ಸಾಂದರ್ಭಿಕ ಚಿತ್ರ 
ವಿದೇಶ

ಕದನ ವಿರಾಮದ ಮಧ್ಯೆಯೇ ಕುವೈತ್‌ನ ತೈಲ, ವಿದ್ಯುತ್ ಕೇಂದ್ರಗಳ ಮೇಲೆ ಇರಾನ್ ಡ್ರೋನ್‌ ದಾಳಿ!

ಕದನ ವಿರಾಮದ ಮಧ್ಯೆಯೇ ಇರಾನ್, ಕುವೈತ್‌ನ ತೈಲ, ವಿದ್ಯುತ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ದಾಳಿ ನಡೆಸಿದೆ ಎಂದು ಕುವೈತ್ ಮತ್ತು ಯುಎಇ ಹೇಳಿವೆ.

ಕುವೈತ್‌: ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ಅಮೆರಿಕ-ಇಸ್ರೇಲ್-ಇರಾನ್ ಯುದ್ದಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕದನ ವಿರಾಮ ಘೋಷಿಸಿದ್ದಾರೆ. ಇದಕ್ಕೆ ಇರಾನ್, ಇಸ್ರೇಲ್ ಸಹ ಒಪ್ಪಿಗೆ ಸೂಚಿವೆ.

ಕದನ ವಿರಾಮದ ಮಧ್ಯೆಯೇ ಇರಾನ್, ಕುವೈತ್‌ನ ತೈಲ, ವಿದ್ಯುತ್ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ದಾಳಿ ನಡೆಸಿದೆ ಎಂದು ಕುವೈತ್ ಮತ್ತು ಯುಎಇ ಹೇಳಿವೆ.

ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ಸೌದ್ ಅಬ್ದುಲಜೀಜ್ ಅಲ್-ಒಟೈಬಿ ಅವರ ಪ್ರಕಾರ, ಕುವೈತ್ ವಾಯು ರಕ್ಷಣಾ ಪಡೆಗಳು, 28 ಇರಾನಿನ ಡ್ರೋನ್‌ಗಳನ್ನು ತಡೆಹಿಡಿದಿದೆ. ಇದು "ಪ್ರತಿಕೂಲ ಇರಾನಿನ ಕ್ರಿಮಿನಲ್ ದಾಳಿಗಳ ತೀವ್ರ ಅಲೆ" ಎಂದು ಅಲ್-ಒಟೈಬಿ ಹೇಳಿದ್ದಾರೆ.

"ಹೆಚ್ಚಿನ ಸಂಖ್ಯೆಯ ಪ್ರತಿಕೂಲ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ" ಎಂದು ಅವರು ತಿಳಿಸಿದ್ದಾರೆ.

ಅದೇ ಸಮಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಕ್ಷಣಾ ಸಚಿವಾಲಯ ಸಹ, ತನ್ನದೇ ಆದ ವಾಯು ರಕ್ಷಣಾ ಪಡೆಗಳು "ಇರಾನ್‌ನಿಂದ ಬಂದ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ತಡೆಯುವಲ್ಲಿ ನಿರತವಾಗಿವೆ" ಎಂದು ಹೇಳಿದೆ.

ಕದನ ವಿರಾಮ ಹೊರತಾಗಿಯೂ ಇರಾನ್ ಏಕೆ ಈ ದಾಳಿಗಳನ್ನು ನಡೆಸುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

EC-TMC ಸಭೆಯಲ್ಲಿ ಕೋಲಾಹಲ: ಟಿಎಂಸಿ ನಾಯಕರಿಗೆ ‘ಇಲ್ಲಿಂದ ತೊಲಗಿ’ ಎಂದ CEC, ಡೆರೆಕ್ ಒಬ್ರಿಯಾನ್ ಆಕ್ರೋಶ..!

Video ವೈರಲ್: ಬಾಬಾ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ: ನಡು ರಸ್ತೆಯಲ್ಲೇ ಅಳುತ್ತಾ ಸಹಾಯಕ್ಕಾಗಿ ಅಂಗಲಾಚಿದ 17 ವರ್ಷದ ಬಾಲಕಿ!

ಹಿಂದೂ ದೇವತೆ, ಸಾವರ್ಕರ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಸೂಚನೆ

ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಶಾಕ್: ಅಪ್ರಾಪ್ತ ವಯಸ್ಸಿನ ಗರ್ಭಧಾರಣೆ ಪ್ರಕರಣಗಳ POCSO ಅಡಿ ವರದಿ ಕಡ್ಡಾಯ: Dinesh Gundu rao

ಭಾರತ ಎಂದಿಗೂ ನ್ಯಾಯದ ಪರ ನಿಂತಿದೆ; ಭಾರತೀಯರ ಕಾಳಜಿ ವಹಿಸುವುದು ನನ್ನ ಜವಾಬ್ದಾರಿ- ಇರಾನ್ ಪ್ರತಿನಿಧಿ ಇಲಾಹಿ

SCROLL FOR NEXT