ಹಾರ್ಮುಜ್ ಜಲಸಂಧಿ  
ವಿದೇಶ

ಹಾರ್ಮುಜ್ ಜಲಸಂಧಿ ಮೇಲೆ ಮತ್ತೆ ನಿರ್ಬಂಧ: ಟ್ಯಾಂಕರ್ ಮೇಲೆ ಇರಾನಿನ ಗನ್ ಬೋಟ್ ಗಳಿಂದ ಗುಂಡಿನ ದಾಳಿ! ಭಾರತೀಯ ಹಡಗುಗಳು ವಾಪಸ್!

ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಟ್ಯಾಂಕರ್ ವೊಂದರ ಮೇಲೆ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಎರಡು ಗನ್‌ಬೋಟ್‌ಗಳು ಗುಂಡಿನ ದಾಳಿ ನಡೆಸಿವೆ ಎಂದು ಬ್ರಿಟಿಷ್ ಮಿಲಿಟರಿ ಶನಿವಾರ ತಿಳಿಸಿದೆ.

ಟೆಹರಾನ್: ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ಸದ್ಯಕ್ಕೆ ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳು ತೋರುತ್ತಿಲ್ಲ. ದಿನದಿಂದ ದಿನಕ್ಕೆ ಅದು ಹೆಚ್ಚಾಗುತ್ತಲೇ ಹೋಗಿದೆ. ಇರಾನಿನ ಹಡಗು ಸಾಗಣೆ ಮತ್ತು ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಇದೀಗ, ಓಪನ್ ಆಗಿದ್ದ ಹಾರ್ಮುಜ್ ಜಲಸಂಧಿ ಮೇಲೆ ಮತ್ತೆ ನಿರ್ಬಂಧ ಹೇರಿದೆ.

ಇದಾದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಟ್ಯಾಂಕರ್ ವೊಂದರ ಮೇಲೆ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಎರಡು ಗನ್‌ಬೋಟ್‌ಗಳು ಗುಂಡಿನ ದಾಳಿ ನಡೆಸಿವೆ ಎಂದು ಬ್ರಿಟಿಷ್ ಮಿಲಿಟರಿ ಶನಿವಾರ ತಿಳಿಸಿದೆ.

ಹಡಗು ಹಾಗೂ ಅದರ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಹಡಗು ಭದ್ರತೆಯನ್ನು ಮೇಲ್ವಿಚಾರಣೆ ಮಾಡುವ ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (UKMTO) ಹೇಳಿದೆ. ಆದರೆ ಅದು ಯಾವ ರಾಷ್ಟ್ರದ ಹಡಗು, ಎಲ್ಲಿಗೆ ಹೋಗುತಿತ್ತು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.

ಇರಾನಿನ ಹಡಗು ಸಂಚಾರ ಮತ್ತು ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನಕ್ಕೆ ಪ್ರತಿಕ್ರಿಯೆಯಾಗಿ, ಪ್ರಮುಖ ಜಾಗತಿಕ ತೈಲ ಸಾಗಣೆ ಮಾರ್ಗವಾದ ಹಾರ್ಮುಜ್ ಜಲಸಂಧಿಗೆ ಮತ್ತೆ ನಿರ್ಬಂಧ ಹೇರುವುದಾಗಿ ಇರಾನ್ ಘೋಷಿಸಿದ ನಂತರ ಈ ಘಟನೆ ನಡೆದಿದೆ.

ಭಾರತೀಯ ಹಡಗುಗಳು ವಾಪಸ್: ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಗುಂಡಿನ ದಾಳಿ ಬೆನ್ನಲ್ಲೇ, ಹಾರ್ಮುಜ್ ಜಲಸಂಧಿಯಲ್ಲಿ ಎರಡು ಭಾರತೀಯ ಹಡಗುಗಳು ತಮ್ಮ ದಿಕ್ಕನ್ನು ಬದಲಾಯಿಸಿವೆ ಎಂದು ಹಡಗು ಟ್ರ್ಯಾಕಿಂಗ್ ಸೇವಾ ಸಂಸ್ಥೆ ತಿಳಿಸಿದೆ.

