ಬಾಬ್ ಅಲ್-ಮಂಡೇಬ್ ಜಲಸಂಧಿ 
ವಿದೇಶ

ಆತಂಕ ಸೃಷ್ಟಿಸಿದ ಇರಾನ್ ನಡೆ; ಹಾರ್ಮುಜ್ ನಂತರ, ಜಾಗತಿಕ ಆರ್ಥಿಕತೆಯ ಜೀವನಾಡಿ 'ಬಾಬ್ ಅಲ್-ಮಂಡೇಬ್' ಜಲಸಂಧಿ ಬಂದ್ ಮಾಡುವ ಸುಳಿವು!

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರು ಶುಕ್ರವಾರ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಮಾಡಲಾದ ಪೋಸ್ಟ್ ನಲ್ಲಿ ಜಾಗತಿಕ ಆರ್ಥಿಕತೆಯ ಜೀವನಾಡಿ 'ಬಾಬ್ ಅಲ್-ಮಂಡೇಬ್' ಜಲಸಂಧಿಯನ್ನು ಬಂದ್ ಮಾಡುವ ಸುಳಿವು ನೀಡಿದ್ದಾರೆ.

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್‌ ವಿರುದ್ಧ ಹೋರಾಡುತ್ತಿರುವ ಇರಾನ್, ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸುವ ಮೂಲಕ ಪಶ್ಚಿಮ ಏಷ್ಯಾಗೆ ಭಾರಿ ಪೆಟ್ಟು ನೀಡಿದೆ. ಇದೀಗ ತನ್ನ ವಿರೋಧಿಗಳ ಮೇಲೆ ಒತ್ತಡ ಹೆಚ್ಚಿಸಲು ಮತ್ತೊಂದು ಜಲಸಂದಿ ಬಂದ್ ಮಾಡುವ ಬಗ್ಗೆ ಸುಳಿವು ನೀಡಿದೆ.

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಅವರು ಶುಕ್ರವಾರ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಮಾಡಲಾದ ಪೋಸ್ಟ್ ನಲ್ಲಿ ಜಾಗತಿಕ ಆರ್ಥಿಕತೆಯ ಜೀವನಾಡಿ 'ಬಾಬ್ ಅಲ್-ಮಂಡೇಬ್' ಜಲಸಂಧಿಯನ್ನು ಬಂದ್ ಮಾಡುವ ಸುಳಿವು ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಿರುವುದರಿಂದ ಅಂತರರಾಷ್ಟ್ರೀಯ ಸಾಗಣೆಯ ಮೇಲೆ ತೀವ್ರ ಆರ್ಥಿಕ ಮತ್ತು ಲಾಜಿಸ್ಟಿಕ್ ಒತ್ತಡ ಬೀರುತ್ತಿರುವುದರಿಂದ ಅವರಈ ಹೇಳಿಕೆ ಮತ್ತಷ್ಟು ಆತಂಕ ಸೃಷ್ಟಿಸಿದೆ.

ಜಾಗತಿಕ ಪೂರೈಕೆ ಸರಪಳಿಯನ್ನು ದುರ್ಬಲಗೊಳಿಸುವ ಬಗ್ಗೆ ಪಣತೊಟ್ಟ ಗಾಲಿಬಾಫ್, ಈ ಮಾರ್ಗದ ಮೇಲೆ ವಿಶ್ವದ ಅವಲಂಬನೆಯ ವ್ಯಾಪ್ತಿಯನ್ನು ಪ್ರಶ್ನಿಸಿದರು. "ಜಾಗತಿಕ ತೈಲ, ಎಲ್‌ಎನ್‌ಜಿ, ಗೋಧಿ, ಅಕ್ಕಿ ಮತ್ತು ರಸಗೊಬ್ಬರ ಸಾಗಣೆಗಳಲ್ಲಿ ಎಷ್ಟು ಪಾಲು ಬಾಬ್ ಅಲ್-ಮಂಡೇಬ್ ಜಲಸಂಧಿ ಮೂಲಕ ಸಾಗಿಸಲಾಗುತ್ತಿದೆ ಗೊತ್ತಾ?" ಎಂದು ಕೇಳಿದರು.

"ಈ ಜಲಸಂಧಿಯ ಮೂಲಕ ಯಾವ ದೇಶಗಳು ಮತ್ತು ಕಂಪನಿಗಳು ಅತಿ ಹೆಚ್ಚು ಸಾಗಣೆ ಮಾಡುತ್ತವೆ" ಎಂದು ಪ್ರಶ್ನಿಸಿದ ಸ್ಪೀಕರ್, ಇಸ್ಲಾಮಿಕ್ ಗಣರಾಜ್ಯವು ಮತ್ತಷ್ಟು ಹತೋಟಿ ಸಾಧಿಸಲು ಅತ್ಯಂತ ಪರಿಣಾಮಕಾರಿಯಾದ ಮಾರ್ಗಗಳನ್ನು ಹುಡುಕುತ್ತಿದೆ ಎಂದು ಹೇಳಿದ್ದಾರೆ.

ಬಾಬ್ ಅಲ್-ಮಂಡೇಬ್ ಜಲಸಂಧಿಯು ಕೆಂಪು ಸಮುದ್ರವನ್ನು ಅಡೆನ್ ಕೊಲ್ಲಿಗೆ ಸಂಪರ್ಕಿಸುತ್ತದೆ, ಇದು ಯೆಮೆನ್ ಜಲಮಾರ್ಗದ ಒಂದು ಬದಿಯಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್, ರಕ್ಷಣೆ-Video

ಏಷ್ಯನ್ ಗೇಮ್ಸ್ 2026 ಫೈನಲ್: ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಭರ್ಜರಿ ಅರ್ಧ ಶತಕ, ಪಾಕ್ ಗೆಲ್ಲಲು 212 ರನ್ ಗಳ ಗುರಿ ನೀಡಿದ ಭಾರತ!

'ಅವನು ಆಡಿದ್ರೂ, ಆಡದಿದ್ದರೂ ಏನೂ ವ್ಯತ್ಯಾಸವಾಗಲ್ಲ’: ಭಾರತದ ಯುವ ಆಟಗಾರನ ಕುರಿತು ಕಡ್ಡಿ ಮುರಿದಂತೆ ಹೇಳಿದ Ajinkya Rahane!