ವಾಷಿಂಗ್ಟನ್: ಸೆಪ್ಟೆಂಬರ್ 10 ರಂದು ಟೆಕ್ಸಾಸ್‌ನ ಡಲ್ಲಾಸ್ ನಲ್ಲಿ ಪತ್ನಿ ಮತ್ತು ಮಗನ ಎದುರೇ ವಲಸಿಗನಿಂದ ಶಿರಚ್ಚೇದನಕ್ಕೊಳಗಾದ ಕರ್ನಾಟಕ ಮೂಲದ ಚಂದ್ರ ನಾಗ ಮಲ್ಲಯ್ಯ ಅವರ ಹತ್ಯೆಗೆ ಸಂಬಂಧಪಟ್ಟಂತೆ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ತಮ್ಮ ಟ್ರೋತ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಚಂದ್ರ ನಾಗಮಲ್ಲಯ್ಯ ಅವರನ್ನು ಕ್ಯೂಬಾದ ವಲಸಿಗರೊಬ್ಬರು ಬರ್ಬರವಾಗಿ ಶಿರಚ್ಛೇದನ ಮಾಡಿದ್ದಾರೆ. ಈ ವ್ಯಕ್ತಿ ನಮ್ಮ ದೇಶದಲ್ಲಿ ಎಂದಿಗೂ ಇರಬಾರದಿತ್ತು . ಆರೋಪಿ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಟೆಕ್ಸಾಸ್ ನ ಡಲ್ಲಾಸ್ ನಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದ ಚಂದ್ರ ನಾಗಮಲ್ಲಯ್ಯ ಅವರನ್ನು ಪತ್ನಿ ಮತ್ತು ಮುಂದೆಯೇ ಕ್ರೂರವಾಗಿ ಶಿರಚ್ಛೇದ ಮಾಡಿ ಕೊಲೆ ಮಾಡಿದ ಘಟನೆಯ ಭಯಾನಕ ವರದಿಗಳು ನನಗೆ ತಿಳಿದಿವೆ ಎಂದಿದ್ದಾರೆ.
ಆರೋಪಿಯನ್ನು ಈ ಹಿಂದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸೇರಿದಂತೆ ಭಯಾನಕ ಕ್ರಿಮಿನಲ್ ಕೇಸ್ ಗಳ ಆರೋಪಗಳ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಆದರೆ, ಕ್ಯೂಬಾ ಅಂತಹ ದುಷ್ಟರನ್ನು ತಮ್ಮ ದೇಶಕ್ಕೆ ಬಯಸಲಿಲ್ಲ ಎಂದು ಅಸಮರ್ಥ ಜೋ ಬೈಡನ್ ನೇತೃತ್ವದಲ್ಲಿ ಆರೋಪಿ ನಮ್ಮ ತಾಯ್ನಾಡಿಗೆ ಮರಳಿದರು ಎಂದು ತಿಳಿಸಿದ್ದಾರೆ.
ಅಮೆರಿಕವನ್ನು ಮತ್ತೆ ಸುರಕ್ಷಿತವನ್ನಾಗಿ ಮಾಡುವ ಪ್ರತಿಜ್ಞೆ ಮಾಡಿರುವ ಡೊನಾಲ್ಡ್ ಟ್ರಂಪ್, ತಮ್ಮ ಆಡಳಿತದಲ್ಲಿ ಅಕ್ರಮ ವಲಸಿಗ ಅಪರಾಧಿಗಳ ಬಗ್ಗೆ ಮೃದುವಾಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.