ದೋಹಾದಲ್ಲಿ ಇಸ್ರೇಲ್ ವಾಯುದಾಳಿ ಚಿತ್ರ 
ವಿದೇಶ

Israel attacks: ದೋಹಾದಲ್ಲಿ 'ಹಮಾಸ್' ನಾಯಕರ ಮನೆ ಮೇಲೆ ಇಸ್ರೇಲ್ ವಾಯು ದಾಳಿ! ಹೇಡಿತನ ಎಂದ ಕತಾರ್!

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮದ ಪ್ರಸ್ತಾಪವನ್ನು ಚರ್ಚಿಸುತ್ತಿರುವಾಗ ಪ್ಯಾಲೆಸ್ತೀನ್ ಗುಂಪಿನ ಸಂಧಾನಕಾರರು ಇಸ್ರೇಲ್‌ ದಾಳಿಗೆ ಗುರಿಯಾಗಿದ್ದಾರೆ ಎಂದು ಹಿರಿಯ ಹಮಾಸ್ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.

ದೋಹಾ: ಕತಾರ್ ರಾಜಧಾನಿ ದೋಹಾದಲ್ಲಿ ಗಾಜಾ ಕದನ ವಿರಾಮ ಪ್ರಸ್ತಾಪದ ಬಗ್ಗೆ ಚರ್ಚಿಸುತ್ತಿದ್ದ ಹಮಾಸ್ ನಾಯಕರ ಅನೇಕ ವಸತಿ ಕಟ್ಟಡಗಳ ಮೇಲೆ ಇಸ್ರೇಲ್ ಮಂಗಳವಾರ ವಾಯು ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಈ ದಾಳಿಯನ್ನು ಇಸ್ರೇಲ್ ಮಿಲಿಟರಿ ಪಡೆ IDF ಖಚಿತಪಡಿಸಿದೆ. ಹಮಾಸ್ ಉಗ್ರ ಸಂಘಟನೆಯ ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡು IDF ಮತ್ತು ISA (ಭದ್ರತಾ ಏಜೆನ್ಸಿ) ಈ ದಾಳಿ ನಡೆಸಿರುವುದಾಗಿ ಹೇಳಿದೆ.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕದನ ವಿರಾಮದ ಪ್ರಸ್ತಾಪವನ್ನು ಚರ್ಚಿಸುತ್ತಿರುವಾಗ ಪ್ಯಾಲೆಸ್ತೀನ್ ಗುಂಪಿನ ಸಂಧಾನಕಾರರು ಇಸ್ರೇಲ್‌ ದಾಳಿಗೆ ಗುರಿಯಾಗಿದ್ದಾರೆ ಎಂದು ಹಿರಿಯ ಹಮಾಸ್ ಅಧಿಕಾರಿಯ ಹೇಳಿಕೆಯನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.

ಹೇಡಿತನ ಎಂದ ಕತಾರ್: ಈ ದಾಳಿಯನ್ನು "ಹೇಡಿತನ" ಎಂದು ಕತಾರ್ ಟೀಕಿಸಿದೆ. ಇಸ್ರೇಲ್ ನ ಈ ರೀತಿಯ ವರ್ತನೆ ಮತ್ತು ಪ್ರಾದೇಶಿಕ ಭದ್ರತೆಗೆ ಭದ್ರತೆಗೆ ಧಕ್ಕೆ ತರುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.

ಹಮಾಸ್ ರಾಜಕೀಯ ಬ್ಯೂರೋದ ಹಲವು ನಾಯಕರು ವಾಸಿಸುವ ವಸತಿ ಕಟ್ಟಡಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಕತಾರ್ ವಿದೇಶಾಂಗ ಸಚಿವರ ವಕ್ತಾರ ಮಜೀದ್ ಅಲ್ ಅನ್ಸಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಕ್ರಿಮಿನಲ್ ದಾಳಿಯು ಎಲ್ಲಾ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಮಾನದಂಡಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಕತಾರಿಗಳು ಮತ್ತು ಕತಾರ್ ನಿವಾಸಿಗಳ ಭದ್ರತೆ ಮತ್ತು ಸುರಕ್ಷತೆಗೆ ಗಂಭೀರ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ.

