ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಟ್ಯಾಂಕರ್ ಗಳ ಮೇಲೆ ಇರಾನ್ ದಾಳಿ 
ವಿದೇಶ

ಹಡಗು ವಶಕ್ಕೆ ಪ್ರತೀಕಾರ: ಅಮೆರಿಕಾ ನೌಕಾಪಡೆ ಮೇಲೆ ಇರಾನ್ ಡ್ರೋನ್ ದಾಳಿ; ಸಂಘರ್ಷ ಉಲ್ಬಣ

ಒಮಾನ್ ಸಮುದ್ರ ಹಾಗೂ ಹಾರ್ಮುಜ್ ಜಲಸಂಧಿ ಸುತ್ತಲಿನ ಪ್ರದೇಶದಲ್ಲಿ ಅಮೆರಿಕಾ ನೌಕಾಪಡೆಯ ಯುದ್ಧ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ಡ್ರೋನ್‌ ದಾಳಿ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದೆ, ಅಮೆರಿಕಾ ಸೇನೆ ಇರಾನ್ ಧ್ವಜದ ಸರಕು ಹಡಗನ್ನು ವಶಪಡಿಸಿಕೊಂಡ ಬೆನ್ನಲ್ಲೇ ಇರಾನ್ ಡ್ರೋನ್ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.

ಓಮನ್ ಸಮುದ್ರ ಹಾಗೂ ಹಾರ್ಮುಜ್ ಜಲಸಂಧಿ ಸುತ್ತಲಿನ ಪ್ರದೇಶದಲ್ಲಿ ಅಮೆರಿಕಾ ನೌಕಾಪಡೆಯ ಯುದ್ಧ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ಡ್ರೋನ್‌ ದಾಳಿ ನಡೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ವರದಿಗಳ ಪ್ರಕಾರ, ಅಮೆರಿಕಾ ನೌಕಾಪಡೆ ಇತ್ತೀಚೆಗೆ ಇರಾನ್ ಹಡಗನ್ನು ತಡೆದು ಅದರ ಎಂಜಿನ್ ಭಾಗಕ್ಕೆ ದಾಳಿ ನಡೆಸಿ ವಶಪಡಿಸಿಕೊಂಡಿತ್ತು. ಈ ಕ್ರಮವನ್ನು ಇರಾನ್ “ಸಮುದ್ರ ದರೋಡೆ” ಎಂದು ಕರೆದಿದ್ದು, ತೀವ್ರ ಪ್ರತಿಕ್ರಿಯೆ ನೀಡುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಇರಾನ್ ಸೇನೆ ಡ್ರೋನ್ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.

ಇರಾನ್ ರೆವಲ್ಯೂಷನರಿ ಗಾರ್ಡ್ (IRGC) ಈ ದಾಳಿಯನ್ನು ಅಮೆರಿಕದ “ಪ್ರಚೋದನಾತ್ಮಕ ಕ್ರಮಕ್ಕೆ ಪ್ರತಿಕ್ರಿಯೆ” ಎಂದು ಹೇಳಿದೆ.

ನಮ್ಮ ಹಡಗನ್ನು ವಶಪಡಿಸಿಕೊಂಡಿರುವುದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂದು ಆರೋಪಿಸಿರುವ ಇರಾನ್, ಈ ರೀತಿಯ ಕ್ರಮನನ್ನು ಅಮೆರಿಕಾ ಮುಂದುವರೆಸಿದ್ದೇ ಆದರೆ, ಮತ್ತಷ್ಟು ತೀವ್ರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಅಮೆರಿಕಾ ಕಡೆಯಿಂದಲೂ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನ್ನ ನೌಕಾಪಡೆಗಳು ಎಚ್ಚರಿಕೆಯಲ್ಲಿ ಇವೆ ಎಂದು ತಿಳಿಸಿದೆ.

