ಬಾಲೇಂದ್ರ ಶಾ  
ವಿದೇಶ

ಪತ್ನಿಗಾಗಿ ಅಧಿಕಾರ ದುರುಪಯೋಗ: 15 ದಿನಕ್ಕೆ ಕಾರ್ಮಿಕ ಸಚಿವರನ್ನು ವಜಾಗೊಳಿಸಿದ ನೇಪಾಳ ಪ್ರಧಾನಿ!

ಆಡಳಿತಾರೂಢ ರಾಷ್ಟ್ರೀಯ ಸ್ವತಂತ್ರ ಪಕ್ಷ(RSP)ದ ಶಿಫಾರಸಿನ ಮೇರೆಗೆ ಕಾರ್ಮಿಕ, ಉದ್ಯೋಗ ಮತ್ತು ಸಾಮಾಜಿಕ ಭದ್ರತಾ ಸಚಿವ ದೀಪ್ ಕುಮಾರ್ ಶಾ ಅವರನ್ನು ಇಂದು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿಗಳ ಸಚಿವಾಲಯ ತಿಳಿಸಿದೆ.

ಕಠ್ಮಂಡು: ನೇಪಾಳ ಪ್ರಧಾನಿ ಬಾಲೇಂದ್ರ ಶಾ ಅವರು ಅಧಿಕಾರ ವಹಿಸಿಕೊಂಡ 15 ದಿನಗಳಲ್ಲೇ, ತಮ್ಮ ಪತ್ನಿಗೆ ಲಾಭ ಮಾಡಿಕೊಡಲು ಹುದ್ದೆಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ತಮ್ಮ ಕಾರ್ಮಿಕ ಸಚಿವರನ್ನು ಗುರುವಾರ ವಜಾಗೊಳಿಸಿದ್ದಾರೆ.

ಆಡಳಿತಾರೂಢ ರಾಷ್ಟ್ರೀಯ ಸ್ವತಂತ್ರ ಪಕ್ಷ(RSP)ದ ಶಿಫಾರಸಿನ ಮೇರೆಗೆ ಕಾರ್ಮಿಕ, ಉದ್ಯೋಗ ಮತ್ತು ಸಾಮಾಜಿಕ ಭದ್ರತಾ ಸಚಿವ ದೀಪ್ ಕುಮಾರ್ ಶಾ ಅವರನ್ನು ಇಂದು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿಗಳ ಸಚಿವಾಲಯ ತಿಳಿಸಿದೆ.

ತಮ್ಮ ಪತ್ನಿಯ ಅಧಿಕಾರಾವಧಿ ಮುಗಿದ ನಂತರ ಅವರನ್ನು ಆರೋಗ್ಯ ವಿಮಾ ಮಂಡಳಿಯ ಸದಸ್ಯರನ್ನಾಗಿ ಮರು ನೇಮಕ ಮಾಡಲು ತಮ್ಮ ಸಚಿವ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ದೀಪ್ ಕುಮಾರ್ ಶಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರ್‌ಎಸ್‌ಪಿ ಅಧ್ಯಕ್ಷೆ ರಬಿ ಲಾಮಿಚಾನೆ ಅವರು ಪ್ರಧಾನಿಗೆ ಶಿಫಾರಸು ಮಾಡಿದ್ದರು.

ಪ್ರಧಾನಿ ಬಾಲೇಂದ್ರ ಶಾ ಅವರು ಈಗ ಕಾರ್ಮಿಕ ಸಚಿವಾಲಯದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2nd PUC result ಪ್ರಕಟ: ರಾಜ್ಯಕ್ಕೆ ಉಡುಪಿ ಪ್ರಥಮ; ಕೊನೆಯ ಸ್ಥಾನ ಯಾವ ಜಿಲ್ಲೆಗೆ? ಟಾಪರ್ ಯಾರು?

ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆಯಲ್ಲಿ ಸಂಜೆ 5 ಗಂಟೆಯವರೆಗೆ ಶೇ. 60ಕ್ಕೂ ಹೆಚ್ಚು ಮತದಾನ

ಇಸ್ರೇಲ್ ಮಹಾ ಬೇಟೆ: ಹಿಜ್ಬುಲ್ಲಾ ಉಗ್ರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಯೀಮ್ ಖಾಸಿಮ್ ಹತ್ಯೆ!

ಕೊಪ್ಪಳ: ನವ ವಿವಾಹಿತೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​: ಮುಸ್ಲಿಂ ಯುವಕನ ಜತೆ ಯುವತಿ ಪತ್ತೆ; ಪೊಲೀಸ್​​ ಠಾಣೆಯಲ್ಲಿ ಹೈಡ್ರಾಮಾ

Iran War: ಅಮೆರಿಕ-ಇಸ್ರೇಲ್ ವಿರುದ್ಧ ಇರಾನ್‌ ಸೇನೆಗೆ ಬೆಂಬಲ; ಸ್ಪಷ್ಟನೆ ಕೊಟ್ಟ ಚೀನಾ, ಹೇಳಿದ್ದೇನು?

SCROLL FOR NEXT