ಹಾರ್ಮುಜ್ ಜಲಸಂಧಿ 
ವಿದೇಶ

ಅಮೆರಿಕ ದಿಗ್ಬಂಧನ ಧಿಕ್ಕರಿಸಿ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಸಂಗ್ರಹ; ಟ್ರಂಪ್'ಗೆ ಟೆಹ್ರಾನ್ ಡಿಚ್ಚಿ

ಹಾರ್ಮುಜ್ ಜಲಸಂಧಿಯ ಮೂಲಕ ಸರಕು ಸಾಗಣೆಗೆ ವಿಧಿಸುತ್ತಿರುವ ಸುಂಕದಿಂದ ಇರಾನ್ ಮೊದಲ ಆದಾಯವನ್ನು ಪಡೆದುಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.

ಟೆಹ್ರಾನ್: ವಿಶ್ವದ ದೊಡ್ಡಣ್ಣ ಅಮೆರಿಕದ ದಿಗ್ಬಂಧನವನ್ನು ಧಿಕ್ಕರಿಸಿ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಟೋಲ್ ಸಂಗ್ರಹಿಸಲು ಆರಂಭಿಸಿದೆ.

ಹಾರ್ಮುಜ್ ಜಲಸಂಧಿಯ ಮೂಲಕ ಸರಕು ಸಾಗಣೆಗೆ ವಿಧಿಸುತ್ತಿರುವ ಸುಂಕದಿಂದ ಇರಾನ್ ಮೊದಲ ಆದಾಯವನ್ನು ಪಡೆದುಕೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ,

ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಅಮೆರಿಕ-ಇಸ್ರೇಲಿ ಜಂಟಿಯಾಗಿ ನಡೆಸುತ್ತಿರುವ ಯುದ್ಧದಿಂದ ಇಡೀ ಜಗತ್ತಿನ ಆರ್ಥಿಕತೆ ಜರ್ಜರಿತಗೊಳ್ಳುತ್ತಿದೆ. ವೈಮಾನಿಕ ಇಂಧನ ಕೊರತೆ ಮತ್ತು ಬೆಲೆ ಹೆಚ್ಚಳದಿಂದ ವಿಮಾನಯಾನ ಸಂಸ್ಥೆಗಳು ವಿಮಾನಗಳ ಕಾರ್ಯಾಚರಣಯನ್ನೇ ರದ್ದುಗೊಳಿಸಿವೆ.

ತನ್ನ ಬಂದರುಗಳ ಮೇಲೆ ನೌಕಾ ದಿಗ್ಬಂಧನವನ್ನು ಮುಂದುವರೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಸ್ವಲ್ಪ ಸಮಯಲ್ಲೇ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಗೆ ಬಂದ್ ಮಾಡಿದೆ. ಅಲ್ಲದೆ ದಿಗ್ಬಂಧನ ತೆರವುಗೊಳಿಸುವವರೆಗೆ ಅನುಮೋದಿತ ಹಡಗುಗಳನ್ನು ಹೊರತುಪಡಿಸಿ ಉಳಿದೆಲ್ಲದಕ್ಕೂ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ.

ಇದೀಗ ಟ್ರಂಪ್ ಗೆ ಮತ್ತೊಂದು ಡಿಚ್ಚಿ ನೀಡಿರುವ ಟೆಹ್ರಾನ್, ಹಾರ್ಮುಜ್ ಅನ್ನು ದಾಟಲು ಬಯಸುವ ಹಡಗುಗಳ ಮೇಲೆ ವಿಧಿಸುತ್ತಿರುವ ಸುಂಕದಿಂದ ಇರಾನ್ ತನ್ನ ಮೊದಲ ಆದಾಯವನ್ನು ಪಡೆದುಕೊಂಡಿದೆ ಎಂದು ಗಾಲಿಬಾಫ್‌ನ ಉಪ, ಹಮೀದ್ರೆಜ್ ಹಾಜಿಬಾಬೆಯ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶ್ವೇತಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಕ್ಸಿ ಜಿನ್‌ಪಿಂಗ್‌ ಜೊತೆಗಿನ ಹಳೆಯ ನಂಟು ಸ್ಮರಿಸಿ, ‘ನಮ್ಮದು ನಿಜಕ್ಕೂ ಅದ್ಭುತ ಸ್ನೇಹ’ ಎಂದ ಟ್ರಂಪ್‌..!

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

'ಎನ್‌ಕೌಂಟರ್'ನಲ್ಲಿ ನನ್ನನ್ನು ಕೊಲ್ಲಬಹುದು: ಜೀವ ಭಯದಲ್ಲಿ ಸೋನಂ ವಾಂಗ್‌ಚುಕ್!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್

ಲೀವರ್ ಕ್ಯಾನ್ಸರ್ ಗೆ 'ವೆಲ್ ಕಮ್' ಖ್ಯಾತಿಯ ಹಿರಿಯ ಬಾಲಿವುಡ್ ನಟ ಮುಷ್ತಾಕ್ ಖಾನ್ ಬಲಿ!