ಮಾಸ್ಕೋ: ರಷ್ಯಾದ ನೈಋತ್ಯ ಸಮಾರಾ ಪ್ರದೇಶದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದು, ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್ ಶನಿವಾರ ಹೇಳಿದ್ದಾರೆ.
ಉಕ್ರೇನ್ ನಿನ್ನೆ ರಾತ್ರಿ ರಷ್ಯಾ ಮೇಲೆ ನೂರಾರು ಡ್ರೋನ್‌ಗಳನ್ನು ಹಾರಿಸಿದ್ದು, ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಹೇಳಿದ್ದಾರೆ.
"ನಿನ್ನೆ ರಾತ್ರಿ ಶತ್ರು ಡ್ರೋನ್ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಲು ನನಗೆ ತೀವ್ರ ದುಃಖವಾಗುತ್ತಿದೆ" ಎಂದು ಸಮಾರಾ ಗವರ್ನರ್ ವ್ಯಾಚೆಸ್ಲಾವ್ ಫೆಡೋರಿಶ್ಚೆವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಈ ದಾಳಿಯು ರಷ್ಯಾದ ಮೇಲೆ ಉಕ್ರೇನ್ ನಡೆಸಿದ ಅತ್ಯಂತ ಮಾರಕ ಪ್ರತೀಕಾರದ ದಾಳಿಗಳಲ್ಲಿ ಒಂದಾಗಿದೆ. ದೇಶಾದ್ಯಂತ ರಾತ್ರಿಯಿಡೀ ನಡೆದ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿದೆ.
ಸಮಾರಾ ಪ್ರದೇಶದ ಮೇಲೆ ರಾತ್ರಿಯಿಡೀ ನಡೆಸಿದ ದಾಳಿಯಲ್ಲಿ 149 ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಅಥವಾ ತಡೆಹಿಡಿದಿದೆ ಎಂದು ರಷ್ಯಾ ಹೇಳಿದೆ.