ಹಡಗು ಮೇಲ್ವಿಚಾರಕ TankerTrackers.com ಪ್ರಕಾರ, ಸುಮಾರು 2 ಮಿಲಿಯನ್ ಬ್ಯಾರೆಲ್ ಇರಾಕಿ ಕಚ್ಚಾ ತೈಲವನ್ನು ಸಾಗಿಸುತ್ತಿದ್ದ ಭಾರತೀಯ ಧ್ವಜವನ್ನು ಹೊಂದಿರುವ ಸೂಪರ್ ಟ್ಯಾಂಕರ್ ಹಡಗು ವಾಪಸ್ಸಾಗಿದೆ ಎನ್ನಲಾಗಿದೆ.

ಈ ಬೆಳವಣಿಗೆ ಜಾಗತಿಕ ಇಂಧನ ಪೂರೈಕೆಯ ಬಗ್ಗೆ ಆತಂಕವನ್ನು ಹೆಚ್ಚಾಗಿಸುವ ಸಾಧ್ಯತೆಯಿದೆ. ಏಕೆಂದರೆ ಈ ಜಲಸಂಧಿ ಮೂಲಕ ವಿಶ್ವದ ಗಮನಾರ್ಹ ಪ್ರಮಾಣದ ಕಚ್ಚಾ ತೈಲ ವ್ಯಾಪಾರ ನಡೆಯುತ್ತದೆ.

ಇರಾನ್ ಆಡಳಿತದ ಪ್ರಕಾರ, ಏಳು ವಾರಗಳಿಂದ ನಡೆಯುತ್ತಿರುವ ಸಂಘರ್ಷದ ಸಮಯದಲ್ಲಿ ಜಲಮಾರ್ಗದಲ್ಲಿ ಹಡಗು ಚಲನೆಯನ್ನು ಬಿಗಿಯಾಗಿ ನಿಯಂತ್ರಿಸಲಾಗಿದ್ದು, ಅಧಿಕೃತ ಹಡಗುಗಳಿಗೆ ಮಾತ್ರ ಹಾದುಹೋಗಲು ಅವಕಾಶ ನೀಡಲಾಗಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಏಷ್ಯಾದ ಉದ್ವಿಗ್ನತೆ ನಡುವೆ ಮೋದಿ- ಪೆಜೆಶ್ಕಿಯನ್ ಮಾತುಕತೆ: ದೀರ್ಘಕಾಲೀನ, ಪರಸ್ಪರ ಲಾಭದಾಯಕ ಕಾರ್ಯತಂತ್ರಕ್ಕೆ ಒತ್ತು

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

ಬದರಿನಾಥದ 'ತಪ್ತ ಕುಂಡ'ದಲ್ಲಿ 108 ಬಾರಿ ಧಾರ್ಮಿಕ ಸ್ನಾನ: ರಾಜಸ್ಥಾನದ ಇಬ್ಬರು ವೃದ್ಧೆಯರು ಸಾವು!

BRICS 2026: ಪುಟಿನ್-ಮೋದಿ ಮಾತುಕತೆ: ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆಯ ವಿಷಯ ಪ್ರಸ್ತಾಪ ರಷ್ಯಾ ಅಧ್ಯಕ್ಷ ಹೇಳಿದ್ದೇನು?

ಬ್ರಿಕ್ಸ್ ಶೃಂಗಸಭೆ: ಭಾರಿ ಭದ್ರತೆ, ಐಷಾರಾಮಿ ವಿಮಾನದಲ್ಲಿ ನವದೆಹಲಿಗೆ ಆಗಮಿಸಿದ ಪುಟಿನ್! "ಡೂಮ್ಸ್ ಡೇ' ವಿಶೇಷತೆ ಏನು ಗೊತ್ತಾ? Video