ನರೇಂದ್ರ ಮೋದಿ-ಡೊನಾಲ್ಡ್ ಟ್ರಂಪ್ 
ವಿದೇಶ

'ನನ್ನ ಸ್ನೇಹಿತ ಮೋದಿ ಜೊತೆಗೆ ಉತ್ತಮ ಮಾತುಕತೆ ನಡೆಸಿದೆ': ಡೊನಾಲ್ಡ್ ಟ್ರಂಪ್; Video

ಮಂಗಳವಾರ ಟ್ರಂಪ್, ಮೋದಿ ಅವರಿಗೆ ಕರೆ ಮಾಡಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದರು ಹಾಗೂ ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು. ಅಲ್ಲಿ ಅಮೆರಿಕಾ ಮತ್ತು ಇಸ್ರೇಲ್ ಇರಾನ್ ವಿರುದ್ಧ ಯುದ್ಧ ನಡೆಸಿವೆ.

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನನ್ನ ಸ್ನೇಹಿತ ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ. ಉಭಯ ನಾಯಕರು ಮೊನ್ನೆ ಮಂಗಳವಾರ ನಡೆಸಿದ ಚರ್ಚೆಯನ್ನು ಉಲ್ಲೇಖಿಸುತ್ತಿದ್ದರು.

ನಾನು ಮೋದಿಯವರೊಂದಿಗೆ ತುಂಬಾ ಚೆನ್ನಾಗಿ ಮಾತನಾಡಿದೆ, ಅವರು ನನ್ನ ಸ್ನೇಹಿತರು, ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ನಾವು ತುಂಬಾ ಉತ್ತಮ ಸಂಭಾಷಣೆ ನಡೆಸಿದ್ದೇನೆ ಎಂದು ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಡೊನಾಲ್ಡ್ ಟ್ರಂಪ್ ಅವರು ತೆರಿಗೆ ಕಡಿತ ಕುರಿತ ದುಂಡುಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಲು ಲಾಸ್ ವೇಗಾಸ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಮಾತುಗಳನ್ನು ಹೇಳಿದರು.

ಮಂಗಳವಾರ ಟ್ರಂಪ್, ಮೋದಿ ಅವರಿಗೆ ಕರೆ ಮಾಡಿ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದರು ಹಾಗೂ ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು. ಅಲ್ಲಿ ಅಮೆರಿಕಾ ಮತ್ತು ಇಸ್ರೇಲ್ ಇರಾನ್ ವಿರುದ್ಧ ಯುದ್ಧ ನಡೆಸಿವೆ.

ಅಮೆರಿಕಾ ಮತ್ತು ಇರಾನ್ ಏಪ್ರಿಲ್ 7ರಂದು ಎರಡು ವಾರಗಳ ಯುದ್ಧ ವಿರಾಮವನ್ನು ಘೋಷಿಸಿವೆ. ವಾಷಿಂಗ್ಟನ್ ಜೊತೆ ಶಾಂತಿ ಮಾತುಕತೆ ನಡೆಸುವ ವೇಳೆ, ಟೆಹ್ರಾನ್ ತನ್ನ ಅಣ್ವಸ್ತ್ರಗಳ ಬೆನ್ನಟ್ಟುವಿಕೆಯನ್ನು ಹಾಗೂ ಯುರೇನಿಯಂ ಸಮೃದ್ದೀಕರಣ ನಿಲ್ಲಿಸಬೇಕೆಂದು ಒತ್ತಾಯಿಸಲಾಯಿತು.

ಇರಾನ್ ಜೊತೆಗಿನ ಯುದ್ಧದಿಂದಾಗಿ, ಹಾರ್ಮುಜ್ ಕಣಿವೆಯ ಸಮುದ್ರ ಮಾರ್ಗಗಳನ್ನು ತಡೆದ ಹಿನ್ನೆಲೆಯಲ್ಲಿ ಅನಿಲ ಬೆಲೆಗಳು ಏರಿಕೆಯಾಗಿವೆ. ಈ ಕಣಿವೆ ಜಾಗತಿಕ ತೈಲ ಸರಬರಾಜಿನ ಐದನೇ ಭಾಗಕ್ಕೆ ಪ್ರಮುಖ ದ್ವಾರವಾಗಿದೆ.

ಮಂಗಳವಾರ ನಡೆದ ಟ್ರಂಪ್-ಮೋದಿ ದೂರವಾಣಿ ಮಾತುಕತೆಯ ವೇಳೆ, ಇಬ್ಬರು ನಾಯಕರು ಹಾರ್ಮುಜ್ ಕಣಿವೆಯನ್ನು ತೆರೆದು ಸುರಕ್ಷಿತವಾಗಿ ಇಡುವ ಮಹತ್ವವನ್ನು ಒತ್ತಿಹೇಳಿದರು.

ಭಾರತದಲ್ಲಿನ ಅಮೆರಿಕದ ರಾಯಭಾರಿ ಸೆರ್ಗಿ ಗೊರ್ ಅವರ ಪ್ರಕಾರ, 40 ನಿಮಿಷಗಳ ಈ ಸಂಭಾಷಣೆ ಕೊನೆಯಲ್ಲಿ ಟ್ರಂಪ್, ಮೋದಿಗೆ ನಾವು ಎಲ್ಲರೂ ನಿಮ್ಮನ್ನು ಪ್ರೀತಿಸುತ್ತೇವೆ" ಎಂದು ಹೇಳಿದ್ದಾರೆ.

ಫೆಬ್ರವರಿ 28ರಂದು ಇಸ್ರೇಲ್-ಇರಾನ್ ಯುದ್ಧ ಪ್ರಾರಂಭವಾದ ಬಳಿಕ, ಮೋದಿ ಮತ್ತು ಟ್ರಂಪ್ ನಡೆಸುತ್ತಿರುವ ಎರಡನೇ ದೂರವಾಣಿ ಸಂಭಾಷಣೆ ಇದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

ಬೆಂಗಳೂರಿನಲ್ಲಿ ಮನೆ ಖರೀದಿದಾರರಿಗೆ 927 ಕೋಟಿ ವಂಚನೆ ಆರೋಪ: ಓಜೋನ್ ಅರ್ಬಾನಾ CMD ವಾಸುದೇವನ್ ಬಂಧನ!

Asian Games 2026: 1 ನಿಮಿಷದಲ್ಲಿ 2 ಚಿನ್ನದ ಪದಕ ಗೆದ್ದ ಭಾರತ, 75 ಪದಕಗಳೊಂದಿಗೆ 5ನೇ ಸ್ಥಾನಕ್ಕೆ ಲಗ್ಗೆ!

'ಒಂದೇ ಒಂದು ಪೋಸ್ಟ್ ಕೂಡ ಮಾಡಿಲ್ಲ: ಸ್ಮಿತ್ ಮಚ್ಚರ್ ವಿಚಾರದಲ್ಲಿ ರಾಹುಲ್ ಗಾಂಧಿಯ ಮೌನವನ್ನು ಪ್ರಶ್ನಿಸಿದ ಕಿಶನ್ ರೆಡ್ಡಿ!

ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ Biggboss ಮಾಜಿ ಸ್ಪರ್ಧಿ ಜಾಹ್ನವಿ ನೇಮಕ!