ಆಸ್ಟ್ರಿಯಾ ಅಧ್ಯಕ್ಷರು ಮತ್ತು ಡೊನಾಲ್ಡ್ ಟ್ರಂಪ್(ಸಂಗ್ರಹ ಚಿತ್ರ) 
ವಿದೇಶ

'ಅಧಿಕಾರದಲ್ಲಿರಲು ಸ್ವೇಚ್ಛಾಚಾರಿಗಳು ಸತ್ಯದ ಮೇಲೆ ದಾಳಿ ಮಾಡುತ್ತಾರೆ': ಡೊನಾಲ್ಡ್ ಟ್ರಂಪ್ ವಿರುದ್ಧ ಆಸ್ಟ್ರಿಯಾ ಅಧ್ಯಕ್ಷ ಟ್ರೋಲ್

ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆ, ಹೆಚ್ಚು ಸುದ್ದಿಯಾಗುವ ನಕಲಿ ಸುದ್ದಿಗಳನ್ನು ಸೃಷ್ಟಿಸಲು ಇಂದಿನ ದಿನಗಳಲ್ಲಿ ಸಾಧ್ಯವಾಗುತ್ತಿದೆ. ಇಂದು ಸಮಾಜಕ್ಕೆ ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳ ಅಗತ್ಯ “ಹೆಚ್ಚಾಗಲಿದೆ” ಎಂದರು.

ವಿಯನ್ನಾ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಪರೋಕ್ಷವಾಗಿ ಟೀಕೆ ಮಾಡಿದ ಆಸ್ಟ್ರಿಯಾದ ಅಧ್ಯಕ್ಷ ಅಲೆಕ್ಸಾಂಡರ್ ವಾನ್ ಡರ್ ಬೆಲ್ಲೆನ್, ತಪ್ಪುಮಾಹಿತಿ ಹರಡುತ್ತಿರುವ ಇಂದಿನ ಯುಗದಲ್ಲಿ ಕಂಪ್ಯೂಟರ್ ಹೊಂದಿರುವ ಯಾರಾದರೂ ತಮ್ಮನ್ನು ಯೇಸು ಅಥವಾ ವೈದ್ಯರಂತೆ ತೋರಿಸಿಕೊಳ್ಳಬಹುದು, ಜನರು ಸರಿಯೇ ತಪ್ಪೇ ಎಂಬುದನ್ನು ಗುರುತಿಸಲಾಗದಂತೆ ಮಾಡುವುದೇ ಸ್ವೇಚ್ಛಾಚಾರಿಗಳ ಮೂಲ ರಾಜಕೀಯ ತಂತ್ರ ಎಂದು ಹೇಳಿದ್ದಾರೆ.

ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆ, ಹೆಚ್ಚು ಸುದ್ದಿಯಾಗುವ ನಕಲಿ ಸುದ್ದಿಗಳನ್ನು ಸೃಷ್ಟಿಸಲು ಇಂದಿನ ದಿನಗಳಲ್ಲಿ ಸಾಧ್ಯವಾಗುತ್ತಿದೆ. ಇಂದು ಸಮಾಜಕ್ಕೆ ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳ ಅಗತ್ಯ “ಹೆಚ್ಚಾಗಲಿದೆ” ಎಂದು ವಾನ್ ಡರ್ ಬೆಲ್ಲೆನ್ ವಿಶ್ವದ ಪ್ರಮುಖ ಸುದ್ದಿ ಸಂಸ್ಥೆಗಳ ಅಧಿಕಾರಿಗಳ ಪ್ರತಿನಿಧಿ ತಂಡಕ್ಕೆ ಹೇಳಿದರು.

82 ವರ್ಷದ ವಾನ್ ಡರ್ ಬೆಲ್ಲೆನ್, ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದು, ಎಡಪಂಥೀಯ ಗ್ರೀನ್ಸ್ ಪಕ್ಷದ ಮಾಜಿ ನಾಯಕರು. ಅವರು ಬಲಪಂಥೀಯ ಜನಪ್ರಿಯತೆಯ ವಿರುದ್ಧ ಟೀಕಾಕಾರರಾಗಿದ್ದಾರೆ, ಆಸ್ಟ್ರಿಯಾದಲ್ಲಿ ಪ್ರಸ್ತುತ ಸರ್ಕಾರವನ್ನು ಅತಿ ಬಲಪಂಥೀಯ ಫ್ರೀಡಂ ಪಕ್ಷ ಮುನ್ನಡೆಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂಡೋನೇಷ್ಯಾ ಸಂಸತ್ತಿನಲ್ಲಿ ಒಡಿಶಾದ ಮಾಜಿ ಸಿಎಂ ಬಿಜು ಪಟ್ನಾಯಕ್ ಪರಾಕ್ರಮ ಬಣ್ಣಿಸಿದ ಪ್ರಧಾನಿ ಮೋದಿ!

E20 ಪೆಟ್ರೋಲ್‌ನಿಂದಾಗಿ ಎಂಜಿನ್‌ ಹಾಳಾದ ಒಂದೇ ಒಂದು ಕಾರನ್ನು ತೋರಿಸಿ: ಗಡ್ಕರಿ ಬಹಿರಂಗ ಸವಾಲು

ಭಯಾನಕ ಅಪಘಾತ: ಫುಟ್​ಪಾತ್​ನಲ್ಲಿ ಕುಳಿತಿದ್ದ ಕುಟುಂಬದ ಮೇಲೆ ಹರಿದ ಟಿಪ್ಪರ್; ತಂದೆ, ಮೂವರು ಮಕ್ಕಳು ಸ್ಥಳದಲ್ಲೇ ಸಾವು - Video

ವಯನಾಡು ಭೂಕುಸಿತ 'ಮಾನವ ನಿರ್ಮಿತ'; ಮಣ್ಣು ತೆರವುಗೊಳಿಸಲು ಗುತ್ತಿಗೆದಾರರಿಗೆ ಸರ್ಕಾರ ಸೂಚಿಸಿದ್ರೂ ನಿರ್ಲಕ್ಷ್ಯ!

ರಾಜ್ಯದಲ್ಲಿ SIR ತಾತ್ಕಾಲಿಕ ತಡೆಗೆ ಎನ್‌ಡಿಎ ಪಟ್ಟು; ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು!