ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

US-Iran Peace Talks: ಶೀಘ್ರದಲ್ಲೇ ಯುದ್ಧ ಅಂತ್ಯ; ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು

ಮುಂದಿನ 2 ದಿನಗಳಲ್ಲಿ ಏನಾದರೂ ಸಂಭವಿಸಬಹುದು, ನಾವು ಅಲ್ಲಿಗೆ ಹೋಗಲು ಸಿದ್ಧರಾಗಿದ್ದೇವೆ’ ಎಂದು ಹೇಳಿದ್ದು, ಪಾಕಿಸ್ತಾನದ ಸೇನಾ ನಾಯಕತ್ವದ ಪಾತ್ರವನ್ನು ಮೆಚ್ಚಿದ್ದಾರೆ.

ಇರಾನ್ ಯುದ್ಧ “ಅಂತ್ಯದ ಹಂತಕ್ಕೆ ಸಮೀಪಿಸಿದೆ” ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿಕೆ ನೀಡಿದ್ದು, ಈ ಹೇಳಿಕೆ ವಿಶ್ವದ ಗಮನವನ್ನು ಸೆಳೆದಿದೆ.

ಟ್ರಂಪ್ ಈ ಹೇಳಿಕೆ ಶಾಂತಿ ಸ್ಥಾಪನೆ ಬಗ್ಗೆ ಸ್ವಲ್ಪ ಮಟ್ಟಿನ ಆಶಾವಾದ ಮೂಡಿಸಿದರೂ, ನೆಲಮಟ್ಟದಲ್ಲಿ ನಡೆಯುತ್ತಿರುವ ಸೈನಿಕ ಕ್ರಮಗಳು ಮತ್ತು ಆರ್ಥಿಕ ಒತ್ತಡಗಳು ಪರಿಸ್ಥಿತಿಯನ್ನು ಇನ್ನೂ ಅಸ್ಥಿರವಾಗಿಯೇ ಉಳಿಯುವಂತೆ ಮಾಡಿದೆ.

ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್ ಅವರು, ಮುಂದಿನ 2 ದಿನಗಳಲ್ಲಿ ಏನಾದರೂ ಸಂಭವಿಸಬಹುದು, ನಾವು ಅಲ್ಲಿಗೆ ಹೋಗಲು ಸಿದ್ಧರಾಗಿದ್ದೇವೆ’ ಎಂದು ಹೇಳಿದ್ದು, ಪಾಕಿಸ್ತಾನದ ಸೇನಾ ನಾಯಕತ್ವದ ಪಾತ್ರವನ್ನು ಮೆಚ್ಚಿದ್ದಾರೆ.

ವಾರಾಂತ್ಯದಲ್ಲಿ ನಡೆದ ಮಾತುಕತೆಗಳು ನಿರೀಕ್ಷಿತ ಫಲಿತಾಂಶ ನೀಡದಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೆ ಸಂಧಾನ ಮಾತುಕತೆಯ ಸುಳಿವು ನೀಡಿದ್ದಾರೆ.

ಗಲ್ಫ್, ಪಾಕಿಸ್ತಾನ ಮತ್ತು ಇರಾನಿನ ಕೆಲವು ಅಧಿಕಾರಿಗಳ ಪ್ರಕಾರ, ವಾಷಿಂಗ್ಟನ್ ಮತ್ತು ಟೆಹ್ರಾನ್ ರಾಜತಾಂತ್ರಿಕ ಅಧಿಕಾರಿಗಳು ಈ ವಾರದ ಕೊನೆಯಲ್ಲಿ ಪಾಕಿಸ್ತಾನಕ್ಕೆ ಮರಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆದರೆ ನಿಖರ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ಈ ಹಿಂದೆ ಹೇಳಿಕೆ ನೀಡಿದ್ದ ಅಮೆರಿಕದ ಉಪಾಧ್ಯಕ್ಷ ಜೆಡಿ.ವ್ಯಾನ್ಸ್ ಅವರು, ಇರಾನ್ ಅಣ್ವಸ್ತ್ರ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಆರ್ಥಿಕ ಪುನರುಜ್ಜೀವನಕ್ಕೆ ನೆರವು ನೀಡಲು ಅಮೆರಿಕಾ ಸಿದ್ಧವಿದೆ ಎಂದು ಹೇಳಿದ್ದರು. ಆದರೆ ಇರಾನ್ ತನ್ನ ಅಣ್ವಸ್ತ್ರ ಹೊಂದುವ ಆಗ್ರಹಗಳು ಶಾಂತಿಯುತ ಉದ್ದೇಶಗಳಿಗಷ್ಟೇ ಸೀಮಿತವಾಗಿದೆ ಎಂದು ಹೇಳುತ್ತಿದೆ.

