ಅಮೆರಿಕಾದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ 
ವಿದೇಶ

ಇರಾನ್ ವಿರುದ್ಧ ಪ್ರತೀಕಾರ: ರಷ್ಯಾ ತೈಲ ವಿನಾಯಿತಿ ವಿಸ್ತರಣೆ ಇಲ್ಲ ಎಂದ ಅಮೆರಿಕಾ; ಜಾಗತಿಕ ಮಾರುಕಟ್ಟೆಗೆ ಶಾಕ್; ಭಾರತದ ಮೇಲೂ ಪರಿಣಾಮ ಸಾಧ್ಯತೆ..!

ಇರಾನಿನ ತೈಲದ ಮೇಲಿನ ಈ ವಾರ ಮುಕ್ತಾಯಗೊಳ್ಳುವ ಸಮುದ್ರ ನಿರ್ಬಂಧಗಳ ವಿನಾಯಿತಿ ಮತ್ತು ಈ ವಾರ ಮುಕ್ತಾಯಗೊಳ್ಳುವ ರಷ್ಯಾದ ತೈಲದ ಮೇಲಿನ ಅನುಗುಣವಾದ ವಿನಾಯಿತಿಯನ್ನು ವಾಷಿಂಗ್ಟನ್ ವಿಸ್ತರಿಸುವುದಿಲ್ಲ ಅಮೆರಿಕಾದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಹೇಳಿದ್ದಾರೆ.

ವಾಷಿಂಗ್ಟನ್: ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ನಡುವಲ್ಲೇ ಅಮೆರಿಕಾ ತನ್ನ ನಿರ್ಬಂಧ ನೀತಿಯಲ್ಲಿ ಮತ್ತಷ್ಟು ಕಠಿಣ ನಿಲುವು ತಾಳಿದೆ.

ರಷ್ಯಾದಿಂದ ಸಾಗರದಲ್ಲಿದ್ದ ತೈಲ ಮಾರಾಟಕ್ಕೆ ನೀಡಲಾಗಿದ್ದ ತಾತ್ಕಾಲಿಕ ವಿನಾಯಿತಿಯನ್ನು ಮುಂದುವರಿಸುವ ಯಾವುದೇ ಯೋಜನೆ ಇಲ್ಲ ಎಂದು ಅಮೆರಿಕಾ ಹೇಳಿದೆ.

ಇರಾನಿನ ತೈಲದ ಮೇಲಿನ ಈ ವಾರ ಮುಕ್ತಾಯಗೊಳ್ಳುವ ಸಮುದ್ರ ನಿರ್ಬಂಧಗಳ ವಿನಾಯಿತಿ ಮತ್ತು ಈ ವಾರ ಮುಕ್ತಾಯಗೊಳ್ಳುವ ರಷ್ಯಾದ ತೈಲದ ಮೇಲಿನ ಅನುಗುಣವಾದ ವಿನಾಯಿತಿಯನ್ನು ವಾಷಿಂಗ್ಟನ್ ವಿಸ್ತರಿಸುವುದಿಲ್ಲ ಅಮೆರಿಕಾದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಹೇಳಿದ್ದಾರೆ.

