ಡೊನಾಲ್ಡ್ ಟ್ರಂಪ್ online desk
ವಿದೇಶ

ಅಮೆರಿಕಾದ ಪ್ರಮುಖ ಮಿತ್ರ, ಗೆಲುವಿನ ಸೂತ್ರ ತಿಳಿದ ರಾಷ್ಟ್ರ: ಇಸ್ರೇಲ್ ಕೊಂಡಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಇಸ್ರೇಲ್ ಧೈರ್ಯಶಾಲಿ, ದಿಟ್ಟ, ನಿಷ್ಠಾವಂತ ಮತ್ತು ಬುದ್ಧಿವಂತ ರಾಷ್ಟ್ರ. ಸಂಘರ್ಷ ಮತ್ತು ಒತ್ತಡದ ಕ್ಷಣದಲ್ಲಿ ತಮ್ಮ ನಿಜವಾದ ಬಣ್ಣವನ್ನು ತೋರಿಸಿದ ಇತರರಿಗಿಂತ ಭಿನ್ನವಾದ ರಾಷ್ಟ್ರವಾಗಿದೆ. ಆ ರಾಷ್ಟ್ರ ಸಂಕಷ್ಟದ ಸಮಯದಲ್ಲಿ ಕಠಿಣವಾಗಿ ಹೋರಾಡುತ್ತದೆ ಮತ್ತು ಗೆಲುವಿನ ಸೂತ್ರ ತಿಳಿದ ರಾಷ್ಟ್ರವಾಗಿದೆ.

ವಾಷಿಂಗ್ಟನ್: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ದೇಶವನ್ನು ಕೊಂಡಾಡಿದ್ದು, “ಗೆಲುವಿನ ಸೂತ್ರ ತಿಳಿದ ರಾಷ್ಟ್ರ” ಮತ್ತು “ಅಮೆರಿಕಾದ ಪ್ರಮುಖ ಮಿತ್ರ” ಎಂದು ವರ್ಣಿಸಿದ್ದಾರೆ.

ಇಸ್ರೇಲ್‌ ಕುರಿತು ಜಾಗತಿಕ ಮಟ್ಟದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ತನ್ನ ಭದ್ರತೆ ಮತ್ತು ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ಅದು ತೋರಿದ ಸಾಮರ್ಥ್ಯ ಗಮನಾರ್ಹವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ರೂತ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಜನರು ಇಸ್ರೇಲ್‌ ಬಗ್ಗೆ ಏನೇ ಯೋಚಿಸಿದರೂ, ಅದು ಗೆಲ್ಲುವುದು ಹೇಗೆ ಎನ್ನುವುದನ್ನು ಚೆನ್ನಾಗಿ ತಿಳಿದಿರುವ ರಾಷ್ಟ್ರವಾಗಿದೆ ಎಂದು ಕೊಂಡಾಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಗಳ ನಡುವೆಯೂ ಇಸ್ರೇಲ್ ತನ್ನ ಸ್ಥಿರತೆಯನ್ನು ಕಾಪಾಡಿಕೊಂಡಿದ್ದು, ಅಗತ್ಯವಾದಾಗ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜನರು ಇಸ್ರೇಲ್ ಅನ್ನು ಇಷ್ಟಪಡಲಿ ಅಥವಾ ಇಷ್ಟಪಡದಿರಲಿ, ಅವರು ಅಮೇರಿಕಾದ ವಿಶ್ವಾಸಾರ್ಹ ಮಿತ್ರ ರಾಷ್ಟ್ರ ಎಂದು ಸಾಬೀತುಪಡಿಸಿದ್ದಾರೆ. ಅವರು ಧೈರ್ಯಶಾಲಿ, ದಿಟ್ಟ, ನಿಷ್ಠಾವಂತ ಮತ್ತು ಬುದ್ಧಿವಂತರು. ಸಂಘರ್ಷ ಮತ್ತು ಒತ್ತಡದ ಕ್ಷಣದಲ್ಲಿ ತಮ್ಮ ನಿಜವಾದ ಬಣ್ಣವನ್ನು ತೋರಿಸಿದ ಇತರರಿಗಿಂತ ಭಿನ್ನವಾಗಿದೆ. ಸಂಕಷ್ಟದ ಸಮಯದಲ್ಲಿ ಕಠಿಣವಾಗಿ ಹೋರಾಡುತ್ತದೆ ಮತ್ತು ಹೇಗೆ ಗೆಲ್ಲಬೇಕೆಂದು ತಿಳಿದಿದೆ ಎಂದು ಹೇಳಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಬಂಧವು ದೀರ್ಘಕಾಲದಿಂದ ಬಲವಾಗಿ ಮುಂದುವರಿದಿದೆ. ರಕ್ಷಣಾ, ತಂತ್ರಜ್ಞಾನ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಈ ಎರಡೂ ರಾಷ್ಟ್ರಗಳು ಆಳವಾದ ಸಹಕಾರ ಹೊಂದಿವೆ. ಅಮೆರಿಕವು ಇಸ್ರೇಲ್‌ಗೆ ನೀಡುತ್ತಿರುವ ಸೇನಾ ನೆರವು ಮತ್ತು ರಾಜತಾಂತ್ರಿಕ ಬೆಂಬಲವು ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

