ಡೊನಾಲ್ಡ್ ಟ್ರಂಪ್ 
ವಿದೇಶ

'ನಾನು ಅತ್ಯಾಚಾರಿ, ಶಿಶುಕಾಮಿ ಅಲ್ಲ': 'ಶೂಟರ್‌ನ ಪ್ರಣಾಳಿಕೆ ಓದಿದ್ದಕ್ಕೆ' ವರದಿಗಾರನ ವಿರುದ್ಧ ಡೊನಾಲ್ಡ್ ಟ್ರಂಪ್ ವಾಗ್ದಾಳಿ

ವರದಿಗಾರರ ಸಂಘದ ಭೋಜನಕೂಟದಲ್ಲಿ ಟ್ರಂಪ್ ಹಾಜರಿದ್ದಾಗ, ತೋಮಸ್ ಅಲೆನ್ ಎಂಬಾತ ಹಲವಾರು ಬಂದೂಕುಗಳು ಮತ್ತು ಚಾಕುಗಳನ್ನು ಹಿಡಿದು ಭದ್ರತಾ ಚೆಕ್‌ಪಾಯಿಂಟ್ ಅನ್ನು ಭೇದಿಸಿ ಒಳನುಗ್ಗಲು ಪ್ರಯತ್ನಿಸಿದನು.

ವಾಷಿಂಗ್ಟನ್‌: ಡೊನಾಲ್ಡ್ ಟ್ರಂಪ್ ಅವರು ಕೋಲ್ ಅಲೆನ್ ಎಂಬ ವ್ಯಕ್ತಿ ಬರೆದಿದ್ದಾರೆಂದು ಹೇಳಲಾದ ಪ್ರಣಾಳಿಕೆಯ ಭಾಗಗಳನ್ನು ಉಲ್ಲೇಖಿಸಿದ್ದಕ್ಕಾಗಿ ವರದಿಗಾರನನ್ನು ಟೀಕಿಸಿದ್ದಾರೆ.

ಈ ವ್ಯಕ್ತಿ ಶನಿವಾರ ರಾತ್ರಿ ಶ್ವೇತಭವನದ ವರದಿಗಾರರ ವಾರ್ಷಿಕ ಭೋಜನಕೂಟದ ವೇಲೆ ಹೋಟೆಲ್ ಹಿಲ್ಟನ್‌ನಲ್ಲಿ ಗುಂಡಿನ ದಾಳಿ ನಡೆಸಿದ ಬಂಧೂಕುಧಾರಿಯು ಪ್ರವೇಶಿಸಲು ಪ್ರಯತ್ನಿಸಿದ್ದ ಎಂದು ಶಂಕಿಸಲಾಗಿದೆ. ಶಂಕಿತನು 'ಕ್ರಿಶ್ಚಿಯನ್ ಧರ್ಮದ ವಿರೋಧಿ'. ಮಾನಸಿಕ ಅಸ್ವಸ್ಥ ಮತ್ತು ಆತ ಬಹಳಷ್ಟು ದ್ವೇಷವನ್ನು ಹೊಂದಿದ್ದ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

ಶನಿವಾರ ರಾತ್ರಿ ಶ್ವೇತಭವನದ ವರದಿಗಾರರ ಸಂಘದ ಭೋಜನಕೂಟದಲ್ಲಿ ಟ್ರಂಪ್ ಹಾಜರಿದ್ದಾಗ, ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ತೋಮಸ್ ಅಲೆನ್ ಎಂಬಾತ ಹಲವಾರು ಬಂದೂಕುಗಳು ಮತ್ತು ಚಾಕುಗಳನ್ನು ಹಿಡಿದು ಭದ್ರತಾ ಚೆಕ್‌ಪಾಯಿಂಟ್ ಅನ್ನು ಭೇದಿಸಿ ಒಳನುಗ್ಗಲು ಪ್ರಯತ್ನಿಸಿದನು. ಕಾರ್ಯಕ್ರಮ ನಡೆಯುತ್ತಿದ್ದ ಬಾಲ್ ರೂಂನಿಂದ ಕೇವಲ ಮೀಟರ್ ದೂರದಲ್ಲಿರುವ ಹೋಟೆಲ್ ಸಂಕೀರ್ಣದೊಳಗೆ ಅವನು ಹಲವಾರು ಸುತ್ತು ಗುಂಡು ಹಾರಿಸಿದನು.

