ಡೊನಾಲ್ಡ್ ಟ್ರಂಪ್ 
ವಿದೇಶ

West-Asia war: ಒಪ್ಪಂದ ಪೂರ್ಣಗೊಳ್ಳದ ಹೊರತು ಸೇನೆ ಹಿಂಪಡೆಯಲ್ಲ; ಅಮೆರಿಕಾ ದ್ವಂದ್ವ ನಿಲುವು; ಮಧ್ಯಪ್ರಾಚ್ಯದಲ್ಲಿ ಮುಂದುವರೆದ ಉದ್ವಿಗ್ನತೆ..!

ಇರಾನ್ ಒಪ್ಪಂದವನ್ನು ಉಲ್ಲಂಘಿಸಿದರೆ “ಇದಕ್ಕೂ ಮುಂಚೆ ಯಾರೂ ನೋಡದ ಮಟ್ಟದ ಸೈನಿಕ ಕಾರ್ಯಾಚರಣೆ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇರಾನ್ ಜೊತೆ ಕದನ ವಿರಾಮ ಘೋಷಿಸಿದ ಬಳಿಕವೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೊಮ್ಮೆ ಕಠಿಣ ನಿಲುವು ತಾಳಿದ್ದು, ಒಪ್ಪಂದ ಸಂಪೂರ್ಣ ಜಾರಿಗೆ ತರುವವರೆಗೂ ಇರಾನ್ ಸುತ್ತಮುತ್ತ ಇರುವ ಅಮೆರಿಕಾ ಸೇನೆಯನ್ನು ಹಿಂಪಡೆಯುವುದಿಲ್ಲ ಎಂದು ದ್ವಂದ್ವ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಟ್ರಂಪ್ ಅವರು ಹೇಳಿಕೆ ನೀಡಿದ್ದು, ಅಮೆರಿಕಾ ನೌಕಾಪಡೆ ಹಡಗುಗಳು, ಯುದ್ಧ ವಿಮಾನಗಳು ಮತ್ತು ಸೈನಿಕರು ಹೆಚ್ಚುವರಿ ಶಸ್ತ್ರಾಸ್ತ್ರಗಳೊಂದಿಗೆ ತಾವಿರುವ ಸ್ಥಳದಲ್ಲೇ ಇರಲಿದ್ದಾರೆ. ಇರಾನ್ ಒಪ್ಪಂದದ ನಿಯಮಗಳನ್ನು ಸಂಪೂರ್ಣ ಪಾಲಿಸುವವರೆಗೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದಷ್ಟೇ ಅಲ್ಲದೆ, ಇರಾನ್ ಒಪ್ಪಂದವನ್ನು ಉಲ್ಲಂಘಿಸಿದರೆ “ಇದಕ್ಕೂ ಮುಂಚೆ ಯಾರೂ ನೋಡದ ಮಟ್ಟದ ಸೈನಿಕ ಕಾರ್ಯಾಚರಣೆ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇದರ ನಡುವೆ, ಲೆಬನಾನ್ ಪ್ರದೇಶದಲ್ಲಿ ಇಸ್ರೇಲ್ ದಾಳಿಗಳು ಹಾಗೂ ಹಿಜ್ಬುಲ್ಲಾ ಪ್ರತಿದಾಳಿ ಹಿನ್ನೆಲೆಯಲ್ಲಿ ಕದನ ವಿರಾಮಕ್ಕೆ ಧಕ್ಕೆಯಾಗಿದ್ದು, ಇರಾನ್ ಈ ದಾಳಿಗಳನ್ನು ಒಪ್ಪಂದ ಉಲ್ಲಂಘನೆ ಎಂದು ಆರೋಪಿಸಿ, ಮುಂದಿನ ಮಾತುಕತೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬೆಳವಣಿಗೆಗಳು ದೊಡ್ಡ ಆತಂಕಕ್ಕೆ ಕಾರಣವಾಗಿವೆ. ತೈಲ ಸಾಗಣೆಗಾಗಿ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿ ಮತ್ತೆ ಬಂದ್ ಆಗಿದ್ದು, ಇದು ಜಾಗತಿಕ ಮಾರುಕಟ್ಟೆಗಳಿಗೆ ಭಾರೀ ಹೊಡೆತ ಬೀಳುವ ಎಚ್ಚರಿಕೆಯನ್ನು ನೀಡುತ್ತಿದೆ.

ಇದೇ ವೇಳೆ, ನಾಟೋ ಮಿತ್ರ ರಾಷ್ಟ್ರಗಳು ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಅಮೆರಿಕಾಗೆ ಪೂರ್ಣ ಬೆಂಬಲ ನೀಡದಿರುವುದರಿಂದ ಟ್ರಂಪ್ ಅಸಮಾಧಾನಗೊಂಡಿದ್ದು, ಒಕ್ಕೂಟದ ಮೇಲೆ ಟೀಕೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