ಡೊನಾಲ್ಡ್ ಟ್ರಂಪ್ 
ವಿದೇಶ

ಭಾರತಕ್ಕೆ ಅಮೆರಿಕದ ಮತ್ತೊಂದು ಹೊಡೆತ! H-1B ವೀಸಾಗಳ ಮೇಲೆ ವಾರ್ಷಿಕ 1 ಲಕ್ಷ ಡಾಲರ್ ಶುಲ್ಕ ವಿಧಿಸುವ ಘೋಷಣೆಗೆ ಟ್ರಂಪ್ ಸಹಿ!

ಇದೀಗ ಭಾರತೀಯರಿಗೆ ಮತ್ತೊಂದು ಹೊಡೆತ ನೀಡಿದ್ದಾರೆ. ಹೆಚ್ಚು ನುರಿತರನ್ನು ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ವಾರ್ಷಿಕ $ 100,000 ವೀಸಾ ಶುಲ್ಕದ ಅಗತ್ಯವಿರುವ ಘೋಷಣೆಗೆ ಸಹಿ ಹಾಕಿದ್ದಾರೆ.

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಭಾರತದ ವಿರುದ್ಧ ಒಂದಲ್ಲಾ ಒಂದು ರೀತಿಯಲ್ಲಿ ಅಮೆರಿಕ ಬೆದರಿಕೆ ತಂತ್ರ ಅನುಸರಿಸುತ್ತಿದೆ. ಸುಂಕಾಸ್ತ್ರದ ನಡುವೆ ವ್ಯಾಪಾರ ಮಾತುಕತೆ ಆರಂಭಿಸಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ಪರ ಒಲವಿನ ಮಾತುಗಳನ್ನಾಡಿದ ಟ್ರಂಪ್, ಗುರುವಾರವಷ್ಟೇ ಇರಾನ್‌ನ ಚಬಹಾರ್ ಬಂದರು 'ನಿರ್ಬಂಧ ವಿನಾಯಿತಿ' ರದ್ದುಗೊಳಿಸುವ ಮೂಲಕ ಭಾರತದ ಯೋಜನೆಗೆ ಅಡ್ಡಪಡಿಸಿದ್ದಾರೆ.

ಇದೀಗ ಭಾರತೀಯರಿಗೆ ಮತ್ತೊಂದು ಹೊಡೆತ ನೀಡಿದ್ದಾರೆ. ಹೆಚ್ಚು ನುರಿತರನ್ನು ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ವಾರ್ಷಿಕ $ 100,000 ವೀಸಾ ಶುಲ್ಕದ ಅಗತ್ಯವಿರುವ ಘೋಷಣೆಗೆ ಸಹಿ ಹಾಕಿದ್ದಾರೆ. ಅಲ್ಲದೇ ಕಾಂಗ್ರೆಸ್ ನಿಂದ ವ್ಯಾಪಕ ಟೀಕೆಗಳ ನಡುವೆ ಶ್ರೀಮಂತ ವ್ಯಕ್ತಿಗಳಿಗೆ ಯುಎಸ್ ಪೌರತ್ವದ ಮಾರ್ಗವಾಗಿ 1 ಮಿಲಿಯನ್ ಡಾಲರ್ ಮೌಲ್ಯದ "ಗೋಲ್ಡ್ ಕಾರ್ಡ್" ವೀಸಾವನ್ನು ಹೊರತಂದಿದ್ದಾರೆ. ಇದು ಕೆಲವು ಕಾನೂನು ಸವಾಲುಗಳನ್ನು ಎದುರಿಸುತ್ತಿದೆ. ಇದು ಕಾನೂನು ಆಗಿ ಜಾರಿಗೆ ಬಂದರೆ, ವೀಸಾ ಬೆಲೆ ಗಗನಕ್ಕೇರಲಿದೆ.

ಪ್ರತಿಭಾವಂತ ಕೆಲಸಗಾರರ ವೀಸಾ ಶುಲ್ಕ 215 ಡಾಲರ್ ಗೆ ಜಿಗಿಯಲಿದೆ. ಅನೇಕ ಯುರೋಪಿಯನ್ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹೂಡಿಕೆದಾರರ ವೀಸಾಗಳ ಶುಲ್ಕವು ವರ್ಷಕ್ಕೆ $10,000 ದಿಂದ $20,000 ವರೆಗೆ ಏರುತ್ತದೆ.

