ಎಫ್ ಬಿಐ ಮುಖ್ಯಸ್ಥ ಕಾಶ್ ಪಟೇಲ್ 
ವಿದೇಶ

ಸಾರ್ವಜನಿಕ ಮೂತ್ರ ವಿಸರ್ಜನೆ; FBI ಮುಖ್ಯಸ್ಥ Kash Patel ಬಂಧನ!, ಮಾನನಷ್ಟ ಮೊಕದ್ದಮೆ?

ಮದ್ಯಪಾನ ಸಂಬಂಧಿತ ಪ್ರಕರಣಗಳಲ್ಲಿ ತಾವು ಬಂಧನಕ್ಕೀಡಾದ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಏಪ್ರಿಲ್ 24, 2026 ರಂದು 'ದಿ ಇಂಟರ್‌ಸೆಪ್ಟ್' (The Intercept) ವರದಿ ಮಾಡಿದೆ.

ವಾಷಿಂಗ್ಟನ್: ಅಮೆರಿಕದ ಹಾಲಿ FBI ನಿರ್ದೇಶಕ ಕಾಶ್ ಪಟೇಲ್ ರನ್ನು ಒಂದಲ್ಲ ಎರಡು ಬಾರಿ ಪೊಲೀಸರು ಬಂಧಿಸಿದ್ದ ವಿಚಾರ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಕಾಶ್ ಪಟೇಲ್ ತಮ್ಮ ಯೌವನದಲ್ಲಿ ನಡೆದ ಎರಡು ಮದ್ಯಪಾನ ಸಂಬಂಧಿತ ಪ್ರಕರಣಗಳಲ್ಲಿ ತಾವು ಬಂಧನಕ್ಕೀಡಾದ ಬಗ್ಗೆ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಏಪ್ರಿಲ್ 24, 2026 ರಂದು 'ದಿ ಇಂಟರ್‌ಸೆಪ್ಟ್' (The Intercept) ವರದಿ ಮಾಡಿದೆ. ಈ ವಿಷಯಗಳು ಅವರು 2005 ರಲ್ಲಿ ಫ್ಲೋರಿಡಾ ಬಾರ್ ಅಸೋಸಿಯೇಷನ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಬಹಿರಂಗವಾಗಿವೆ ಎನ್ನಲಾಗಿದೆ.

ವರದಿಯಲ್ಲಿರುವಂತೆ 2005ರಲ್ಲಿ ಪೇಸ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದಾಗ, ಕಾಶ್ ಪಟೇಲ್ ನ್ಯೂಯಾರ್ಕ್ ನಗರದಲ್ಲಿ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಮನೆಗೆ ಹಿಂದಿರುಗುವಾಗ ಸಾರ್ವಜನಿಕವಾಗಿ ಮೂತ್ರ ವಿಸರ್ಜಿಸಲು ಪ್ರಯತ್ನಿಸಿದ ಕಾರಣಕ್ಕೆ ಪೊಲೀಸರು ಅವರನ್ನು ಬಂಧಿಸಿದ್ದರು ಎನ್ನಲಾಗಿದೆ.

ಮತ್ತೊಂದು ಪ್ರಕರಣದಲ್ಲಿ 2001ರಲ್ಲಿ ರಿಚ್‌ಮಂಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ, ಕಾಲೇಜು ಬಾಸ್ಕೆಟ್‌ಬಾಲ್ ಪಂದ್ಯವೊಂದರಿಂದ ಹೊರಹಾಕಲ್ಪಟ್ಟ ನಂತರ ಅಪ್ರಾಪ್ತ ವಯಸ್ಸಿನಲ್ಲಿ ಸಾರ್ವಜನಿಕ ಮದ್ಯಪಾನ ಮಾಡಿದ್ದಕ್ಕೆ ಅವರನ್ನು ಬಂಧಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹಳೇ ಘಟನೆಗಳು ಈಗೇಕೆ ವೈರಲ್?

