ಅಮೆರಿಕಾ-ಇರಾನ್ ಯುದ್ಧ 
ವಿದೇಶ

US-Iran war: ಇರಾನ್ ಹಡಗು ವಶಕ್ಕೆ ಪಡೆದ ಅಮೆರಿಕಾ; ಪ್ರತೀಕಾರ ತೀರಿಸಿಕೊಳ್ಳುತ್ತೇವೆಂದ ಟೆಹ್ರಾನ್, ಸಂಘರ್ಷ ಮತ್ತೆ ಉಲ್ಬಣ

ವರದಿಗಳ ಪ್ರಕಾರ, “ಟೌಸ್ಕಾ” ಎಂಬ ಇರಾನ್ ಹಡಗು ಓಮನ್ ಸಮುದ್ರದ ಬಳಿ ಅಮೆರಿಕಾ ನೌಕಾಪಡೆಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿತು ಎಂದು ಅಮೆರಿಕಾ ಆರೋಪಿಸಿದೆ.

ಅಮೆರಿಕಾ ಸೇನೆ ಇರಾನ್ ಧ್ವಜದ ಸರಕು ಹಡಗೊಂದನ್ನು ವಶಪಡಿಸಿಕೊಂಡಿದ್ದು, ಇದರ ಬೆನ್ನಲ್ಲೇ ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೆ ಉಲ್ಬಂಣಗೊಂಡಿದೆ.

ಈ ಘಟನೆ ಪ್ರಗತಿಯಲ್ಲಿರುವ ಶಾಂತಿ ಒಪ್ಪಂದವನ್ನು ಸಂಪೂರ್ಣ ಕುಸಿತಗೊಳ್ಳುವ ಸಾಧ್ಯತೆಗಳಿದ್ದು, ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

ವರದಿಗಳ ಪ್ರಕಾರ, “ಟೌಸ್ಕಾ” ಎಂಬ ಇರಾನ್ ಹಡಗು ಓಮನ್ ಸಮುದ್ರದ ಬಳಿ ಅಮೆರಿಕಾ ನೌಕಾಪಡೆಯ ಎಚ್ಚರಿಕೆಗಳನ್ನು ನಿರ್ಲಕ್ಷಿಸಿತು ಎಂದು ಅಮೆರಿಕಾ ಆರೋಪಿಸಿದೆ.

ಇದರ ನಂತರ ಅಮೆರಿಕಾ ನೌಕಾಪಡೆಯ ಡಿಸ್ಟ್ರಾಯರ್ ಹಡಗು ಅದರ ಎಂಜಿನ್ ಭಾಗಕ್ಕೆ ಗುಂಡು ಹಾರಿಸಿ ಹಡಗನ್ನು ನಿಷ್ಕ್ರಿಯಗೊಳಿಸಿದೆ. ನಂತರ ಅಮೆರಿಕಾ ನೌಕಾ ಪಡೆ ಹಡಗನ್ನು ವಶಕ್ಕೆ ಪಡೆದು ಅದರೊಳಗಿನ ಸರಕುಗಳನ್ನು ಪರಿಶೀಲನೆ ನಡೆಸಿದೆ.

ಈ ಸಂಪೂರ್ಣ ಕಾರ್ಯಾಚರಣೆಯ ವಿಡಿಯೋವನ್ನು ಅಮೆರಿಕಾ ಸೆಂಟ್ರಲ್ ಕಮಾಂಡ್ ಬಿಡುಗಡೆ ಮಾಡಿದ್ದು, ಹಲವು ಗಂಟೆಗಳ ಎಚ್ಚರಿಕೆಗಳ ನಂತರ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ಇರಾನ್ ಸರ್ಕಾರ, ಈ ಕ್ರಮವನ್ನು ನೇರವಾಗಿ “ಸಮುದ್ರ ದರೋಡೆ” ಎಂದು ಕರೆದಿದೆ.

ಇರಾನ್ ಸೇನೆ ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದು, “ಅಮೆರಿಕದ ಈ ದಾಳಿಗೆ ನಾವು ಶೀಘ್ರದಲ್ಲೇ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ” ಎಂದು ಘೋಷಿಸಿದೆ. ಈ ಹೇಳಿಕೆಗಳಿಂದಾಗಿ ಸೇನಾ ಸಂಘರ್ಷದ ಭೀತಿ ಮತ್ತಷ್ಟು ಹೆಚ್ಚಿದೆ.

ಟ್ರೆಹ್ರಾನ್ ರಾಜಕೀಯ ವಲಯವೂ ಕಠಿಣ ನಿಲುವು ತೆಗೆದುಕೊಂಡಿದ್ದು, ಅಧ್ಯಕ್ಷ ಮಸೂದ್ ಪೆಜೆಷ್ಕಿಯನ್ ಅಮೆರಿಕದ ಕ್ರಮವನ್ನು ಉದ್ದೇಶಪೂರ್ವಕ ಪ್ರಚೋದನೆ ಎಂದು ಟೀಕಿಸಿದ್ದಾರೆ.

ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಅಮೆರಿಕದ ಈ ನಡೆ ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಧಕ್ಕೆ ತರುತ್ತಿದೆ ಎಂದು ತಿಳಿಸಿದ್ದಾರೆ.

