ಇರಾನ್ ನ ಪರಮಾಣು ಸಂಗ್ರಹ ಕೇಂದ್ರ 
ವಿದೇಶ

ಅಮೆರಿಕಕ್ಕೆ 'ಸಮೃದ್ಧ ಯುರೇನಿಯಂ' ಹಸ್ತಾಂತರಿಸಲ್ಲ: ಖಡಕ್ ಸಂದೇಶ ಕೊಟ್ಟ ಇರಾನ್!

ನಮ್ಮ ಯುರೇನಿಯಂ ಯಾವ ಪರಿಸ್ಥಿತಿಯಲ್ಲಿಯೂ ಎಲ್ಲಿಗೂ ವರ್ಗಾವಣೆ ಆಗುವುದಿಲ್ಲ. ಅದು ನಮ್ಮ ದೇಶದ ಮಣ್ಣಿನಷ್ಟೇ ಪವಿತ್ರ ಎಂದು ಇರಾನ್ ಉಪ ವಿದೇಶಾಂಗ ಸಚಿವ ಸಯೀದ್ ಖತೀಬ್ಜಾದೆ ಹೇಳಿದ್ದಾರೆ.

ಟೆಹರಾನ್: ಸಮೃದ್ಧ ಯುರೇನಿಯಂ ವಶಕ್ಕೆ ಪಡೆಯಲಾಗುವುದು ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಇರಾನ್ ದೃಢವಾಗಿ ತಿರಸ್ಕರಿಸಿದೆ. ಅಲ್ಲದೇ ಅಮೆರಿಕದೊಂದಿಗೆ ನೇರ ಮಾತುಕತೆ ಪುನರಾರಂಭಿಸಲು ಹಿಂಜರಿಯತ್ತಿರುವುದನ್ನು ಸೂಚಿಸಿದೆ.

ಟರ್ಕಿಯ ಅಂಟಲ್ಯದಲ್ಲಿ ಅಸೋಸಿಯೇಟೆಡ್ ಪ್ರೆಸ್‌ನೊಂದಿಗೆ ಮಾತನಾಡಿದ ಇರಾನ್ ಉಪ ವಿದೇಶಾಂಗ ಸಚಿವ ಸಯೀದ್ ಖತೀಬ್ಜಾದೆ, ಇರಾನ್ ತನ್ನ ಸಮೃದ್ಧ ಯುರೇನಿಯಂ ಸಂಗ್ರಹವನ್ನ ಯಾವುದೇ ದೇಶಕ್ಕೂ ನೀಡುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದು, ಅಮೆರಿಕದ ಹೇಳಿಕೆಯನ್ನ ತಳ್ಳಿಹಾಕಿದ್ದಾರೆ.

ನಮ್ಮ ಯುರೇನಿಯಂ ಯಾವ ಪರಿಸ್ಥಿತಿಯಲ್ಲಿಯೂ ಎಲ್ಲಿಗೂ ವರ್ಗಾವಣೆ ಆಗುವುದಿಲ್ಲ. ಅದು ನಮ್ಮ ದೇಶದ ಮಣ್ಣಿನಷ್ಟೇ ಪವಿತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಮಿತಿ ಮೀರಿದ ಬೇಡಿಕೆ ಇಡುತ್ತಿದೆ ಎಂದು ಅವರು ಆರೋಪಿಸಿದ್ದು, ಹೊಸ ಮಾತುಕತೆಗೆ ಇರಾನ್ ಸಿದ್ಧವಾಗಿಲ್ಲ ಎಂದು ಹೇಳಿದ್ದಾರೆ.

ಅಮೆರಿಕ ಇರಾನ್‌ಗೆ ಪ್ರವೇಶಿಸಿ 'ಎಲ್ಲಾ ಪರಮಾಣು ' ಸಂಗ್ರಹವನ್ನು (all the nuclear dust) ವಶಕ್ಕೆ ಪಡೆಯುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿಕೆ ಬೆನ್ನಲ್ಲೇ ಇರಾನ್ ಉಪ ವಿದೇಶಾಂಗ ಸಚಿವರು ಈ ರೀತಿಯ ಹೇಳಿಕೆ ನೀಡಿದ್ದಾರೆ.

ಪಶ್ಚಿಮ ಏಷ್ಯಾದಲ್ಲಿ ಪರಿಸ್ಥಿತಿ ಸ್ಥಿರಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ಅನಿಶ್ಚಿತವಾಗಿದ್ದರೂ ಸಹ, ಖತೀಬ್ಜಾದೆ ಅವರ ಪ್ರತಿಕ್ರಿಯೆಯು ಉಭಯ ರಾಷ್ಟ್ರಗಳ ನಡುವಿನ ನಿರಂತರ ವಿಶ್ವಾಸ ಕೊರತೆಯನ್ನು ಒತ್ತಿ ಹೇಳುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಮೇಲೆ ಮತ್ತೆ ನಿರ್ಬಂಧ: ಟ್ಯಾಂಕರ್ ಮೇಲೆ ಇರಾನಿನ ಗನ್ ಬೋಟ್ ಗಳಿಂದ ಗುಂಡಿನ ದಾಳಿ! ಭಾರತೀಯ ಹಡಗುಗಳು ವಾಪಸ್!

ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ದ್ವಿಪೌರತ್ವಕ್ಕೆ ಸಂಬಂಧಿಸಿದ FIRಗೆ ಅಲಹಾಬಾದ್ ಹೈಕೋರ್ಟ್ ತಡೆ

'17 ಲಕ್ಷ ಸಂಬಳ ಕೊಡ್ತೀರಾ ಅಂತ ನನ್ನ ಮನಃಶಾಂತಿ ಕಳೆದುಕೊಳ್ಳಲು ಸಿದ್ಧನಿಲ್ಲ': ಬ್ಯಾಂಕ್ ಉದ್ಯೋಗ ತೊರೆದ IIT Delhi ಪದವಿಧರ!

ಇಂದು ರಾತ್ರಿ 8:30ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಭಾಷಣ; ತೀವ್ರ ಕುತೂಹಲ ಕೆರಳಿಸಿದ ಮೋದಿ ನಡೆ

ನಾವು, ಮುಸ್ಲಿಮರು ಯಾವತ್ತೂ ಸಹೋದರರು; ಅವರು ಕಾಂಗ್ರೆಸ್ ಬೆನ್ನಿಗೆ ನಿಂತಿದ್ದಾರೆ: ಗೃಹ ಸಚಿವ ಪರಮೇಶ್ವರ

SCROLL FOR NEXT