ಈ ಮಧ್ಯೆ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಕತಾರ್, ಈ ರೀತಿಯ ಎಚ್ಚರಿಕೆ ಇಲ್ಲದ ಇಸ್ರೇಲ್ ವರ್ತನೆ ಮತ್ತು ದೇಶದ ಸುರಕ್ಷತೆ , ಭದ್ರತೆ ಮೇಲಿನ ದಾಳಿಯನ್ನು ಸಹಿಸುವುದಿಲ್ಲ. ಉನ್ನತ ಮಟ್ಟದಲ್ಲಿ ತನಿಖೆ ನಡೆಯುತ್ತಿದ್ದು, ಮುಂದಿನ ವಿವರವನ್ನು ಶೀಘ್ರವಾಗಿ ಘೋಷಿಸಲಾಗುವುದು ಎಂದು ಕತಾರ್ ಹೇಳಿದೆ. ದೋಹದಲ್ಲಿ ಕ್ಷಿಪಣಿ ದಾಳಿ ವರದಿ ಹಿನ್ನೆಲೆಯಲ್ಲಿ ಅಮೆರಿಕದ ಜನರು ತಮ್ಮ ಮನೆಯಲ್ಲಿಯೇ ಇರುವಂತೆ ಕತಾರ್ ನ ಅಮೆರಿಕ ರಾಯಭಾರ ಕಚೇರಿ ಸಲಹೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ-ಅಮೇರಿಕಾ ಆಪ್ತ ಸ್ನೇಹಿತರು, ನಿಮ್ಮೊಂದಿಗೆ ಮಾತನಾಡಲು ನಾನೂ ಉತ್ಸುಕನಾಗಿದ್ದೇನೆ: ಟ್ರಂಪ್'ಗೆ ಪ್ರಧಾನಿ ಮೋದಿ

ಆತ್ಮೀಯ ಸ್ನೇಹಿತನೊಂದಿಗೆ ಮಾತನಾಡಲು ಎದುರು ನೋಡುತ್ತಿದ್ದೇನೆ: ಪ್ರಧಾನಿ ಮೋದಿ ಜೊತೆ ಮಾತನಾಡಲು ಚಡಪಡಿಸುತ್ತಿರುವ ಟ್ರಂಪ್

ಹಳೇ ಮೈಸೂರು ಭಾಗದ ಫಲವತ್ತಾದ ನೆಲ 'ಕೋಮು ಶಕ್ತಿ'ಗಳ ಟಾರ್ಗೆಟ್: ಸಕ್ಕರೆ ನಾಡಲ್ಲಿ ಲೋಕಲ್ ಪಾಲಿಟಿಕ್ಸ್! ಎಚ್ಚೆತ್ತುಕೊಳ್ಳದಿದ್ದರೇ JDS ಫಿನೀಶ್!

ನೇಪಾಳದಲ್ಲಿ ಹಿಂಸಾಚಾರ: ಸಂಕಷ್ಟಕ್ಕೆ ಸಿಲುಕಿರುವ ಪ್ರತಿಯೊಬ್ಬ ಕನ್ನಡಿಗನ ರಕ್ಷಣೆಗೆ ಸರ್ಕಾರ ಬದ್ಧ; ಸಿಎಂ ಸಿದ್ದರಾಮಯ್ಯ

Digital Arrest: ಔರಾದ್ ಮಾಜಿ ಶಾಸಕ ಗುಂಡಪ್ಪ ವಕೀಲ್ ಗೆ 30 ಲಕ್ಷ ರೂ. ಪಂಗನಾಮ ಹಾಕಿದ ವಂಚಕರು!

SCROLL FOR NEXT