ಇರಾನ್ ಅಧ್ಯಕ್ಷ, ವಿದೇಶಾಂಗ ಸಚಿವ ಅರಾಘ್ಚಿ 
ವಿದೇಶ

ಹತ್ಯೆ ಬೆದರಿಕೆ ನಡುವೆ ಜನರೊಂದಿಗೆ ಬಹಿರಂಗವಾಗಿ ಕಾಣಿಸಿದ ಇರಾನ್ ಅಧ್ಯಕ್ಷ, ವಿದೇಶಾಂಗ ಸಚಿವ ಅರಾಘ್ಚಿ! Video

ವಿಶೇಷ ಭದ್ರತೆ ಇಲ್ಲದೆಯೂ ಜನಸಂದಣಿಯಲ್ಲಿ ಕಾಣಿಸಿದ ಇವರಿಬ್ಬರೂ ಜನರೊಂದಿಗೆ ಮಾತನಾಡಿದ್ದಾರೆ. ಹತ್ಯೆಯ ಬೆದರಿಕೆಯ ನಡುವೆ ದಾರಿಯಲ್ಲಿ ನಡೆದು ಜನರಿಗೆ ಸೆಲ್ಫಿ ನೀಡಿದ್ದಾರೆ.

ಟೆಹರಾನ್: ಇರಾನ್‌ನ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಸೇರಿದಂತೆ ಉನ್ನತ ಅಧಿಕಾರಿಗಳು ಮಂಗಳವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇಸ್ಲಾಮಿಕ್ ಗಣರಾಜ್ಯೋತ್ಸವ" ಅಂಗವಾಗಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡರು.

ವಿಶೇಷ ಭದ್ರತೆ ಇಲ್ಲದೆಯೂ ಜನಸಂದಣಿಯಲ್ಲಿ ಕಾಣಿಸಿದ ಇವರಿಬ್ಬರೂ ಜನರೊಂದಿಗೆ ಮಾತನಾಡಿದ್ದಾರೆ. ಹತ್ಯೆಯ ಬೆದರಿಕೆಯ ನಡುವೆ ದಾರಿಯಲ್ಲಿ ನಡೆದು ಜನರಿಗೆ ಸೆಲ್ಫಿ ನೀಡಿದ್ದಾರೆ.

ಪೆಜೆಶ್ಕಿಯನ್ ಮತ್ತು ಅರಾಘ್ಚಿ ಜನರೊಂದಿಗೆ ಮಾತನಾಡುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ವೇಳೆ ಮಾತನಾಡಿದ ಮಸೌದ್ ಪೆಜೆಶ್ಕಿಯಾನ್ ಯುದ್ಧವನ್ನು ಕೊನೆಗೊಳಿಸುವ ಇಚ್ಚೆಯನ್ನು ಇರಾನ್ ಹೊಂದಿದೆ ಎಂದು ಹೇಳಿದ್ದಾರೆ.

ಅರಾಘ್ಚಿ ಮಾತನಾಡಿ, ಈ ಪ್ರತಿಭಟನೆಯಿಂದ ಯುದ್ಧದ ಕಡೆಗೆ ಬಲವನ್ನು ಸೆಳೆಯಲು ಮತ್ತು ಈ ಏಕತೆ, ಒಗ್ಗಟ್ಟುನ್ನು ಎಂಜಾಯ್ ಮಾಡಲು, ಜನರ ನಡುವೆ ಇರಲು ಬಂದಿದ್ದೇನೆ ಎಂದು ತಿಳಿಸಿದರು.

ಇವರಿಬ್ಬರೂ ಕೊನೆಯ ಬಾರಿಗೆ ಇರಾನ್‌ನ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಅವರೊಂದಿಗೆ "ಇರಾನಿಯನ್ ಕುದ್ಸ್ ಡೇ" ಯಲ್ಲಿ ಟೆಹ್ರಾನ್‌ನ ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು. ಲಾರಿಜಾನಿ ಯುಎಸ್-ಇಸ್ರೇಲಿ ದಾಳಿಯಲ್ಲಿ ಹತ್ಯೆಯಾಗಿದ್ದಾರೆ.

ಯುಎಸ್ ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್‌ಕಾಫ್ ಅವರೊಂದಿಗೆ ನೇರ ಮಾತುಕತೆ ನಡೆಸುತ್ತಿರುವುದನ್ನು ಇರಾನ್‌ನ ವಿದೇಶಾಂಗ ಸಚಿವರು ಒಪ್ಪಿಕೊಂಡಿದ್ದಾರೆ. ಮಂಗಳವಾರ ತಡರಾತ್ರಿ ಅಲ್ ಜಜೀರಾಗೆ ನೀಡಿದ ಸಂದರ್ಶನದಲ್ಲಿ ಅರಾಘಿ ಹೇಳಿದ್ದಾರೆ.

ಅಮೆರಿಕದೊಂದಿಗಿನ ಮಾತುಕತೆಗಳು ಯಾವುದೇ ಫಲಿತಾಂಶಗಳನ್ನು ನೀಡುತ್ತವೆ ಎಂಬ ನಂಬಿಕೆ ನಮಗಿಲ್ಲ. ವಿಶ್ವಾಸದ ಮಟ್ಟ ಶೂನ್ಯವಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದುಬಾರಿ ದುನಿಯಾ: ಪ್ರೀಮಿಯಂ ಪೆಟ್ರೋಲ್ ದರ, ಜೆಟ್ ಇಂಧನದ ಬೆಲೆ ಏರಿಕೆ; ದೇಶೀಯ ಏರ್ ಲೈನ್ಸ್ ಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ

'ಇರಾನ್ ಮೇಲೆ ಯುದ್ಧ ಇನ್ನು 2-3 ವಾರಗಳಲ್ಲಿ ಕೊನೆಯಾಗಬಹುದು': ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಎಲ್ಲಿದ್ದಾರೆ? ಮಹತ್ವದ ಮಾಹಿತಿ ಬಹಿರಂಗಪಡಿಸಿದ ರಷ್ಯಾದ ರಾಯಭಾರಿ!

ಗಾಯದ ಮೇಲೆ ಬರೆ: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಹೆಚ್ಚಳ: ಹೊಸ ದರ ಇಂದಿನಿಂದಲೇ ಜಾರಿ

ರಷ್ಯಾದ ಸೈನಿಕ ಸಾರಿಗೆ ವಿಮಾನ ಕ್ರೈಮಿಯಾದಲ್ಲಿ ಪತನ: 29 ಮಂದಿ ಸಾವು

SCROLL FOR NEXT