ಪ್ರಸ್ತುತ ಟ್ರಂಪ್ ಅವರ ಹೇಳಿಕೆ ಶಾಂತಿ ಮಾತುಕತೆಗಳಿಗೆ ಬಾಗಿಲು ಉಭಯ ರಾಷ್ಟ್ರಗಳು ಮುಂದಿನ ಹೆಜ್ಜೆ ಇಟ್ಟಿರುವಂತೆ ಕಾಣುತ್ತಿದ್ದರು. ನೆಲಮಟ್ಟದ ವಾಸ್ತವ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ.

ಅಮೆರಿಕಾ, ಇರಾನ್ ಮೇಲೆ ಒತ್ತಡ ಹೆಚ್ಚಿಸಲು ಅದರ ಬಂದರುಗಳನ್ನು ಗುರಿಯಾಗಿಸಿಕೊಂಡು ನೌಕೆಗಳ ಮೇಲೆ ನಿರ್ಬಂಧ ಹೇರಿದೆ. ಮೊದಲ 24 ಗಂಟೆಗಳಲ್ಲಿ ಕನಿಷ್ಠ ಆರು ಹಡಗುಗಳನ್ನು ಹಿಂದಿರುಗಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಮಾನವೀಯ ನೆರವಿನ ಸಾಗಣೆಗಳಿಗೆ ಮಾತ್ರ ಕಟ್ಟುನಿಟ್ಟಿನ ನಿಯಂತ್ರಣದಡಿ ಅವಕಾಶ ನೀಡಲಾಗಿದೆ.

ಇದೇ ವೇಳೆ, ಕೆಲವು ಹಡಗುಗಳು ಇನ್ನೂ ಹಾರ್ಮುಜ್ ಮೂಲಕ ಸಂಚರಿಸುತ್ತಿರುವುದಾಗಿ ವರದಿಗಳಿಂದ ತಿಳಿದುಬಂದಿದೆ. ಇದರಿಂದ ಈ ನಿರ್ಬಂಧವನ್ನು ಸಂಪೂರ್ಣವಾಗಿ ಜಾರಿಗೆ ತರುವುದು ಸವಾಲಾಗಿದ್ದು, ಜಾಗತಿಕ ಇಂಧನ ಸರಬರಾಜು ಸರಪಳಿಗಳ ಮೇಲೆ ಅನಿಶ್ಚಿತತೆ ಹೆಚ್ಚುತ್ತಿದೆ. ಈ ಮಾರ್ಗವು ಜಾಗತಿಕ ತೈಲ ಸಾಗಣೆಯ ಪ್ರಮುಖ ಹಾದಿಯಾಗಿರುವುದರಿಂದ, ಯಾವುದೇ ಅಡ್ಡಿಪಡಿಸುವಿಕೆ ಬೆಲೆ ಏರಿಕೆ ಮತ್ತು ಮಾರುಕಟ್ಟೆ ಅಸ್ಥಿರತೆಗೆ ಕಾರಣವಾಗಬಹುದು.

