ಪ್ರಾತಿನಿಧಿಕ ಚಿತ್ರ 
ವಿದೇಶ

ಇಸ್ರೇಲ್ ರಾಯಭಾರ ಕಚೇರಿ ಮೇಲೆ ಗುಂಡಿನ ದಾಳಿ; ಓರ್ವ ದಾಳಿಕೋರ ಸಾವು, ಮತ್ತಿಬ್ಬರನ್ನು ಸೆರೆ ಹಿಡಿದ ಪೊಲೀಸರು!

ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಇಸ್ತಾನ್‌ಬುಲ್ ಗವರ್ನರ್ ದಾವುತ್ ಗುಲ್ ವರದಿಗಾರರಿಗೆ ತಿಳಿಸಿದರು.

ಇಸ್ತಾನ್‌ಬುಲ್: ಮಂಗಳವಾರ ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಕಟ್ಟಡದ ಹೊರಗೆ ಮೂವರು ಆಕ್ರಮಣಕಾರರು ಪೊಲೀಸರ ಮೇಲೆ ಗುಂಡು ಹಾರಿಸಿದ್ದು, ಗುಂಡಿನ ಚಕಮಕಿಯಲ್ಲಿ ಒಬ್ಬ ದಾಳಿಕೋರ ಸಾವಿಗೀಡಾಗಿದ್ದಾನೆ ಎಂದು ಟರ್ಕಿಶ್ ಅಧಿಕಾರಿಗಳು ತಿಳಿಸಿದ್ದಾರೆ.

ಇತರ ಇಬ್ಬರು ದಾಳಿಕೋರರನ್ನು ಸೆರೆಹಿಡಿಯಲಾಗಿದ್ದು, ಅವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಘರ್ಷಣೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಇಸ್ತಾನ್‌ಬುಲ್ ಗವರ್ನರ್ ದಾವುತ್ ಗುಲ್ ವರದಿಗಾರರಿಗೆ ತಿಳಿಸಿದರು.

ಲಾಂಗ್ ಬ್ಯಾರೆಲ್ ಆಯುಧಗಳನ್ನು ಹೊಂದಿದ್ದ ದಾಳಿಕೋರರು ನೆರೆಯ ನಗರವಾದ ಇಜ್ಮಿತ್‌ನಿಂದ ಇಸ್ತಾನ್‌ಬುಲ್‌ಗೆ ಬಾಡಿಗೆ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ದಾಳಿಕೋರರಲ್ಲಿ ಒಬ್ಬಾತ ಸಂಘಟನೆಯನ್ನು ಹೆಸರಿಸದೆ 'ಧರ್ಮವನ್ನು ಶೋಷಿಸುವ' ಗುಂಪಿಗೆ ಸೇರಿದವನು ಎಂದು ಆಂತರಿಕ ಸಚಿವ ಮುಸ್ತಫಾ ಸಿಫ್ಟಿ ಎಕ್ಸ್‌ನಲ್ಲಿ ಬರೆದಿದ್ದಾರೆ.

ಟರ್ಕಿಯಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪು ಈ ಹಿಂದೆ ಮಾರಕ ದಾಳಿಗಳನ್ನು ನಡೆಸಿದೆ.

ದಾಳಿಕೋರರಲ್ಲಿ ಇಬ್ಬರು ಸಹೋದರರಾಗಿದ್ದು, ಒಬ್ಬ ಮಾದಕವಸ್ತುಗಳಿಗೆ ಸಂಬಂಧಿಸಿದ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾನೆ.

ಇಸ್ರೇಲಿ ರಾಯಭಾರ ಕಚೇರಿಯು ಬಹುಮಹಡಿ ಕಟ್ಟಡದಲ್ಲಿದೆ. ಟರ್ಕಿಯಲ್ಲಿರುವ ಇಸ್ರೇಲ್ ಕಾನ್ಸುಲೇಟ್‌ನಲ್ಲಿ ಸದ್ಯ ಯಾವುದೇ ಇಸ್ರೇಲಿ ರಾಜತಾಂತ್ರಿಕರು ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ನಡೆದ ನಂತರ, ಅಧಿಕಾರಿಗಳು ಕಟ್ಟಡದ ಸುತ್ತಲಿನ ಪ್ರದೇಶವನ್ನು ನಿರ್ಬಂಧಿಸಿದ್ದು, ಭದ್ರತೆ ಹೆಚ್ಚಿಸಿದ್ದಾರೆ.

ಗಾಜಾ ಯುದ್ಧದ ನಂತರ ಟರ್ಕಿಯ ಜೊತೆಗಿನ ಸಂಬಂಧಗಳು ಹದಗೆಡುತ್ತಿರುವುದರಿಂದ ಮತ್ತು ಭದ್ರತಾ ಕಳವಳಗಳ ಹಿನ್ನೆಲೆಯಲ್ಲಿ ಇಸ್ರೇಲ್ ತನ್ನ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿದೆ.

ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಟರ್ಕಿಯ ನ್ಯಾಯ ಸಚಿವ ಅಕಿನ್ ಗುರ್ಲೆಕ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

NEET: ಭೌತಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ, ಪುಣೆ ಉಪನ್ಯಾಸಕಿ ಬಂಧನ

NEET UG ಪ್ರಶ್ನೆಪತ್ರಿಕೆ ಸೋರಿಕೆ: ಈ ಬಾರಿ ಶೇ.100ರಷ್ಟು ದೋಷರಹಿತ ಮರು ಪರೀಕ್ಷೆ; ಕಠಿಣ ಕ್ರಮ ಎಂದ Dharmendra Pradhan

Rudraprayag ಭೀಕರ ಭೂಕುಸಿತ: ಸ್ಥಳದಲ್ಲೇ ಓರ್ವನ ಸಾವು, ಇಬ್ಬರು ಗಂಭೀರ, Video

IPL 2026: ಜಾಗತಿಕ ಕ್ರಿಕೆಟ್ ನಲ್ಲಿ ಇತಿಹಾಸ ಬರೆದ Virat Kohli, ಈ ಸಾಧನೆ ಮಾಡಿದ ಮೊದಲ ಆಟಗಾರ, ರೇಸ್ ನಲ್ಲಿ Babar Azam

IPL 2026: Top 2 ಸ್ಥಾನಕ್ಕಾಗಿ ಮದಗಜಗಳ ಕಾದಾಟ, 256 ರನ್ ಗಳ ಬೃಹತ್ ಮೊತ್ತ ಪೇರಿಸಿದ SRH, RCBಗೆ ಬೇಕು ಕನಿಷ್ಟ 166 ರನ್!

SCROLL FOR NEXT