ನಾನು ಅತ್ಯಾಚಾರಿ ಅಲ್ಲ

ಘಟನೆ ನಡೆದ ಕೆಲವು ಗಂಟೆಗಳ ನಂತರ, ಟ್ರಂಪ್ ಭಾನುವಾರ ಸಿಬಿಎಸ್ ನ್ಯೂಸ್‌ನ ನೋರಾ ಒ'ಡೊನೆಲ್ ಅವರೊಂದಿಗೆ ಮಾತನಾಡಿದರು. ಸಂದರ್ಶನದ ಸಮಯದಲ್ಲಿ, ಟ್ರಂಪ್ ಆರಂಭದಲ್ಲಿ ಶಾಂತವಾಗಿ ಕಾಣಿಸಿಕೊಂಡರು ಮತ್ತು ಅವರ ವಾರ್ಷಿಕ ಭೋಜನಕೂಟದಲ್ಲಿ ಅವರನ್ನು ಆತಿಥ್ಯ ವಹಿಸಿದ ಪತ್ರಕರ್ತರೊಂದಿಗೆ ಸೌಹಾರ್ದತೆಯ ಭಾವನೆಯನ್ನು ಹಂಚಿಕೊಂಡರು. ಆದರೆ, ಡೊನೆಲ್ ಅವರು ಶಂಕಿತ ಕೋಲ್ ಅಲೆನ್ ಅವರ ಪ್ರಣಾಳಿಕೆಯ 'ಶಿಶುಕಾಮಿ, ಅತ್ಯಾಚಾರಿ ಮತ್ತು ದೇಶದ್ರೋಹಿಯಾಗಿರುವ ಯಾರನ್ನಾದರೂ ಬಿಟ್ಟು ನಾನು ಇನ್ನುಮುಂದೆ ಸುಮ್ಮನಿರಲು ಸಾಧ್ಯವಿಲ್ಲ' ಎಂಬ ಒಂದು ಸಾಲನ್ನು ಓದಿದಾಗ ಡೊನಾಲ್ಡ್ ಟ್ರಂಪ್ ತುಂಬಾ ಕೋಪಗೊಂಡರು ಮತ್ತು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು.

'ನೀವು ಅದನ್ನು ಓದುತ್ತೀರಿ ಎಂದು ನನಗೆ ತಿಳಿದಿತ್ತು. ಏಕೆಂದರೆ, ನೀವು ಭಯಾನಕ ಜನರು. ಭಯಾನಕ ಜನರು. ಹೌದು, ಆತ ಆ ರೀತಿಯಲ್ಲಿ ಬರೆದಿದ್ದಾನೆ. ಆದರೆ, ನಾನು ಅತ್ಯಾಚಾರಿ ಅಲ್ಲ. ನಾನು ಯಾರನ್ನೂ ಅತ್ಯಾಚಾರ ಮಾಡಿಲ್ಲ' ಎಂದು ಟ್ರಂಪ್ ಹೇಳಿದರು.

'ಓಹ್, ಅವನು ನಿಮ್ಮನ್ನೇ ಉಲ್ಲೇಖಿಸುತ್ತಿದ್ದಾನೆಂದು ನೀವು ಭಾವಿಸುತ್ತೀರಾ?' ಎಂದು ಕೇಳುತ್ತಾ ಓ'ಡೊನೆಲ್ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ಆದರೆ, ಟ್ರಂಪ್ ಅವರ ಪ್ರಶ್ನೆಯನ್ನು ನಿರ್ಲಕ್ಷಿಸಿ, 'ನಾನು ಶಿಶುಕಾಮಿಯೂ ಅಲ್ಲ' ಎಂದು ಘೋಷಿಸಿದರು.