ಅಮೆರಿಕಾ ಇರಾನ್ ಮೇಲೆ ಆರ್ಥಿಕ ಒತ್ತಡವನ್ನೂ ಮುಂದುವರಿಸುತ್ತಿದೆ. ಇರಾನ್ ತೈಲ ಮಾರಾಟಕ್ಕೆ ನೀಡಿದ್ದ ತಾತ್ಕಾಲಿಕ ವಿನಾಯಿತಿಯನ್ನು ನವೀಕರಿಸದಿರಲು ನಿರ್ಧರಿಸಿದ್ದು, “ಮ್ಯಾಕ್ಸಿಮಮ್ ಪ್ರೆಶರ್” ನೀತಿಯನ್ನು ಮುಂದುವರಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ. ಇದು ಇರಾನ್‌ನ್ನು ಮಾತುಕತೆಗೆ ಒತ್ತಾಯಿಸುವ ತಂತ್ರದ ಭಾಗವಾಗಿದೆ ಎನ್ನಲಾಗುತ್ತಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲೂ ಹಲವು ರಾಜತಾಂತ್ರಿಕ ಚಟುವಟಿಕೆಗಳು ನಡೆಯುತ್ತಿವೆ. ಕ್ಸಿ ಜಿನ್ ಪಿಂಗ್ ಅವರು ರಷ್ಯಾದ ವಿದೇಶಾಂಗ ಸಚಿವ ಸರ್ಜಿ ಲಾವ್ರೋವ್ ಜೊತೆ ಮಾತುಕತೆ ನಡೆಸಿ, ಮಧ್ಯಪ್ರಾಚ್ಯದ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಹಕಾರ ನೀಡಲು ಒಪ್ಪಿಕೊಂಡಿದ್ದಾರೆ. ಚೀನಾ ಮತ್ತು ರಷ್ಯಾ ಈ ಸಂಕಷ್ಟದಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿವೆ.

ಇನ್ನೊಂದೆಡೆ, ಇಸ್ರೇಲ್ ಮತ್ತು ಲೆಬನಾನ್ ನಡುವೆ ಅಮೆರಿಕ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ ಆರಂಭಿಸಲು ಒಪ್ಪಂದವಾಗಿದೆ. ಆದರೆ, ಇದೇ ಸಮಯದಲ್ಲಿ ಹಿಜ್ಬುಲ್ಲಾ ನಡೆಸಿದ ರಾಕೆಟ್ ದಾಳಿಗಳು ಉದ್ವಿಗ್ನತೆಯನ್ನು ಮತ್ತೆ ಹೆಚ್ಚಿಸಿವೆ, ಇದು ಶಾಂತಿ ಪ್ರಕ್ರಿಯೆ ಇನ್ನೂ ಸೂಕ್ಷಅಮ ಹಂತದಲ್ಲಿದೆ ಎಂಬುದನ್ನು ತೋರಿಸುತ್ತವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: ವ್ಯಾಪಾರ ಏಕೀಕರಣಕ್ಕೆ ಒತ್ತಾಸೆ ಕೋರಿದ ಪ್ರಧಾನಿ ಮೋದಿ ಮೊದಲ ದಿನ ಹೇಳಿದ್ದೇನು?

ಪತ್ರಕರ್ತ ಜಿ. ಮಹಂತೇಶ್ ಗೆ ಜೀವ ಬೆದರಿಕೆ: FIR ದಾಖಲು!

ಪಶ್ಚಿಮ ಏಷ್ಯಾದ ಉದ್ವಿಗ್ನತೆ ನಡುವೆ ಮೋದಿ- ಪೆಜೆಶ್ಕಿಯನ್ ಮಾತುಕತೆ: ದೀರ್ಘಕಾಲೀನ, ಪರಸ್ಪರ ಲಾಭದಾಯಕ ಕಾರ್ಯತಂತ್ರಕ್ಕೆ ಒತ್ತು

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

ಬದರಿನಾಥದ 'ತಪ್ತ ಕುಂಡ'ದಲ್ಲಿ 108 ಬಾರಿ ಧಾರ್ಮಿಕ ಸ್ನಾನ: ರಾಜಸ್ಥಾನದ ಇಬ್ಬರು ವೃದ್ಧೆಯರು ಸಾವು!