ಈ ನಿರ್ಧಾರವು ಕೇವಲ ರಷ್ಯಾಕ್ಕೆ ಸೀಮಿತವಾಗಿರದೇ, ಇರಾನ್ ಮೇಲಿನ ಒತ್ತಡವನ್ನೂ ಹೆಚ್ಚಿಸುವ ತಂತ್ರವಾಗಿದೆ ಎಂದು ಹೇಳಲಾಗುತ್ತಿದ್ದು, ನಿರ್ಬಂಧಗಳ ಮೂಲಕ ತೈಲ ಪೂರೈಕೆಯನ್ನು ಹೆಚ್ಚಿಸಲು ಮತ್ತು ಜಾಗತಿಕ ಇಂಧನ ಬೆಲೆಗಳನ್ನು ಕಡಿಮೆ ಮಾಡಲು ಮಾಡುತ್ತಿರುವ ಪ್ರಯತ್ನವಾಗಿದೆ ಎಂದು ಹೇಳಲಾಗುತ್ತಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಸೆಂಟ್, “ರಷ್ಯಾ ತೈಲಕ್ಕೆ ನೀಡಿದ್ದ ಸಾಮಾನ್ಯ ಲೈಸೆನ್ಸ್ ಅನ್ನು ಮರುನವೀಕರಿಸುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಈ ವಿನಾಯಿತಿ ಮಾರ್ಚ್ 11ರೊಳಗೆ ಹಡಗುಗಳಲ್ಲಿ ಲೋಡ್ ಆಗಿದ್ದ ತೈಲಕ್ಕೆ ಮಾತ್ರ ಅನ್ವಯಿಸಿತ್ತು ಮತ್ತು ಆ ಪ್ರಮಾಣ ಈಗಾಗಲೇ ಸಂಪೂರ್ಣವಾಗಿ ಬಳಕೆಯಾಗಿದೆ. ಇದೇ ರೀತಿಯಲ್ಲಿ ಇರಾನ್ ತೈಲದ ಮೇಲಿನ ತಾತ್ಕಾಲಿಕ ಸಡಿಲಿಕೆಗೂ ಅಮೆರಿಕಾ ಬ್ರೇಕ್ ಹಾಕಿದ್ದು, ಮುಂದಿನ ದಿನಗಳಲ್ಲಿ “ಗರಿಷ್ಠ ಒತ್ತಡ” ನೀತಿಯನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಈ ಕ್ರಮದ ಹಿಂದೆ ಮಧ್ಯಪ್ರಾಚ್ಯದ ಸಂಘರ್ಷ ಪ್ರಮುಖ ಪಾತ್ರ ವಹಿಸಿದೆ. ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧ ಇರಾನ್ ತೋರಿದ ತೀವ್ರ ಪ್ರತಿಕ್ರಿಯೆಯ ಭಾಗವಾಗಿ, ಜಗತ್ತಿನ ಪ್ರಮುಖ ಇಂಧನ ಸಾಗಾಟ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ವ್ಯತ್ಯಯ ಉಂಟಾಗಿದೆ.

ವಿಶ್ವದ ಒಟ್ಟು ತೈಲ ಸಾಗಾಟದ ಪ್ರಮುಖ ಹಂಚಿಕೆ ಈ ಜಲಸಂಧಿಯ ಮೂಲಕ ಸಾಗುವುದರಿಂದ, ಇಲ್ಲಿ ಉಂಟಾಗುವ ಅಡ್ಡಿ ಜಾಗತಿಕ ಮಾರುಕಟ್ಟೆಯಲ್ಲಿ ತಕ್ಷಣದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದಲೇ ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆಗಳು ಏರಿಕೆಯಾಗಿದ್ದು, ಅನೇಕ ದೇಶಗಳ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ.

ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಇಂಧನ ಆಮದು ಅವಲಂಬಿತ ರಾಷ್ಟ್ರಗಳು ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ, ಉತ್ಪಾದನೆ ಹಾಗೂ ದಿನನಿತ್ಯದ ವಸ್ತುಗಳ ಬೆಲೆಗಳ ಮೇಲೂ ಇದರ ಪರಿಣಾಮ ಕಾಣಿಸಿಕೊಳ್ಳುತ್ತಿದ್ದು, ದರ ಏರಿಕೆ ಹೆಚ್ಚುವ ಸಾಧ್ಯತೆ ಇದೆ. ಅಮೆರಿಕಾದಲ್ಲಿಯೂ ಪೆಟ್ರೋಲ್ ಬೆಲೆಗಳು ಏರಿಕೆಯಾಗಿದ್ದು, ಸಾಮಾನ್ಯ ಜನರ ಜೀವನ ವೆಚ್ಚ ಹೆಚ್ಚಾಗಿದೆ.

ಮಾರ್ಚ್ ತಿಂಗಳಲ್ಲಿ ಟ್ರಂಪ್ ಸರ್ಕಾರ ರಷ್ಯಾದ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಿ, ಮಾರುಕಟ್ಟೆಯಲ್ಲಿ ತೈಲ ಕೊರತೆ ಉಂಟಾಗದಂತೆ ಕ್ರಮ ಕೈಗೊಂಡಿತ್ತು.

