ಅಕ್ಟೋಬರ್ 2 ರಂದು ಮಹಾತ್ಮಾ ಗಾಂಧಿ ಜನ್ಮದಿನ. ಅದಕ್ಕೆ ಎರಡು ದಿನ ಮೊದಲು ಲಂಡನ್‌ನ ಟ್ಯಾವಿಸ್ಟಾಕ್ ಸ್ಕ್ವೇರ್‌ನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ಭಾರತದ ಹೈಕಮಿಷನ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ, ಇದನ್ನು ನಾಚಿಕೆಗೇಡಿನ ಕೃತ್ಯ ಮತ್ತು ಅಹಿಂಸೆಯ ಪರಂಪರೆಯ ಮೇಲಿನ ದಾಳಿ ಎಂದು ಕರೆದಿದೆ.
ಲಂಡನ್‌ನ ಟ್ಯಾವಿಸ್ಟಾಕ್ ಸ್ಕ್ವೇರ್‌ನಲ್ಲಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯ ಧ್ವಂಸ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಇದು ಕೇವಲ ವಿಧ್ವಂಸಕ ಕೃತ್ಯವಲ್ಲ, ಅಂತಾರಾಷ್ಟ್ರೀಯ ಅಹಿಂಸಾ ದಿನಕ್ಕೆ ಮೂರು ದಿನಗಳ ಮೊದಲು ಅಹಿಂಸೆಯ ಕಲ್ಪನೆಯ ಮೇಲೆ ಮತ್ತು ಮಹಾತ್ಮರ ಪರಂಪರೆಯ ಮೇಲೆ ನಡೆದ ಹಿಂಸಾತ್ಮಕ ದಾಳಿಯಾಗಿದೆ ಎಂದು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.
ಭಾರತದ ಹೈಕಮಿಷನ್ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ನಮ್ಮ ತಂಡವು ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು ಪ್ರತಿಮೆಯನ್ನು ಅದರ ಮೂಲ ರಚನೆಯೊಂದಿಗೆ ಪುನಃಸ್ಥಾಪಿಸಲು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.