ಈ ಘಟನೆ ನಡೆಯುತ್ತಿರುವುದು ಅತ್ಯಂತ ಸೂಕ್ಷ್ಮ ಸಮಯದಲ್ಲಿ. ಏಕೆಂದರೆ ಕೆಲವೇ ದಿನಗಳಲ್ಲಿ ಇರಾನ್-ಅಮೆರಿಕಾ ಶಾಂತಿ ಒಪ್ಪಂದದ ಅವಧಿ ಮುಗಿಯಲಿದ್ದು, ಹೊಸ ಮಾತುಕತೆಗಳ ಬಗ್ಗೆ ಇನ್ನೂ ಸ್ಪಷ್ಟತೆ ಮಾಹಿತಿಗಳು ಲಭ್ಯವಾಗಿಲ್ಲ.

ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಎರಡನೇ ಹಂತದ ಮಾತುಕತೆ ಕೂಡ ಅನಿಶ್ಚಿತವಾಗಿದೆ. ಇದರಿಂದ ಅಮೆರಿಕಾ-ಇರಾನ್ ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಸಿಗುವ ಸಾಧ್ಯತೆಗಳು ಕುಗ್ಗುವಂತಾಗಿದೆ.

ಇದೇ ವೇಳೆ ಹಾರ್ಮಜ್ ಜಲಸಂಧಿಯಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಜಗತ್ತಿನ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಈ ಪ್ರದೇಶದಲ್ಲಿ ಇರಾನ್ ಕಠಿಣ ನಿಯಂತ್ರಣ ಹೇರಿದೆ. ಅನೇಕ ಹಡಗುಗಳು ಸಾಗಲು ಸಾಧ್ಯವಾಗದೆ ಹಿಂದಿರುಗುತ್ತಿವೆ. ಇದರಿಂದ ಜಾಗತಿಕ ತೈಲ ಪೂರೈಕೆ ಸರಪಳಿಗೆ ದೊಡ್ಡ ಹೊಡೆತ ಬಿದ್ದಿದೆ.

ಇತ್ತೀಚಿನ ದಿನಗಳಲ್ಲಿ ಇರಾನ್ ಕೆಲವು ವಾಣಿಜ್ಯ ಹಡಗುಗಳ ಮೇಲೆ ಗುಂಡು ಹಾರಿಸಿರುವ ಘಟನೆಗಳೂ ವರದಿಯಾಗಿವೆ. ಇದರಿಂದ ಸಮುದ್ರ ಮಾರ್ಗದ ಸುರಕ್ಷತೆ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ಹೆಚ್ಚಾಗಿದೆ.

ಫ್ರಾನ್ಸ್ ನಿರ್ವಹಣೆಯ ಒಂದು ಹಡಗು ಕೂಡ ಹಾನಿಗೊಳಗಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದೆ.

ಇರಾನ್ ನಾಯಕರು ತಮ್ಮ ನಿಲುವನ್ನು ಮತ್ತಷ್ಟು ಕಠಿಣಗೊಳಿಸಿದ್ದು, ಅಮೆರಿಕಾ ತನ್ನ ತೈಲ ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವವರೆಗೆ ಹಾರ್ಮುಜ್ ಮೂಲಕ ಸಾಗಣೆ ಮೇಲಿನ ನಿರ್ಬಂಧ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಇದರಿಂದ ಜಾಗತಿಕ ತೈಲ ಬೆಲೆ ಏರಿಕೆ ಹಾಗೂ ಆರ್ಥಿಕ ಅಸ್ಥಿರತೆ ಹೆಚ್ಚುವ ಸಾಧ್ಯತೆ ಇದೆ.

ಒಟ್ಟಾರೆ, ಅಮೆರಿಕಾ-ಇರಾನ್ ಸಂಘರ್ಷವು ಈಗ ರಾಜತಾಂತ್ರಿಕ ಹಂತದಿಂದ ಸಮುದ್ರ ಸೇನಾ ಉದ್ವಿಗ್ನತೆಯತ್ತ ತಿರುಗುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಹೆಚ್ಚಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇನ್ಮುಂದೆ Mr Nice Guy ಇರೊಲ್ಲ.. ಕಿಲ್ಲಿಂಗ್ ಮಷಿನ್ ಕೊನೆಗೊಳ್ಳುವ ಸಮಯ ಬಂದಿದೆ: ಇರಾನ್ ಗೆ ಮತ್ತೆ Donald Trump ಬೆದರಿಕೆ!

ಕಾಶ್ಮೀರದಲ್ಲಿ ಅಮೆರಿಕಾದ ಪ್ರಜೆ ಬಂಧನ: ಅಲ್ಲಿ ಆತ ಮಾಡ್ತಿದಿದ್ದೇನು?

ದೀದಿಗೆ ಶಾಕ್: ಬಾಂಗ್ಲಾದ ನೂತನ ರಾಯಭಾರಿಯಾಗಿ TMC ಮಾಜಿ ನಾಯಕ ದಿನೇಶ್ ತ್ರಿವೇದಿ ನೇಮಕ?

IPL 2026: ಸಿಕ್ಸರ್ ಗಳ ಸುರಿಮಳೆ, ಶ್ರೇಯಸ್ ಅಯ್ಯರ್ ಪಡೆಯ ಬ್ಯಾಟಿಂಗ್ ಅಬ್ಬರಕ್ಕೆ ಹಲವು ದಾಖಲೆಗಳು ಪತನ!

IPL 2026: ಮುಂದುವರೆದ PBKS ಜೈತ್ರ ಯಾತ್ರೆ, LSG ವಿರುದ್ಧ 54 ರನ್ ಗಳ ಭರ್ಜರಿ ಜಯ

SCROLL FOR NEXT