ಟ್ರಂಪ್ ಆಡಳಿತದ ಅವಧಿಯಲ್ಲಿ ಈ ಸಂಬಂಧ ಇನ್ನಷ್ಟು ಗಾಢವಾಗಿದ್ದು, ಕೆಲವು ಪ್ರಮುಖ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದವು.

ವಿಶೇಷವಾಗಿ ಜೆರುಸೆಲಂ ಅನ್ನು ಇಸ್ರೇಲ್‌ನ ರಾಜಧಾನಿಯಾಗಿ ಮಾನ್ಯತೆ ನೀಡಿದ ಕ್ರಮವು ಅನೇಕ ದೇಶಗಳ ಗಮನ ಸೆಳೆದಿತ್ತು.

ಅದೇ ವೇಳೆ, ಇಸ್ರೇಲ್ ಮತ್ತು ಕೆಲವು ಅರಬ್ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಗೆ ಕಾರಣವಾದ ಅಬ್ರಹಾಂ ಒಪ್ಪಂದಕ್ಕೂ ಟ್ರಂಪ್ ಪ್ರಮುಖ ಪಾತ್ರವಹಿಸಿದ್ದರು. ಈ ಕ್ರಮಗಳು ಅಮೆರಿಕದ ವಿದೇಶಾಂಗ ನೀತಿಯಲ್ಲಿ ದೊಡ್ಡ ಬದಲಾವಣೆಗಳಾಗಿ ಪರಿಗಣಿಸಲ್ಪಟ್ಟವು. ಇತ್ತೀಚಿನ ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯಲ್ಲಿ ಟ್ರಂಪ್ ನೀಡಿರುವ ಈ ಹೇಳಿಕೆ ಮತ್ತೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಅಮೆರಿಕದ ವಿದೇಶಾಂಗ ನೀತಿಯಲ್ಲಿ ಇಸ್ರೇಲ್‌ಗೆ ನೀಡಲಾಗುತ್ತಿರುವ ಆದ್ಯತೆ ಕುರಿತು ಈಗಾಗಲೇ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಇದೀಗ ಟ್ರಂಪ್ ಅವರು ನೀಡಿರುವ ಈ ಹೇಳಿಕೆ ಮತ್ತಷ್ಟು ಚರ್ಚೆಗೆ ಎಡೆ ಮಾಡಿಕೊಡುವ ಸಾಧ್ಯತೆಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಕ್ಷ ಇಬ್ಭಾಗದ ಭೀತಿಯ ನಡುವೆ INDI ಮೈತ್ರಿಕೂಟ ಸಭೆಯಲ್ಲಿ ಭಾಗವಹಿಸಲಿರುವ ಮಮತಾ ಬ್ಯಾನರ್ಜಿ

ನಟಿಯನ್ನು ಯಾಕೆ ದೂಷಿಸುತ್ತೀರಾ? Peddi ಚಿತ್ರದಲ್ಲಿನ ಜಾಹ್ನವಿ ಉಡುಪು ವಿವಾದಕ್ಕೆ ನಟಿ ಆಶಿಕಾ ರಂಗನಾಥ್ ಗರಂ

ಲೈವ್ ಸ್ಟ್ರೀಮಿಂಗ್ ಮಾಡಲು ಬಂದ Drone ಗೂ ಕಾಟ ಕೊಟ್ಟ Rishabh Pant, ಸಿಬ್ಬಂದಿ ಕಕ್ಕಾಬಿಕ್ಕಿ! Video

India vs Afghanistan: 564 ರನ್ ಗೆ ಭಾರತ ಮೊದಲ ಇನ್ನಿಂಗ್ಸ್ ಡಿಕ್ಲೇರ್, 2ನೇ ದಿನದಾಟದಂತ್ಯಕ್ಕೆ ಆಫ್ಘಾನಿಸ್ತಾನ 113/5; ಸಂಕಷ್ಟದಲ್ಲಿ ಶಾಹಿದಿ ಪಡೆ!

ರಾಜತಾಂತ್ರಿಕ ಮಾತುಕತೆಯ ಮೂಲಕವೇ ಗಡಿ ವಿವಾದ ಬಗೆಹರಿಸಿಕೊಳ್ಳುತ್ತೇವೆ: ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್

SCROLL FOR NEXT