ಈ ಹಳೆಯ ಘಟನೆಗಳು ಈಗ ಮತ್ತೆ ಮುನ್ನೆಲೆಗೆ ಬರಲು ಮುಖ್ಯ ಕಾರಣವೆಂದರೆ, ಪಟೇಲ್ ಅವರ ಪ್ರಸ್ತುತ ವರ್ತನೆಯ ಬಗ್ಗೆ ಕೇಳಿಬರುತ್ತಿರುವ ಆರೋಪಗಳು. 'ದಿ ಅಟ್ಲಾಂಟಿಕ್' ವರದಿಯ ಪ್ರಕಾರ, ಪಟೇಲ್ ಅವರ ಅತಿಯಾದ ಕುಡಿತ ಮತ್ತು ಕೆಲಸದ ಸಮಯದಲ್ಲಿ ಅನಗತ್ಯ ಗೈರುಹಾಜರಿಯು FBI ಮತ್ತು ನ್ಯಾಯಾಂಗ ಇಲಾಖೆಯ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ ಎಂದು ಹೇಳಲಾಗಿದೆ.

ಮಾನನಷ್ಟ ಮೊಕದ್ದಮೆ ಹೂಡಿದ ಕಾಶ್ ಪಟೇಲ್

ಆದರೆ, ಕಾಶ್ ಪಟೇಲ್ ಈ ಎಲ್ಲಾ ಇತ್ತೀಚಿನ ಆರೋಪಗಳನ್ನು ನಿರಾಕರಿಸಿದ್ದು, ಮತ್ತು 'ದಿ ಅಟ್ಲಾಂಟಿಕ್' ವಿರುದ್ಧ 250 ಮಿಲಿಯನ್ ಡಾಲರ್ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅಂತೆಯೇ ಶ್ವೇತಭವನವು ಪಟೇಲ್ ಅವರ ಮೇಲೆ ತಮಗೆ ಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ, ಪಟೇಲ್, "ನಾನು ಕೆಲಸದ ಸಮಯದಲ್ಲಿ ಎಂದಿಗೂ ಕುಡಿದಿಲ್ಲ, ಮತ್ತು ಅದಕ್ಕಾಗಿಯೇ ನಾವು $250 ಮಿಲಿಯನ್ ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ. ಮತ್ತು ನಿಮ್ಮಲ್ಲಿ ಯಾರಾದರೂ ಭಾಗವಹಿಸಲು ಬಯಸಿದರೆ, ಅದನ್ನು ಸಲ್ಲಿಸಿ. ನಾನು ನಿಮ್ಮನ್ನು ನ್ಯಾಯಾಲಯದಲ್ಲಿ ಭೇಟಿಯಾಗುತ್ತೇನೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅವರು ಸೋಲುತ್ತಲೇ ಇದ್ದಾರೆ': ಕೇಸ್ ಹಾಕುವುದಾಗಿ ಮಮತಾ ಬ್ಯಾನರ್ಜಿ ಬೆದರಿಕೆ; ಅಮಿತ್ ಶಾ ತಿರುಗೇಟು

ಮದುವೆ ಹೆಸರಲ್ಲಿ ಟೆಕ್ಕಿಗೆ 10 ಕೋಟಿ ರೂ. ವಂಚನೆ: ನಟಿ ಆಶು ರೆಡ್ಡಿ ವಿರುದ್ಧ ದೂರು ದಾಖಲು!

ಇರಾನ್ ಮಾತುಕತೆಗಳಿಗೆ ರಾಯಭಾರಿಗಳನ್ನು ಕಳುಹಿಸುವುದನ್ನು ರದ್ದುಗೊಳಿಸಿದ್ದೇನೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

BJP ಸೇರಿದ 7 ಮಂದಿ ಬಂಡಾಯ ಸಂಸದರನ್ನು ಅನರ್ಹಗೊಳಿಸಿ: ಉಪರಾಷ್ಟ್ರಪತಿಗಳಿಗೆ AAP ಮನವಿ

ಅನಾರೋಗ್ಯ ಪೀಡಿತ ಪ್ರಯಾಣಿಕರಿಗೆ ಸೀಟು ನಿರಾಕರಣೆ: KSRTC ಬಸ್‌ಗೆ 30,000 ರೂ. ದಂಡ: ವರದಿ

SCROLL FOR NEXT