್ಕಾಗಿ ಆರಂಭಿಕ ದಿನಾಂಕದಲ್ಲಿ ಭಾರತದಲ್ಲಿ ಮುಂದಿನ ಭಾರತ-ಯುರೋಪ್ ಒಕ್ಕೂಟ ಶೃಂಗಸಭೆಯನ್ನು ನಡೆಸುವ ಬಗ್ಗೆಯೂ ಮೂವರು ನಾಯಕರು ಚರ್ಚಿಸಿದ್ದಾರೆ. ಪ್ರಧಾನಿ ಮೋದಿ ಅವರು ಕೋಸ್ಟಾ ಮತ್ತು ವಾನ್ ಡೆರ್ ಲೇಯೆನ್ ಅವರನ್ನು ಆಹ್ವಾನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕರಾಳ ಚೀನಾಕ್ಕೆ ಭಾರತವನ್ನು ಕಳೆದುಕೊಂಡಂತೆ ಅನಿಸಿದೆ': ಜಗತ್ತಿನ ಗಮನ ಸೆಳೆದ ಡೊನಾಲ್ಡ್ ಟ್ರಂಪ್ ಪೋಸ್ಟ್!

GST ವ್ಯಾಪ್ತಿಗೆ ಏಕಿಲ್ಲ ಪೆಟ್ರೋಲ್, ಡೀಸೆಲ್?: GST 3.0 ಬಗ್ಗೆ Nirmala Sitharaman ಹೇಳಿದ್ದೇನು?

ರಷ್ಯಾದಿಂದ ತೈಲ ಖರೀದಿಸಿ 'Brahmins' ಶ್ರೀಮಂತರಾಗ್ತಿದ್ದಾರಾ? ಟ್ರಂಪ್ ಸಲಹೆಗಾರನ ಹೇಳಿಕೆಗೆ ಭಾರತದ ತಿರುಗೇಟು!

ಬ್ರಹ್ಮೋಸ್, S-400 ಗೂ ಠಕ್ಕರ್? ಚೀನಾ ಸೇನೆ ಬತ್ತಳಿಕೆಯಲ್ಲಿರುವ ಐದು ಭಯಾನಕ, ವಿಧ್ವಂಸಕ ಶಸ್ತ್ರಾಸ್ತ್ರಗಳು ಇವು!

Madhya Pradesh: 5.2 ಕೆಜಿ ತೂಕದ ಶಿಶು ಜನನ; ಅಧಿಕ ತೂಕ ಆರೋಗ್ಯ ಸಮಸ್ಯೆ ತರುತ್ತದೆಯೇ? ಇಲ್ಲಿದೆ ಮಾಹಿತಿ!

SCROLL FOR NEXT