ವಿದೇಶಾಂಗ ಸಚಿವ ಜೈಶಂಕರ್ ಅವರಿಂದಿಗೆ ಇಸ್ರೇಲ್ ವಿದೇಶಾಂಗ ಸಚಿವ 
ವಿದೇಶ

ಹಾರ್ಮುಜ್, ಲೆಬನಾನ್ ಕುರಿತು ಇಸ್ರೇಲ್ ವಿದೇಶಾಂಗ ಸಚಿವರೊಂದಿಗೆ ಜೈಶಂಕರ್ ಚರ್ಚೆ; ಇರಾನ್​​ನಿಂದ ಆರ್ಥಿಕ ಭಯೋತ್ಪಾದನೆ ಎಂದ ಸಾರ್!

ಹಾರ್ಮುಜ್ ಜಲಸಂಧಿಯಲ್ಲಿ ಆರ್ಥಿಕ ಭಯೋತ್ಪಾದನೆಯ ಮೂಲಕ ಇರಾನ್, ಹಡಗುಗಳ ಸಂಚಾರ ಸ್ವಾತಂತ್ರ್ಯಕ್ಕೆ ಹಾನಿ ಉಂಟು ಮಾಡುತ್ತಿದೆ.

ಟೆಲ್ ಅವಿವ್: ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರು ಮಂಗಳವಾರ ಇರಾನ್, ಹಾರ್ಮುಜ್ ಜಲಸಂಧಿ ಮತ್ತು ಲೆಬನಾನ್ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಚರ್ಚಿಸಿದರು.

ಹಾರ್ಮುಜ್ ಜಲಸಂಧಿಯಲ್ಲಿ ಆರ್ಥಿಕ ಭಯೋತ್ಪಾದನೆಯ ಮೂಲಕ ಇರಾನ್, ಹಡಗುಗಳ ಸಂಚಾರ ಸ್ವಾತಂತ್ರ್ಯಕ್ಕೆ ಹಾನಿ ಉಂಟು ಮಾಡುತ್ತಿದೆ. ಹೀಗಾಗಿ ಭಾರತ ಸೇರಿದಂತೆ ಎಲ್ಲಾ ದೇಶಗಳಿಗೆ ಸಂಚಾರ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳುವ ಕ್ರಮದ ಅಗತ್ಯವಿದೆ ಎಂದು ಸಾರ್ ಹೇಳಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸಾರ್, "ನನ್ನ ಸ್ನೇಹಿತ, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಯಾವಾಗಲೂ ಉತ್ತಮ ಸಂಭಾಷಣೆ ನಡೆಸಿದೆ. ನಾವು ಇಬ್ಬರೂ ಇರಾನ್, ಹಾರ್ಮುಜ್ ಜಲಸಂಧಿ ಮತ್ತು ಲೆಬನಾನ್ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.

ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ತಡೆಯುವ ಪರಿಸ್ಥಿತಿಗಳ ಕುರಿತು ಚರ್ಚಿಸಿದ್ದೇವೆ. ಇಡೀ ಅಂತರರಾಷ್ಟ್ರೀಯ ಸಮುದಾಯಕ್ಕೆ ಇದು ನಿರ್ಣಾಯಕವಾಗಿದೆ ಎಂದು ನಾನು ಹೇಳಿದೆ" ಎಂದು ಸಾರ್ ತಿಳಿಸಿದ್ದಾರೆ.

"ಹಾರ್ಮುಜ್ ಜಲಸಂಧಿಯಲ್ಲಿ ಆರ್ಥಿಕ ಭಯೋತ್ಪಾದನೆಯ ಮೂಲಕ ಇರಾನ್ ಹಡಗುಗಳ ಸಂಚಾರ ಸ್ವಾತಂತ್ರ್ಯಕ್ಕೆ ಮತ್ತು ಜಾಗತಿಕ ಆರ್ಥಿಕತೆಗೆ ಹಾನಿ ಉಂಟು ಮಾಡುವುದರಿಂದ ಭಾರತ ಮತ್ತು ಕೊಲ್ಲಿಯಲ್ಲಿರುವ ನಮ್ಮ ಸ್ನೇಹಿತರು ಸೇರಿದಂತೆ ಎಲ್ಲಾ ದೇಶಗಳಿಗೆ ಸಂಚಾರ ಸ್ವಾತಂತ್ರ್ಯವನ್ನು ಖಚಿತಪಡಿಸುವ ಕ್ರಮದ ಅಗತ್ಯವಿದೆ ಎಂದು ನಾನು ಹೇಳಿದ್ದೇನೆ" ಎಂದು ಸಾರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜೈಶಂಕರ್ ಅವರು ಯುಎಇಗೆ ತಮ್ಮ ಅಧಿಕೃತ ಭೇಟಿಯ ನಂತರ ಸಾರ್ ಅವರು ಈ ಪೋಸ್ಟ್ ಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026 Final: RCB vs GT, ಮರುಕಳಿಸುತ್ತಾ ಪಿಚ್ ನಂ 6 ಕರಾಳತೆ, ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ

ನೊಂದವರ ಗಾಯದ ಮೇಲೆ ಉಪ್ಪು ಸುರಿದಂತೆ: ಜಾಮೀನು ಸಿಕ್ಕಿದ್ದಕ್ಕೆ ಕೊಲೆ ಆರೋಪಿ ಕುಟುಂಬಸ್ಥರ ಪಾರ್ಟಿ, ನಟ ವಿಶಾಲ್ ಆಕ್ರೋಶ, Video!

IPL 2026 Final: RCB vs GT ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ, ಮ್ಯಾಚ್ ರದ್ದಾದರೆ ಯಾರು ಚಾಂಪಿಯನ್?

ಕೇಸರಿ ಉಡುಪಿನಲ್ಲಿರುವ ತಿರುವಳ್ಳುವರ್ ಫೋಟೋಗೆ ಗೌರವ ಸಲ್ಲಿಸಿದ ರಾಜ್ಯಪಾಲರ ವಿರುದ್ಧ TVK, DMK ಕಿಡಿ

ಚಿಕ್ಕಬಳ್ಳಾಪುರದಲ್ಲಿ ಭೀಕರ ಸರಣಿ ಅಪಘಾತ: ಥಾರ್, ಆಟೋ ಮತ್ತು ಕ್ಯಾಂಟರ್ ನಡುವೆ ಢಿಕ್ಕಿ, 5 ಮಂದಿ ಸಾವು

SCROLL FOR NEXT