H-1B ವೀಸಾಗಳು ವಿದೇಶಿಯರನ್ನು ಉನ್ನತ ಕೌಶಲ್ಯದ ಉದ್ಯೋಗಗಳಿಗೆ ಅಮೆರಿಕಗೆ ಕರೆತರಲು ಉದ್ದೇಶಿಸಿವೆ. ಅಮೆರಿಕ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ಕೊಟ್ಟು ನೇಮಿಸಿಕೊಳ್ಳುವುದು ಟೆಕ್‌ ಕಂಪನಿಗಳಿಗೆ ಕಷ್ಟ. ಹೀಗಾಗಿ, ಕಡಿಮೆ ಸಂಬಳಕ್ಕೆ ನುರಿತ, ಕೌಶಲಪೂರ್ಣ ವಿದೇಶಿ ಉದ್ಯೋಗಿಗಳನ್ನು ಕರೆತಂದು ಕೆಲಸ ನೀಡುತ್ತಿವೆ. ಅದಕ್ಕಾಗಿ ಹೆಚ್‌-1ಬಿ ವೀಸಾ ಕ್ರಮ ಅಮೆರಿಕದಲ್ಲಿ ಜಾರಿಯಲ್ಲಿದೆ.

ಈಗ, ಈ ವೀಸಾ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿರುವುದರಿಂದ ಇತರೆ ದೇಶಗಳಿಂದ ನುರಿತರನ್ನು ಕರೆತರಲು ಅರ್ಜಿ ಸಲ್ಲಿಸುವ ಕಂಪನಿಗಳು ವಾರ್ಷಿಕವಾಗಿ ಪ್ರತಿ ವೀಸಾಕ್ಕೆ 1,00,000 ಡಾಲರ್‌ ಪಾವತಿಸಬೇಕಾಗುತ್ತದೆ.

ತಂತ್ರಜ್ಞಾನ ಉದ್ಯಮವು ಈ ಕ್ರಮವನ್ನು ವಿರೋಧಿಸುವುದಿಲ್ಲ ಎಂದು ಟ್ರಂಪ್ ಶುಕ್ರವಾರ ಹೇಳಿದ್ದಾರೆ. "ಎಲ್ಲಾ ದೊಡ್ಡ ಕಂಪನಿಗಳಲ್ಲಿ ಇದು ಜಾರಿಯಾಗಲಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.

ಅಮೆಜಾನ್, ಆಪಲ್, ಗೂಗಲ್ ಮತ್ತು ಮೆಟಾ ಸೇರಿದಂತೆ ದೊಡ್ಡ ಟೆಕ್ ಕಂಪನಿಗಳ ಪ್ರತಿನಿಧಿಗಳು ಈ ಕುರಿತು ಇಲ್ಲಿಯವೆರಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮೈಕ್ರೋಸಾಫ್ಟ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಒಟ್ಟಾರೇ ಅಮೆರಿಕದ ಈ ಕ್ರಮ ಭಾರತೀಯರ ಮೇಲೆ ವ್ಯತಿರಕ್ತ ಪರಿಣಾಮ ಉಂಟು ಮಾಡುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹೊರೆ ಹೊತ್ತುಕೊಳ್ಳಬೇಡಿ, ನಿಮ್ಮ ಮಗನದ್ದು ತಪ್ಪು ಎಂದರೆ ಭಾರತದಲ್ಲಿ ಯಾರೂ ನಂಬುವುದಿಲ್ಲ'; Air India ಪೈಲಟ್ ತಂದೆಗೆ 'ಸುಪ್ರೀಂ' ಸಾಂತ್ವನ

'ವಂದೇ ಮಾತರಂ' ಭಾರತೀಯರಲ್ಲಿ ಹೊಸ ಚೈತನ್ಯ ತುಂಬುತ್ತದೆ: 150ನೇ ವಾರ್ಷಿಕೋತ್ಸವ ಉದ್ಘಾಟಿಸಿದ ಪ್ರಧಾನಿ ಮೋದಿ

ಏರದ ದರ, ನಿಲ್ಲದ ಕಬ್ಬು ಸಮರ: ಸಚಿವ ಶಿವಾನಂದ್ ಪಾಟೀಲ್ ಮನವಿಗೂ ಜಗ್ಗದ ರೈತರು, 3,500 ದರ ಘೋಷಿಸದ ಹೊರತು ಪ್ರತಿಭಟನೆ ನಿಲ್ಲಲ್ಲ ಎಂದು ಪಟ್ಟು

ಬಿಹಾರ ಪ್ರಚಾರದ ಕಣದಲ್ಲಿ ಜಂಗಲ್‌ ರಾಜ್‌, ವಲಸೆಯದ್ದೇ ಚರ್ಚೆ (ನೇರ ನೋಟ)

ಬಿಹಾರದಲ್ಲೂ ಮತಗಳ್ಳತನ: ರಕ್ಷಿಸುವ ಹೊಣೆ ಹೊತ್ತವರಿಂದಲೇ ಪ್ರಜಾಪ್ರಭುತ್ವದ ಕಗ್ಗೊಲೆ; ರಾಹುಲ್ ಗಾಂಧಿ ಆರೋಪ

SCROLL FOR NEXT