ವರದಿಗಾರನ ಉಲ್ಲೇಖವು ಪರೋಕ್ಷವಾಗಿ ತನ್ನ ಬಗ್ಗೆ ಏನನ್ನಾದರೂ ಸೂಚಿಸುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಭಾವಿಸಿದರು. ನಿರ್ದಿಷ್ಟವಾಗಿ ಅವರನ್ನು ಜೆಫ್ರಿ ಎಪ್ಸ್ಟೀನ್ ಅವರೊಂದಿಗೆ ಜೋಡಿಸುವುದಾಗಿತ್ತು. ಆದರೆ, ಶಂಕಿತನ ಪ್ರಣಾಳಿಕೆಯಲ್ಲಿ ಎಪ್ಸ್ಟೀನ್ ಉಲ್ಲೇಖವನ್ನು ಮಾಡಿಲ್ಲ. ಆ ಕಾರಣದಿಂದಾಗಿ, ಟ್ರಂಪ್ ಕೋಪದಿಂದ ಪ್ರತಿಕ್ರಿಯಿಸಿದರು. ಅವರು ಈ ಉಲ್ಲೇಖವನ್ನು 'ಅನಾರೋಗ್ಯಪೀಡಿತ ವ್ಯಕ್ತಿ'ಯ ಅಸಂಬದ್ಧ ಹೇಳಿಕೆಗಳು ಎಂದು ತಳ್ಳಿಹಾಕಿದರು. ತನಗೆ ಸಂಬಂಧವಿಲ್ಲದ ವಿಷಯಗಳನ್ನು ನನಗೆ ಅನ್ಯಾಯವಾಗಿ ಜೋಡಿಸಲಾಗುತ್ತಿದೆ ಮತ್ತು ನನ್ನನ್ನು ಸಂಪೂರ್ಣವಾಗಿ ದೋಷಮುಕ್ತಗೊಳಿಸಲಾಗಿದೆ' ಎಂದು ಹೇಳಿದರು.

'ನಾನಲ್ಲ, ನಿಮ್ಮ ‘ಇನ್ನೊಂದು ಪಾಳಯದ’ ಜನರು Jeffrey Epstein ಜೊತೆ ಸಂಬಂಧ ಹೊಂದಿದ್ದಾರೆ. ನಾನು ಈ ಸಂದರ್ಶನ ಕೊಡುವುದಕ್ಕೆ ಒಪ್ಪಿಕೊಂಡಾಗಲೇ, ನೀವು ಇಂತಹ ವಿಷಯಗಳನ್ನು ಹೇಳುತ್ತೀರಿ ಎಂದು ಊಹಿಸಿದ್ದೆ. ಆ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದಾನೆ. ನನ್ನ ಬಗ್ಗೆ ಅಂಥ ಆರೋಪಗಳನ್ನು ಓದಿದ್ದು ತಪ್ಪು, ನಿಮಗೆ ನಾಚಿಕೆಯಾಗಬೇಕು. ನಾನು ಆ ರೀತಿಯ ವ್ಯಕ್ತಿ ಅಲ್ಲ ಎಂದ ಅವರು ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿ, ಪತ್ರಕರ್ತನ ಮೇಲೆ ಕೋಪ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧ ಕೊನೆಗೊಳಿಸಿ, ಹಾರ್ಮುಜ್ ಜಲಸಂಧಿ ತೆರೆಯಲು 'ಹೊಸ ಪ್ರಸ್ತಾವನೆ' ಮುಂದಿಟ್ಟ ಇರಾನ್!

ಜನಸಂಖ್ಯೆ ಅಸಮಾನತೆಯಿಂದ 1947ರಲ್ಲಿ ದೇಶ ವಿಭಜನೆಯಾಯಿತು: RSS ನಾಯಕ

'ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್': ಗುಂಡಿನ ದಾಳಿಗೆ 10 ನಿಮಿಷ ಮೊದಲು ಕುಟುಂಬಕ್ಕೆ ಪತ್ರ ಕಳುಹಿಸಿದ್ದ ವೈಟ್ ಹೌಸ್ ಶೂಟೌಟ್ ಪ್ರಕರಣದ ಆರೋಪಿ

IPL 2026: 'ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಕ್ಕೆ ಔಟ್: ಕೆಕೆಆರ್ ಆಕ್ರೋಶ, ಬೌಂಡರಿ ಲೈನ್ ನಲ್ಲಿ ರಘುವಂಶಿ ಮಾಡಿದ್ದೇನು? VIDEO ನೋಡಿ...

ಇರಾನ್ ದಾಳಿಯ ನಡುವೆ ಇಸ್ರೇಲ್ ನೆರವು ಕೋರಿದ UAE! Iron Dome ವಾಯು ರಕ್ಷಣಾ ವ್ಯವಸ್ಥೆ ರವಾನೆ

SCROLL FOR NEXT