ಮಾರ್ಚ್ 12ರೊಳಗೆ ಹಡಗುಗಳಲ್ಲಿ ತುಂಬಲಾಗಿದ್ದ ರಷ್ಯಾ ತೈಲವನ್ನು ಏಪ್ರಿಲ್ 11ರವರೆಗೆ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು. ನಂತರ ಇದೇ ಮಾದರಿಯನ್ನು ಇರಾನ್ ತೈಲಕ್ಕೂ ಅನ್ವಯಿಸಿ, ಮಾರ್ಚ್ 20ರೊಳಗೆ ಲೋಡ್ ಆಗಿದ್ದ ತೈಲವನ್ನು ಏಪ್ರಿಲ್ 19ರವರೆಗೆ ಮಾರಾಟ ಮಾಡಲು ಅನುಮತಿ ನೀಡಲಾಗಿತ್ತು. ಆದರೆ, ಈಗ ಆ ಅವಧಿ ಮುಗಿಯುತ್ತಿದ್ದಂತೆ, ಅಮೆರಿಕಾ ಯಾವುದೇ ಹೊಸ ವಿನಾಯಿತಿಯನ್ನು ನೀಡದೇ ತನ್ನ ಕಠಿಣ ನಿಲುವನ್ನು ಮುಂದುವರಿಸಿದೆ.

ಈ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ರಷ್ಯಾ ಮತ್ತು ಇರಾನ್ ಮೇಲೆ ಆರ್ಥಿಕ ಒತ್ತಡ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅದೇ ವೇಳೆ, ಭಾರತ, ಚೀನಾ ಸೇರಿದಂತೆ ಇಂಧನ ಆಮದು ಅವಲಂಬಿತ ದೇಶಗಳು ಪರ್ಯಾಯ ಸರಬರಾಜು ಮಾರ್ಗಗಳನ್ನು ಹುಡುಕಬೇಕಾದ ಪರಿಸ್ಥಿತಿ ಎದುರಾಗಬಹುದು.

ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿಯುವ ಸಾಧ್ಯತೆ ಹೆಚ್ಚಿದ್ದು, ಮುಂದಿನ ಬೆಳವಣಿಗೆಗಳು ಹಾರ್ಮುಜ್ ಪರಿಸ್ಥಿತಿ ಮತ್ತು ಇರಾನ್ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾನಿಲ್ಲದಿದ್ದರೆ ಇಸ್ರೇಲ್ ಇರುತ್ತಿರಲಿಲ್ಲ': ನೆತನ್ಯಾಹು ವಿರುದ್ಧ ಟ್ರಂಪ್ ಅಸಮಾಧಾನ; 'ಅವರಿಗೆ' ಸಾಧ್ಯವಾಗದಿದ್ದರೆ ಹಿಜ್ಬೊಲ್ಲಾನ ಸಿರಿಯಾ ನೋಡಿಕೊಳ್ಳುತ್ತೆ- US ಅಧ್ಯಕ್ಷ

ರಾಜಸ್ಥಾನದಲ್ಲಿ ಲಂಚಕ್ಕೆ ಕೈಯೊಡ್ಡಿ ರಾಜ್ಯಕ್ಕೆ ಕಳಂಕ: PSI ಅನಿತಾ ಸೇರಿ ಮೂವರ ಅಮಾನತು - ಪ್ರಿಯಾಂಕ್ ಖರ್ಗೆ

ಅತಿಕ್ರಮಣ ಆರೋಪ: ವಾರಣಾಸಿಯ Ganj Shaheeda ಮಸೀದಿ ತೆರವಿಗೆ ರೈಲ್ವೆ ಇಲಾಖೆ ನೋಟಿಸ್

ಕರ್ನಾಟಕದ ಬೆಳವಣಿಗೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬದ್ಧರಾಗಿದ್ದಾರೆ: Biocon ಸಂಸ್ಥಾಪಕಿ ಕಿರಣ್ ಮಜುಂದಾರ್-ಶಾ

ಹನಿಮೂನ್ ಗೆ ತೆರಳಿದ್ದ ಮಹಿಳಾ ಟೆಕ್ಕಿ ಶವವಾಗಿ ರಕ್ತ-ಮೂತ್ರದ ಮಡುವಿನಲ್ಲಿ ಪತ್ತೆ! ಆ ನಿಗೂಢರಾತ್ರಿ ಆಗಿದ್ದೇನು?

SCROLL FOR NEXT