ಡ್ರೋನ್‌ಗಳನ್ನು ಬಹುಪಾಲು ನಿಷ್ಕ್ರಿಯಗೊಳಿಸಲಾಗಿದೆ ಎಂದು ಅಮೆರಿಕಾ ಮೂಲಗಳು ಹೇಳಿದ್ದರೂ, ಪೂರ್ಣ ಹಾನಿ ವಿವರಗಳು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಈ ಘಟನೆ ಹಾರ್ಮುಜ್ ಜಲಸಂಧಿಯಲ್ಲಿ ಈಗಾಗಲೇ ಅಸ್ಥಿರವಾಗಿದ್ದ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಈ ಪ್ರದೇಶವು ಜಗತ್ತಿನ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿದ್ದು, ಇಲ್ಲಿ ನಡೆಯುವ ಯಾವುದೇ ಸೇನಾ ಚಟುವಟಿಕೆಗಳು ನೇರವಾಗಿ ಜಾಗತಿಕ ಇಂಧನ ಮಾರುಕಟ್ಟೆಗೆ ಪರಿಣಾಮ ಬೀರುತ್ತವೆ.

ಇತ್ತೀಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಹಡಗುಗಳ ಮೇಲೆ ದಾಳಿ ಮತ್ತು ಸಾಗಣೆ ಅಡಚಣೆಗಳು ಹೆಚ್ಚಾಗಿದ್ದು, ಅನೇಕ ವಾಣಿಜ್ಯ ಹಡಗುಗಳು ಮಾರ್ಗ ಬದಲಾಯಿಸಬೇಕಾದ ಸ್ಥಿತಿ ಉಂಟಾಗಿದೆ. ಇದರಿಂದ ತೈಲ ಬೆಲೆ ಏರಿಕೆ ಹಾಗೂ ಸರಬರಾಜು ಅಸ್ಥಿರತೆ ಭೀತಿ ಹೆಚ್ಚಿದೆ.

ರಾಜತಾಂತ್ರಿಕ ವಲಯಗಳು ಈ ಬೆಳವಣಿಗೆಯನ್ನು ಅತ್ಯಂತ ಅಪಾಯಕಾರಿ ಹಂತ ಎಂದು ವರ್ಣಿಸುತ್ತಿದ್ದು, ಸಣ್ಣ ಸೇನಾ ಕಾರ್ಯಾಚರಣೆ ಕೂಡ ದೊಡ್ಡ ಸಂಘರ್ಷಕ್ಕೆ ತಿರುಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿವೆ.

ಇರಾನ್-ಅಮೆರಿಕಾ ನಡುವೆ ಈಗಾಗಲೇ ಶಾಂತಿ ಮಾತುಕತೆಗಳು ಅಸ್ಥಿರವಾಗಿದ್ದು, ಇತ್ತೀಚಿನ ಘಟನೆಗಳು ಪ್ರಯತ್ನಗಳನ್ನೂ ಕೂಡ ಸಂಪೂರ್ಣ ಕುಸಿಯುವಂತೆ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರೀಕ್ಷೆ ಅಕ್ರಮ; ಜಾರ್ಖಂಡ್ ಸಿಎಂ ಸೊರೇನ್, ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಪ್ರತಿಕೃತಿ ದಹಿಸಿ JPSC-JSSC ಆಕಾಂಕ್ಷಿಗಳ ಪ್ರತಿಭಟನೆ

NLSIU ಘಟಿಕೋತ್ಸವ: NALSAR ಮಾದರಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳಿಗೆ ಆಹ್ವಾನ ವಿರೋಧಿಸಿದ ಬೆಂಗಳೂರು ಉನ್ನತ ಕಾನೂನು ಕಾಲೇಜು!

ಪಂಜಾಬ್: ತಪ್ಪಿದ ಭಾರಿ ಅನಾಹುತ; ಉಗ್ರ ದಾಳಿ ಸಂಚು ವಿಫಲ, 690 ಗ್ರಾಂ IED ಪೊಲೀಸ್ ವಶಕ್ಕೆ

SIR ಪ್ರಕ್ರಿಯೆ ಯಶಸ್ಸು: ಬಿಹಾರ ಚುನಾವಣೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜಪಾನ್‌ಗಳನ್ನು ಮೀರಿಸಿದೆ: CEC ಜ್ಞಾನೇಶ್ ಕುಮಾರ್

ಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video