ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ  
ವಿದೇಶ

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಎಲ್ಲಿದ್ದಾರೆ? ಮಹತ್ವದ ಮಾಹಿತಿ ಬಹಿರಂಗಪಡಿಸಿದ ರಷ್ಯಾದ ರಾಯಭಾರಿ!

ಮೊಜ್ತಾಬಾ ಖಮೇನಿ ಇರಾನ್ ನಲ್ಲಿಯೇ ಇದ್ದಾರೆ. ಆದರೆ ಅರ್ಥವಾಗುವ ಕಾರಣಗಳಿಗಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಇರಾನ್‌ನ ರಷ್ಯಾದ ರಾಯಭಾರಿ ಅಲೆಕ್ಸಿ ಡೆಡೋವ್ RTVI ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ಟೆಹರಾನ್: ಇರಾನ್‌ನ ನೂತನ ಸರ್ವೋಚ್ಚ ನಾಯಕರಾಗಿ ಮೊಜ್ತಾಬಾ ಖಮೇನಿ ನೇಮಕವಾಗಿ ಸುಮಾರು ಒಂದು ತಿಂಗಳು ಕಳೆದಿದೆ. ಆದರೆ ಇಲ್ಲಿಯವರೆಗೂ ಸಾರ್ವಜನಿಕವಾಗಿ ಅವರು ಕಾಣಿಸಿಕೊಂಡಿಲ್ಲ. ಅಂದಿನಿಂದ ಅನೇಕ ಸಾರ್ವಜನಿಕ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದು, ಅದನ್ನು ರಾಷ್ಟ್ರೀಯ tv ಚಾನೆಲ್ ನಲ್ಲಿ ಪ್ರಸಾರ ಮಾಡಲಾಗಿದೆ.

ಆದರೆ ಎಲ್ಲಿಯೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇರುವುದು ಅವರ ಆರೋಗ್ಯ ಮತ್ತು ಎಲ್ಲಿದ್ದಾರೆ ಎಂಬ ವದಂತಿಗಳನ್ನು ಹುಟ್ಟುಹಾಕಿದೆ. ಈ ಊಹಾಪೋಹಗಳಿಗೆ ತೆರೆ ಎಳೆದಿರುವ ರಷ್ಯಾದ ರಾಯಭಾರಿಯೊಬ್ಬರು, ಮೊಜ್ತಾಬಾ ಖಮೇನಿ ಇರಾನ್‌ನಲ್ಲಿದ್ದಾರೆ ಎಂದು ಹೇಳಿದ್ದಾರೆ.

ಮೊಜ್ತಾಬಾ ಖಮೇನಿ ಇರಾನ್ ನಲ್ಲಿಯೇ ಇದ್ದಾರೆ. ಆದರೆ ಅರ್ಥವಾಗುವ ಕಾರಣಗಳಿಗಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಇರಾನ್‌ನ ರಷ್ಯಾದ ರಾಯಭಾರಿ ಅಲೆಕ್ಸಿ ಡೆಡೋವ್ RTVI ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ಯುದ್ಧದ ಆರಂಭದಲ್ಲಿ ಫೆಬ್ರವರಿ 28 ರಂದು ಯುಎಸ್-ಇಸ್ರೇಲಿ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ಖಮೇನಿ ಅವರನ್ನು ಇರಾನ್ ನ ಸುಪ್ರೀಂ ಲೀಡರ್ ಆಗಿ ನೇಮಕ ಮಾಡಲಾಗಿತ್ತು. ಆದರೆ ಅವರು ಕೂಡಾ ದಾಳಿ ವೇಳೆ ಗಾಯಗೊಂಡಿದ್ದಾರೆ ಅಥವಾ ಸತ್ತಿದ್ದಾರೆ ಎಂದು ಅಮೆರಿಕ ಹೇಳುತ್ತಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಮೊಜ್ತಾಬಾ ಖಮೇನಿ ಅವರನ್ನು ಚಿಕಿತ್ಸೆಗಾಗಿ ಮಾಸ್ಕೋಗೆ ಕರೆದೊಯ್ಯಲಾಗಿದೆ ಎಂದು ಮಾಧ್ಯಮವೊಂದರ ವರದಿ ಹೇಳಿದೆ. ಕಳೆದ ವರ್ಷ ರಷ್ಯಾ ಮತ್ತು ಇರಾನ್ ಕಾರ್ಯತಂತ್ರದ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿವೆ.

ಇರಾನ್‌ನಲ್ಲಿ ಮೊಜ್ತಾಬಾ ಅವರ ಉಪಸ್ಥಿತಿಯ ಕುರಿತು ರಷ್ಯಾದ ಹೇಳಿಕೆಯು ನಾಯಕತ್ವದ ಅನಿಶ್ಚಿತತೆಯ ಹೊರತಾಗಿಯೂ ಇರಾನ್ ಜೊತೆಗೆ ಅದರ ನಿರಂತರ ಸಂಬಂಧವನ್ನು ಒತ್ತಿ ಹೇಳುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದುಬಾರಿ ದುನಿಯಾ: ಜೆಟ್ ಇಂಧನದ ಬೆಲೆ ದುಪ್ಪಟ್ಟಿಗಿಂತ ಅಧಿಕ ಏರಿಕೆ; ದೇಶೀಯ ಏರ್ ಲೈನ್ಸ್ ಗಳ ರಕ್ಷಣೆಗೆ ಕೇಂದ್ರ ಕ್ರಮ

'ಇರಾನ್ ಮೇಲೆ ಯುದ್ಧ ಇನ್ನು 2-3 ವಾರಗಳಲ್ಲಿ ಕೊನೆಯಾಗಬಹುದು': ಡೊನಾಲ್ಡ್ ಟ್ರಂಪ್

ಗಾಯದ ಮೇಲೆ ಬರೆ: ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಹೆಚ್ಚಳ: ಹೊಸ ದರ ಇಂದಿನಿಂದಲೇ ಜಾರಿ

ರಷ್ಯಾದ ಸೈನಿಕ ಸಾರಿಗೆ ವಿಮಾನ ಕ್ರೈಮಿಯಾದಲ್ಲಿ ಪತನ: 29 ಮಂದಿ ಸಾವು

ಇರಾನ್ ನಾಯಕರ 'ಹತ್ಯೆಗೆ ಪ್ರತೀಕಾರ': ಆಪಲ್, ಗೂಗಲ್ ಸೇರಿ 18 ಅಮೆರಿಕ ಕಂಪನಿಗಳ ಮೇಲೆ ದಾಳಿ; IRGC ಪ್ರತಿಜ್ಞೆ

SCROLL FOR NEXT